ಭಾರತೀಯರಿಗೆ ಡೇಟಿಂಗ್ ಆ್ಯಪ್ ಆಗಿ ಬದಲಾಗುತ್ತಿರುವ ಲಿಂಕ್ಡ್ಇನ್
ಡೇಟಿಂಗ್ ಆ್ಯಪ್ನಿಂದ ಬೇಸತ್ತ ಜನರು ಲಿಂಕ್ಡ್ಇನ್ ಮೊರೆ ಹೋಗುತ್ತಿದ್ದಾರೆ
ಉದ್ಯೋಗಗಳಿವೆ ಸೃಷ್ಟಿಯಾಗಿದ್ದ ಆ್ಯಪ್ ಡೇಟಿಂಗ್ ಆಪ್ ಆಗಿದ್ದು ಹೇಗೆ?
9 ವರ್ಷಗಳ ಹಿಂಧೆ ಕಟೈ ಒರ್ಟಮನ್ ಡೊಬ್ಲೆ ಎಂಬ ಕಾರ್ಪೊರೆಟ್ ಸಂಸ್ಥೆಯಲ್ಲಿ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಲಿಂಕ್ಡ್ ಇನ್ನಲ್ಲಿ ನಾನು ಹೇಗೆ ನನ್ನ ಗಂಡನನ್ನು ಭೇಟಿ ಮಾಡಿದೆ ಎಂಬ ಪೋಸ್ಟ್ ಶೇರ್ ಮಾಡಿದ್ದರು. ಇದು ಭಾರೀ ವೈರಲ್ ಆಗಿತ್ತು. ಯಾಕಂದ್ರೆ ನಮ್ಮ ಜೀವನ ಸಂಗಾತಿಯನ್ನ ಲಿಂಕ್ಡ್ಇನ್ನಲ್ಲಿ ಹುಡುಕುವುದು ಆ ದಿನಗಳಲ್ಲಿ ಅಸಹಜವೇ ಆಗಿತ್ತು ಬಿಡಿ.ಹೀಗಾಗಿ ಈ ಒಂದು ಪೋಸ್ಟ್ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿತ್ತು.
ಕಟೈಗೆ ಲಿಂಕ್ಡ್ ಇನ್ನಲ್ಲಿ ಹೊಸ ಜಾಬ್ ಹುಡುಕುವವರನ್ನು ನೋಡುವುದು ಒಂದು ಕೆಲಸವಾಗಿತ್ತು. ಯಾಕಂದ್ರೆ ಅವರ ಕೆಲಸವೇ ಹೊಸ ಉದ್ಯೋಗಿಗಳನ್ನು ತಮ್ಮ ಕಂಪನಿಗೆ ನೇಮಕ ಮಾಡಿಕೊಳ್ಳುವ ರಿಕ್ರೂಟರ್ ಕಾರ್ಯ. ಅದೇ ವೇಳೆ ತನಗೆ ಸೂಟ್ ಆಗುವ ಹುಡುಗನನ್ನು ಕೂಡ ಕಟೈ ಅಲ್ಲಿ ನೋಡುತ್ತಿದ್ದರು. ಇದೇ ಸಮಯದಲ್ಲಿ ಕಂಟೆಂಟ್ ರೈಟರ್ ಉದ್ಯೋಗ ಹುಡುಕುತ್ತಿದ್ದ ಒಬ್ಬ ವ್ಯಕ್ತಿಯನ್ನು ಕಂಡ ಕಟೈ ಇವನೇ ನನಗೆ ಪರ್ಫೆಕ್ಟ್ ಮ್ಯಾಚ್ ಎಂದು ಅನಿಸಿ ಅವರನ್ನೇ ಮದುವೆ ಕೂಡ ಆದರು. ಈಗ ಅವರ ಮದುವೆಗೆ ದಶಕದ ಸಂಭ್ರಮ. ಕಟೈ ಪದೇ ಪದೇ ಲಿಂಕ್ಡ್ಇನ್ನಲ್ಲಿ ಈ ಪೋಸ್ಟ್ ಹಾಕಿ ತಮ್ಮ ಮಧುರ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಆದ್ರೆ ಈಗ ಲಿಂಕ್ಡ್ಇನ್ನಲ್ಲಿ ಕಟೈಳ ಹಾಗೆಯೇ ಪ್ರೀತಿ ಅರಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಲಿಂಕ್ಡ್ಇನ್ ಅವರವರ ಗುರಿ, ವಿದ್ಯಾರ್ಹತೆ, ವ್ಯಕ್ತಿತ್ವ ಎಲ್ಲವನ್ನೂ ಒಬ್ಬರಿಂದ ಇನ್ನೊಬ್ಬರಿಗೆ ಗೊತ್ತಾಗುವಂತೆ ಸಂಪರ್ಕ ಕಲ್ಪಿಸುವ ಒಂದು ಸೇತುವೆ. ಇಲ್ಲಿ ಲಕ್ಷಾಂತರ ಕೋಟ್ಯಾಂತರ ಜನರು ತಮ್ಮ ಬದುಕಿನ ವೃತ್ತಾಂತವನ್ನೇ ತೆರೆದಿಡುತ್ತಾರೆ. ಹೀಗಾಗಿ ಈಗ ಇದು ಒಂದು ಡೇಟಿಂಗ್ ಆ್ಯಪ್ ಆಗಿ ಮಾರ್ಪಾಡಾಗುತ್ತಿದೆಯಾ ಎಂಬ ಅನುಮಾನ ದಟ್ಟವಾಗುತ್ತಿದೆ. ಲಿಂಕ್ಡ್ಇನ್ ತನ್ನನ್ನು ತಾನು ಪಕ್ಕಾ ಪ್ರೊಫೆಷನಲ್ ಆ್ಯಪ್ ಎಂದು ಹೇಳಿಕೊಂಡರೂ ಕೂಡ ಅಲ್ಲಿ ಹುಡುಗ ಹುಡುಗಿಯ, ಹುಡುಗಿ ಹುಡುಗನ ಪ್ರೀತಿಯನ್ನು ಅರಸಿ ಬರುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿವೆ.
ಇತ್ತೀಚಿಗೆ ನಡೆದ ಅಧ್ಯಯನ ಹೇಳುವ ಪ್ರಕಾರ ಶೇಕಡಾ 67 ರಷ್ಟು 35 ರಿಂದ 40 ವರ್ಷದೊಳಗಿನ ಜನರು ಲಿಂಕ್ಡ್ಇನ್ನಲ್ಲಿ ತಮ್ಮ ಸಂಗಾತಿಯೊಂದಿಗೆ ಡೇಟ್ಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರಂತೆ. ಈ ಒಂದು ಟ್ರೆಂಡ್ ಈಗ 20 ರಿಂದ 40 ವರ್ಷದೊಳಗಿನ ಶೇಕಡಾ 52 ರಷ್ಟು ಜನರು ಲಿಂಕ್ಡ್ಇನ್ನಲ್ಲಿ ತಮ್ಮ ಸಂಗಾತಿಯನ್ನು ಹುಡುಕುವ ಕೆಲಸ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಲಿಂಕ್ಡ್ಇನ್ ಅನಿರೀಕ್ಷಿತವಾಗಿ ದಿನ ಕಳೆದಂತೆ ಒಂದು ಡೇಟಿಂಗ್ ಆ್ಯಪ್ ಆಗಿ ಮಾರ್ಪಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.ಇನ್ನು ಭಾರತೀಯರು ಕೂಡ ಈ ಒಂದು ಆ್ಯಪ್ನ್ನು ಡೇಟಿಂಗ್ ಆ್ಯಪ್ ಆಗಿ ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಅನೇಕ ಮಹಿಳೆಯರು ಇಲ್ಲಿ ವೃತ್ತಿಪರವಲ್ಲ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ. ಅನೇಕ ಪ್ರಪೊಸಲ್ಗಳು ಅವರಿಗೆ ಬರುತ್ತಿವೆ.
ಇದಕ್ಕೆಲ್ಲಾ ಪ್ರಮುಖ ಕಾರಣ ಅಂದ್ರೆ ಜನರು ಡೇಟಿಂಗ್ ಆ್ಯಪ್ಗಳಿಂದ ಬೇಸತ್ತಿದ್ದು. ಅತಿಯಾಗಿ ಭಾವಪರವಶಗೊಳಿಸುವ ಮೆಸೇಜ್ಗಳು ಮತ್ತು ಖೇದ ತರಿಸುವ ಮ್ಯಾಚಿಂಗ್ಗಳಿಂದಾಗಿ ಆಧುನಿ ಡೇಟಿಂಗ್ ಆ್ಯಪ್ಗಳಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಪರ್ಯಾಯವೊಂದನ್ನು ಬೇಡುತ್ತಿದ್ದ ಜನರಿಗೆ ಸಿಕ್ಕಿದ್ದು ಈಗ ಲಿಂಕ್ಡ್ಇನ್. ಇಲ್ಲಿ ಅನೇಕರು ತಾವು ನಿರೀಕ್ಷಿಸಿದ್ದ ಹಾಗೂ ನಿರೀಕ್ಷಿಸುತ್ತಿರುವ ಸಂಗಾತಿಗಳು ಕಾಣ ಸಿಗುತ್ತಾರೆ. ಸರಳವಾಗಿ ಸಂಪರ್ಕಕ್ಕೆ ಬರುತ್ತಾರೆ ಹೀಗಾಗಿ ಸದ್ಯ ಲಿಂಕ್ಡ್ಇನ್ ಒಂದು ಹೊಸ ಡೇಟಿಂಗ್ ಆ್ಯಪ್ ಆಗಿ ಪರಿವರ್ತನೆಗೊಂಡಿದೆ.



