BBK11: ಭಲೇ ಹನುಮಂತ.. ಕಿಲಾಡಿ ಆಟಕ್ಕೆ ಬೆಚ್ಚಿ ಬಿದ್ದ ಬಿಗ್ ಬಾಸ್‌ ಮನೆಯ ಸದಸ್ಯರು; ಆಗಿದ್ದೇನು?

  • ಬಿಗ್​ಬಾಸ್​ ಮನೆಗೆ ಮೊದಲ ವೈಲ್ ಕಾರ್ಡ್​ ಆಗಿ ಎಂಟ್ರಿ ಕೊಟ್ಟಿದ್ದ ಗಾಯಕ
  • ಮೊದ ಮೊದಲು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದ ಹನುಮಂತ
  • ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಗೆದ್ದು ಬೀಗಿದ ಫೇಮಸ್​ ಗಾಯಕ ಹನುಮಂತ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರ ನಾಲ್ಕನೇ ಕ್ಯಾಪ್ಟನ್​ ಆಗಿ ಗಾಯಕ ಹನುಮಂತ ಆಯ್ಕೆ ಆಗಿದ್ದಾರೆ. ಬಿಗ್​ಬಾಸ್​ ಮನೆಗೆ ವೈಲ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ​ ಹನುಮಂತ ಆಟ ನೋಡಿ ಶಾಕ್​ ಆಗಿದ್ದಾರೆ.

ಮೊದಲು ಬಿಗ್​ ಮನೆಗೆ ಬರುತ್ತಿದ್ದಂತೆ ಹನುಮಂತ ಅವರಿಗೆ ಅದೃಷ್ಟ ಒಲಿದಿತ್ತು. ಇದೀಗ ಬಂದ ಮೊದಲ ವಾರವೇ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ. ಅದು ಕೂಡ ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಅಚ್ಚರಿಯ ರೀತಿಯಲ್ಲಿ ಗೆದ್ದು ಬಂದಿದ್ದಾರೆ.

ಮನೆಯ ಕೆಲ ಸ್ಪರ್ಧಿಗಳು ಈ ಕ್ಯಾಪ್ಟನ್ಸಿ ಆಟವನ್ನು ಗೆಲ್ಲಲು ಹಲವಾರು ಪ್ರಯತ್ನಗಳನ್ನು ಮಾಡಿದ್ದರು. ಆದರೆ ಅವರ ಎಲ್ಲ ಪ್ಲಾನ್​​ಗಳು ವರ್ಕ್​ ಆಗಲಿಲ್ಲ. ಆದರೆ ಕೊನೆಗೆ ತನ್ನ ಆಟದ ಮೇಲೆ ಹಾಗೂ ತಮ್ಮ ಫೋಟೋ ಮೇಲೆ ಗಮನವಿಟ್ಟು ಬಿಗ್​ಬಾಸ್​ ಕ್ಯಾಪ್ಟನ್ ಆಗಿ ಗೆದ್ದು ಬೀಗಿದ್ದಾರೆ.

ಇನ್ನು ಹನುಮಂತನ ಆಟ ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಅಲ್ಲದೇ ಹನುಮಂತ ಏನೂ ಅಲ್ಲ ಅಂತ ಹೇಳಿದ್ದವರು ಬಾಯಿ ಮುಚ್ಚಿಕೊಳ್ಳುವಂತೆ ಮಾಡಿದ್ದಾರೆ. ಸದ್ಯ ನಾಲ್ಕನೇ ವಾರಕ್ಕೆ ಕ್ಯಾಪ್ಟನ್​ ಆಗಿದ್ದಕ್ಕಾಗಿ ಮನೆ ಮಂದಿ ಅಭಿನಂದನೆ ತಿಳಿಸಿದ್ದಾರೆ. ಸದ್ಯ ಈ ಮುಂದಿನ ವಾರ ಬಿಗ್​ಬಾಸ್​ ಮನೆಯನ್ನು ಹಾಗೂ ಸ್ಪರ್ಧಿಗಳನ್ನು ಹೇಗೆ ನಿಭಾಯಿಸುತ್ತಾರೆ ಅಂತ ಕಾದು ನೋಡಬೇಕಿದೆ.

TOP