MCA ಅಧಿಕಾರಿಗಳಿಂದ ಶಾಕಿಂಗ್ ಹೇಳಿಕೆ; ಗೊಂದಲದಲ್ಲಿ ಟೀಂ ಇಂಡಿಯಾ..!
- ಮ್ಯಾನೇಜ್ಮೆಂಟ್ ಮತ್ತು ಬೋರ್ಡ್ಗೆ ಹೊಸ ಟೆನ್ಶನ್
- ಬೆಂಗಳೂರಿನಲ್ಲಿ ಪೇಸ್ ಫ್ರೆಂಡ್ಲಿ ಪಿಚ್ನಲ್ಲಿ ಸೋಲು
- ಪುಣೆಯಲ್ಲಿ ಸ್ಪಿನ್ ಫ್ರೆಂಡ್ಲಿ ಪಿಚ್ನಲ್ಲೂ ಸೋಲಿನ ದರ್ಶನ
ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ಗೂ ಮುನ್ನ ಟೀಮ್ ಇಂಡಿಯಾಗೆ ಹೊಸ ಟೆನ್ಶನ್ ಶುರುವಾಗಿದೆ. ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲಿನ ಮುಖಭಂಗದ ಬಳಿಕ ಟೀಮ್ ಮ್ಯಾನೇಜ್ಮೆಂಟ್ಗೆ ದಿಕ್ಕೇ ತೋಚದಂತಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ಗಳಲ್ಲಿ ಸೋಲುಂಡ ಟೀಮ್ ಇಂಡಿಯಾ ಸರಣಿ ಕೈ ಚೆಲ್ಲಿದೆ. ಇದ್ರೊಂದಿಗೆ ಭಾರತದ ನೆಲದಲ್ಲಿನ ಸುದೀರ್ಘ 12 ವರ್ಷಗಳ ಟೆಸ್ಟ್ ಸರಣಿ ಗೆಲುವಿನ ಯಾತ್ರೆಗೆ ಬ್ರೇಕ್ ಬಿದ್ದಿದೆ. ಹೀನಾಯ ಸೋಲುಂಡು ಮುಖಭಂಗ ಅನುಭವಿಸಿದ್ದು, ಈಗ ಮುಗಿದ ಕಥೆ. ಮುಂದಿನ 3 ಟೆಸ್ಟ್ ಗೆದ್ದು ವೈಟ್ವಾಷ್ ಮುಖಭಂಗದಿಂದ ಪಾರಾಗೋ ಯತ್ನ ಸದ್ಯ ಟೀಮ್ ಇಂಡಿಯಾದಲ್ಲಿ ನಡೀತಿದೆ.
ಟೀಮ್ ಇಂಡಿಯಾದಲ್ಲಿ ಗೊಂದಲ
ಬೆಂಗಳೂರು ಹಾಗೂ ಪುಣೆಯಲ್ಲಿ ಮಕಾಡೆ ಮಲಗಿದ ಟೀಮ್ ಇಂಡಿಯಾ ಮುಂದೆ ಇದೀಗ ಮುಂಬೈನಲ್ಲಿ ಮಾನ ಉಳಿಸಿಕೊಳ್ಳೋ ಕಠಿಣ ಸವಾಲಿದೆ. ಈ ಟಫ್ ಟಾಸ್ಕ್ ಮುಂದಿರೋವಾಗ್ಲೇ ಬಿಸಿಸಿಐಗೆ ಹೊಸ ಟೆನ್ಶನ್ ಶುರುವಾಗಿದೆ. ಬೆಂಗಳೂರು ಹಾಗೂ ಪುಣೆ ಟೆಸ್ಟ್ನ ಸೋಲಿನ ಬಳಿಕ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಬಿಸಿಸಿಐ ಬಾಸ್ಗಳಿಗೆ ಪಿಚ್ ಕನ್ಪ್ಯೂಶನ್ ಶುರುವಾಗಿದೆ.
ಬೆಂಗಳೂರಲ್ಲಿ ಪೇಸ್ ಫ್ರೆಂಡ್ಲಿ ಪಿಚ್ನಲ್ಲಿ ಸೋಲು
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಪಿಚ್ ಪೇಸರ್ಗೆ ಹೆಚ್ಚು ಸಹಾಯ ಮಾಡಿತ್ತು. ಪುಣೆಯಲ್ಲಿ ನಡೆದ 2 ಟೆಸ್ಟ್ನ ಪಿಚ್ ಸ್ಪಿನ್ನರ್ಸ್ಗೆ ಹೆಚ್ಚು ಸಹಾಯ ಮಾಡ್ತು. ಆ ಎರಡೂ ಪಿಚ್ಗಳಲ್ಲಿ ಭಾರತದ ಆಟಗಾರರು ಮಕಾಡೆ ಮಲಗಿದ್ರೆ, ನ್ಯೂಜಿಲೆಂಡ್ ಆಟಗಾರರು ದರ್ಬಾರ್ ನಡೆಸಿದ್ರು. ಹೀಗಾಗಿ ಮುಂಬೈ ಟೆಸ್ಟ್ಗೆ ಯಾವ ತರ ಪಿಚ್ ತಯಾರು ಮಾಡಬೇಕು ಅನ್ನೋ ಗೊಂದಲ ಶುರುವಾಗಿದೆ.
ನ್ಯೂಜಿಲೆಂಡ್ ರೆಡಿ..!
ಸರಣಿಯ ಮೊದಲ 2 ಪಂದ್ಯಗಳಲ್ಲಿ ಪೇಸ್ ಹಾಗೂ ಸ್ಪಿನ್ ಪಿಚ್ಗೆ ತಕ್ಕಂತೆ ನ್ಯೂಜಿಲೆಂಡ್ ಆಡಿದೆ. ನಾಯಕ ಟಾಮ್ ಲಾಥಮ್ ಮತ್ತು ಮ್ಯಾನೇಜ್ಮೆಂಟ್ ಪರ್ಫೆಕ್ಟ್ ಆಗಿ ಪಿಚ್ ರೀಡ್ ಮಾಡಿದ್ದಲ್ಲದೇ, ಕಂಡೀಷನ್ಸ್ಗೆ ತಕ್ಕಂತೆ ಟೀಮ್ ಕಾಂಬಿನೇಷನ್ ಸೆಲೆಕ್ಟ್ ಮಾಡಿ ಆಟವನ್ನ ಆಡ್ತು. ಬೆಂಗಳೂರಲ್ಲಿ ಕಿವೀಸ್ ಪೇಸರ್ಸ್ ವಿಕೆಟ್ ಬೇಟೆಯಾಡಿದ್ರೆ, ಪುಣೆಯಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ಸ್ ಸಖತ್ ಆಟವಾಡಿದರು. ಬ್ಯಾಟ್ಸ್ಮನ್ಗಳು ಎರಡೂ ಕಂಡಿಷನ್ಸ್ನಲ್ಲಿ ಭಾರತೀಯ ಬೌಲರ್ಸ್ನ ಕಾಡಿದ್ರು.
ಭಾರತ ತಂಡದ ಆಟಗಾರರು ತಾವೇ ತಯಾರಿಸಿದ ಖೆಡ್ಡಾಗೆ ತಾವೇ ಬಿದ್ರು. ಸರಣಿ ಸೋತಿರೋ ಟೀಮ್ ಇಂಡಿಯಾಗೆ, ವೈಟ್ವಾಷ್ ಮುಖಭಂಗದಿಂದ ಪಾರಾಗಲು ದಾರಿಯೇ ಕಾರಣದಂತಾಗಿದೆ. ಪೇಸ್ ಫ್ರೆಂಡ್ಲಿ ಪಿಚ್ ಮಾಡೋದಾ? ಸ್ಪಿನ್ ಫ್ರೆಂಡ್ಲಿ ಪಿಚ್ ಮಾಡೋದಾ? ಎಂಬ ಪ್ರಶ್ನೆಗೆ ಉತ್ತರವೇ ಸಿಗದಂತಾಗಿದೆ. ಟೆಸ್ಟ್ ಆರಂಭಕ್ಕೆ ಕೇವಲ 3 ದಿನ ಬಾಕಿ ಉಳಿದಿದೆ. ಮುಂಬೈನ ವಾಂಖೆಡೆ ಮೈದಾನದ ಪಿಚ್ ಕ್ಯುರೇಟರ್ಗಾಗಲಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗಾಗಲಿ ಯಾವ ರೀತಿ ಪಿಚ್ ಬೇಕು ಅನ್ನೋ ಸೂಚನೆಯೇ ಬಂದಿಲ್ಲವಂತೆ.
‘ಯಾವುದೇ ಸೂಚನೆ ಬಂದಿಲ್ಲ’
ಭಾರತ-ನ್ಯೂಜಿಲೆಂಡ್ ನಡುವಿನ 3ನೇ ಟೆಸ್ಟ್ ಆಯೋಜನೆಗೆ ವಾಂಖೆಡೆ ಮೈದಾನ ಸಿದ್ಧವಾಗಿದೆ. ಫಾಸ್ಟ್ ಟ್ರ್ಯಾಕ್ ಮಾಡಬೇಕಾ.? ಸ್ಪಿನ್ ಟ್ರ್ಯಾಕ್ ಮಾಡಬೇಕಾ? ಎಂಬ ಬಗ್ಗೆ ಗೊಂದಲವಿದೆ. ಈವರೆಗೂ ಟೀಮ್ ಮ್ಯಾನೇಜ್ಮೆಂಟ್ ಅಥವಾ ಬೋರ್ಡ್ನಿಂದ ಯಾವುದೇ ಸೂಚನೆ ಬಂದಿಲ್ಲ-MCA ಅಧಿಕಾರಿ
ಮುಂಬೈನಲ್ಲಿ ಟಾಸ್ ಗೆದ್ದವರೇ ಬಾಸ್
ಮುಂಬೈನ ವಾಂಖೆಡೆ ಪಿಚ್ನಲ್ಲಿ ಟಾಸ್ ಗೆದ್ದವರೇ ಬಾಸ್ ಅನ್ನೋದನ್ನು ಈ ಹಿಂದಿನ ಟ್ರ್ಯಾಕ್ ರೆಕಾರ್ಡ್ ಹೇಳ್ತಿದೆ. ವಾಂಖೆಡೆಯಲ್ಲಿ ರೆಡ್ ಸಾಯ್ಲ್ ಪಿಚ್ಗಳಿದ್ದು ಆರಂಭಿಕ ದಿನಗಳಲ್ಲಿ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಸಹಾಯ ಮಾಡಲಿದೆ. ದಿನ ಕಳೆದಂತೆ ಟರ್ನ್ ಅಂಡ್ ಬೌನ್ಸ್ನ ಪಿಚ್ ಪ್ರೊಡ್ಯೂಸ್ ಮಾಡಲಿದೆ. ಇದ್ರಿಂದ ಸ್ಪಿನ್ನರ್ಗಳಿಗೆ ಹೆಚ್ಚಿನ ಸಹಾಯ ಸಿಗಲಿದೆ. ಹೀಗಾಗಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳುವ ತಂಡಕ್ಕೆ
ಅಡ್ವಾಂಟೇಜ್ ಹೆಚ್ಚು.
ಒಟ್ಟಿನಲ್ಲಿ ಸರಣಿ ಗೆದ್ದಿರುವ ನ್ಯೂಜಿಲೆಂಡ್ ನೀವು ಯಾವುದೇ ಪಿಚ್ ಕೊಟ್ಟರೂ ನಾವು ಯುದ್ಧಕ್ಕೆ ರೆಡಿ ಎಂಬ ಲೆಕ್ಕಾಚಾರದಲ್ಲಿದೆ. ವೈಟ್ವಾಷ್ ಮುಖಭಂಗದಿಂದ ಪಾರಾಗುವ ಒತ್ತಡಕ್ಕೆ ಸಿಲುಕಿರೋ ಟೀಮ್ ಇಂಡಿಯಾಗೆ ಪಿಚ್ ತಯಾರು ಮಾಡೋದೇ ದೊಡ್ಡ ಗೊಂದಲವಾಗಿ ಕಾಡ್ತಿದೆ. ಪೇಸ್ ಹಾಗೂ ಸ್ಪಿನ್ ಎರಡೂ ಪಿಚ್ನಲ್ಲಿ ಮಕಾಡೆ ಮಲಗಿರೋ ರೋಹಿತ್ ಪಡೆ ಮುಂಬೈನಲ್ಲಿ ಯಾವ ತೆರನಾದ ಪಿಚ್ ತಯಾರಿಗೆ ಸೂಚನೆ ನೀಡುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.