ಬಿಗ್ ಬಾಸ್ ಮನೆಯ ಎಲ್ಲರ ಅಸಲಿ ಮುಖವಾಡ ಬಯಲು
ಗೌತಮಿ, ಮೋಕ್ಷಿತಾ ಬಗ್ಗೆ ಮಾತನಾಡಿದ್ದ ತ್ರಿವಿಕ್ರಮ್ ವಿಡಿಯೋ
ಮೋಕ್ಷಿತಾ ಅವರ ಸವಾಲಿಗೆ ಬದಲಾಯ್ತು ತ್ರಿವಿಕ್ರಮ್ ಗೇಮ್ ಪ್ಲಾನ್!ಬಿಗ್ ಬಾಸ್ ಮನೆಯ ಎಲ್ಲರ ಅಸಲಿ ಮುಖವಾಡ ಬಯಲು
ಗೌತಮಿ, ಮೋಕ್ಷಿತಾ ಬಗ್ಗೆ ಮಾತನಾಡಿದ್ದ ತ್ರಿವಿಕ್ರಮ್ ವಿಡಿಯೋ
ಮೋಕ್ಷಿತಾ ಅವರ ಸವಾಲಿಗೆ ಬದಲಾಯ್ತು ತ್ರಿವಿಕ್ರಮ್ ಗೇಮ್ ಪ್ಲಾನ್!
ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿ ದಿನ ಕಳೆದಂತೆ ಟಫ್ ಫೈಟ್ ಜೋರಾಗ್ತಿದೆ. ಇಲ್ಲಿ ಯಾರಿಗೆ ಯಾರು ಸ್ನೇಹಿತರು, ಯಾರು ಶತ್ರುಗಳು ಅನ್ನೋ ಅಸಲಿ ಮುಖವಾಡ ಬಯಲಾಗುತ್ತಿದೆ. ಈ ವಾರದಲ್ಲಿ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಬಿಗ್‌ಬಾಸ್ ಬಿಗ್ ಶಾಕ್ ಕೊಟ್ಟಿದೆ.
ಬಿಗ್ ಬಾಸ್ ಮನೆಯಲ್ಲಿ ಯಾರನ್ನ ಯಾರು ನಂಬಲೇ ಬಾರದು. ಈ ಮಾತಿಗೆ ಸಾಕ್ಷಿಯಾಗಿ ಬೆನ್ನ ಹಿಂದೆ ಮಾತಾಡಿದ್ದ ವಿಡಿಯೋ ಕ್ಲಿಪ್‌ಗಳನ್ನ ಮನೆಯವ್ರ ಮುಂದೆ ಪ್ಲೇ ಮಾಡಲಾಗಿದೆ. ಈ ವಿಡಿಯೋ ನೋಡಿದ ಬಿಗ್ ಬಾಸ್ ಮಂದಿ ಶಾಕ್ ಆಗಿದ್ದು, ಗೋಮುಖ ವ್ಯಾಘ್ರ ಯಾರು ಅನ್ನೋ ಆಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಮೊದಲಿಗೆ ಶಿಶಿರ್ ಅವರ ಬಳಿ ಐಶ್ವರ್ಯಾ ಅವರು ಭವ್ಯ ಬಗ್ಗೆ ಮಾತಾಡಿದ್ದಾರೆ. ಕಣ್ಣಿಗೆ ಕಾಣಿಸುತ್ತಾ ಇದೆ ಅವರ ಹೊಟ್ಟೆ ಕಿಚ್ಚು ಎಂದು ಐಶ್ವರ್ಯಾ ಹೇಳಿದ್ದು, ಬೆನ್ನ ಹಿಂದೆ ಮಾತನಾಡಿದ ಈ ವಿಡಿಯೋ ಮನೆಯಲ್ಲಿ ಹಲ್ ಚಲ್ ಎಬ್ಬಿಸಿದೆ. ಮನೆ ಮಂದಿಯ ಈ ಮುಖವಾಡ ನೋಡಿ ಹನುಮಂತ ಫುಲ್ ಖುಷ್ ಆಗಿದ್ದಾನೆ.

ಮೋಕ್ಷಿತಾ, ಗೌತಮಿ ಅವರನ್ನು ಹಕ್ಕಿ ಅಂದಿರೋ ತ್ರಿವಿಕ್ರಮ್ ಮಾತು ಬಿಗ್ ಬಾಸ್ ಮನೆಯಲ್ಲಿ ಹೊಸ ಕಿಚ್ಚು ಹಚ್ಚಿದೆ. ತ್ರಿವಿಕ್ರಮ್ ಮಾತು ಮೋಕ್ಷಿತಾ ಅವರ ಮನಸ್ಸಿಗೆ ಚುಚ್ಚಿದ್ದು ಉಗ್ರವಾತಾರ ತಾಳಿದ್ದಾರೆ. ಅಕ್ಕ-ತಂಗಿ ಜೊತೆ ಮಾತನಾಡಿದವರು ಹಕ್ಕಿ ಅಂತ ಮಾತಾಡುತ್ತಾರಾ. ಅವರ ತನ ಏನು ಅನ್ನೋದನ್ನ ತೋರಿಸುತ್ತೆ. ಅತಿ ವಿನಯಮ್ ದೂರ್ತ ಲಕ್ಷಣಂ ಅಂತಾರಲ್ಲ ಅದು ಇದೇನೆ. ಗೋಮುಖ ವ್ಯಾಘ್ರ ಅಂತ ಕೊಟ್ಟೆ ಅದಕ್ಕೆ ನಾನು ಖಂಡಿತ ಪಶ್ಚಾತ್ತಾಪ ಪಡುವುದಿಲ್ಲ ಎಂದು ಮೋಕ್ಷಿತಾ ಸವಾಲು ಹಾಕಿದ್ದಾರೆ.
ಮೋಕ್ಷಿತಾ ಅವರ ಈ ಸವಾಲು ಸ್ವೀಕರಿಸಿರುವ ತ್ರಿವಿಕ್ರಮ್ ಅವರು ಎಲ್ಲಿ, ಎಲ್ಲಿ ಬಿಟ್ಟೆ ಹುಳನಾ ಎಂದು 1 2 3 4 ಎಣಿಸಿದ್ದಾರೆ. ಯಾವುದಾದ್ರು ದೊಡ್ಡದು ಏನಾದ್ರು ಇದ್ರೆ ಹೇಳಕ್ಕ ಗೋಮುಖ ವ್ಯಾಘ್ರಕ್ಕಿಂತ. ಇಷ್ಟು ದಿನ ಹಾಗೆ ಇರಲಿಲ್ಲ ಇನ್ನ ಮೇಲೆ ಹಾಗೇ ಇರ್ತೀನಿ ಎಂದು ತಮ್ಮ ಹೊಸ ಗೇಮ್ ಶುರು ಮಾಡಿದ್ದಾರೆ.