ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಯುವ ಕನ್ನಡಿಗ ಯಾರು?
ಪಾಂಡ್ಯ, ರಿಂಕು ಸಿಂಗ್, ಅಭಿಷೇಕ್ ಸೇರಿ ಎಲ್ಲ ಪ್ಲೇಯರ್ಸ್ ಇದ್ದಾರೆ
ಹಂಗಾಮಿ ಕೋಚ್ ಕೆಲಸ ಮಾಡುವ ಮಾಜಿ ಪ್ಲೇಯರ್ ಯಾರು..?
ದಕ್ಷಿಣ ಆಫ್ರಿಕಾದ ವಿರುದ್ಧ ಟೀಮ್ ಇಂಡಿಯಾ 4 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಇಂದು ಆಫ್ರಿಕಾದ ಡರ್ಬನ್ ತಲುಪಿದೆ. ಇನ್ನೊಂದು ವಿಶೇಷ ಎಂದರೆ ತಂಡದಲ್ಲಿ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಕೂಡ ಇದ್ದು ಟೀಮ್ ಇಂಡಿಯಾಕ್ಕೆ ಡೆಬ್ಯು ಮಾಡಲಿದ್ದಾರೆ.
ನಾಯಕ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಟಿ20 ಸರಣಿ ಆಡಲು ಸೌತ್ ಆಫ್ರಿಕಾದ ಡರ್ಬನ್ ನಗರವನ್ನ ಇಂದು ತಲುಪಿತು. ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಭಿಷೇಕ್ ಶರ್ಮಾ, ರವಿ ಬಿಷ್ಣೋಯಿ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಸೇರಿದಂತೆ ಉಳಿದ ಎಲ್ಲಾ ಆಟಗಾರರು ವಿಮಾನ ಪ್ರಯಾಣದ ಮೂಲಕ ಆಫ್ರಿಕಾವನ್ನ ತಲುಪಿದ್ದಾರೆ. ಸೌತ್ ಆಫ್ರಿಕಾದಲ್ಲಿ ಟೀಮ್ ಇಂಡಿಯಾ 4 ಪಂದ್ಯಗಳ ಟಿ20 ಸರಣಿ ಆಡಲಿದೆ. ಮೊದಲ ಪಂದ್ಯ ನವೆಂಬರ್ 8ರಂದು ಡರ್ಬನ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಡರ್ಬನ್ ತಲುಪಿದ ಟೀಮ್ ಇಂಡಿಯಾದ ಆಟಗಾರರು ಕೆಲ ಸಮಯವನ್ನ ಕ್ವಿಜ್ ಪ್ರಶ್ನೆಗಳನ್ನು ಕೇಳುವ ಮೂಲಕ ಎಂಜಾಯ್ ಮಾಡಿದರು. ಅಭಿಶೇಕ್ ಶರ್ಮಾ, ಅಕ್ಷರ್ ಪಟೇಲ್ ಇಬ್ಬರು ಪ್ರಶ್ನೆ ಕೇಳುತ್ತಿದ್ದಂತೆ ತಿಲಕ್ ವರ್ಮಾ, ವೈಶಾಕ್ ವಿಜಯ್, ಆರ್ಷ್ದೀಪ್ ಸೇರಿದಂತೆ ಇತರರು ಉತ್ತರ ನೀಡಿದರು. ಇನ್ನು ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಅವರು ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ನಿನ್ನೆ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದ ಯಂಗ್ ಟೀಮ್ ಇಂಡಿಯಾ ಇಂದು ಆಫ್ರಿಕಾವನ್ನು ತಲುಪಿದೆ.
ಭಾರತದ T20 ತಂಡದ ಆಟಗಾರರು
ಸೂರ್ಯಕುಮಾರ್ (ಕ್ಯಾಪ್ಟನ್), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯ್ ಕುಮಾರ್ ವೈಶಾಕ್, ಆವೇಶ್ ಖಾನ್, ಯಶ್ ದಯಾಳ್.

