ಡಯಾಬೀಟೀಸ್ ತಡೆಯಲು ಇಲ್ಲಿ ಇವೆ ಆರಂಭಿಕ ಮಾರ್ಗಗಳು
ನವಜಾತು ಶಿಶುವಿನ ಆರಂಭಿಕ ದಿನಗಳನ್ನು ಸರಿಯಾಗಿ ನಿರ್ವಹಿಸಿ
ಮೊದಲ ಸಾವಿರ ದಿನ ಮಗುವಿಗೆ ಸಕ್ಕರೆ ಅಂಶದ ಪದಾರ್ಥ ನೀಡಬೇಡಿ
ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ಡಯಾಬೀಟೀಸ್ನಿಂದ ಜನರು ನರಳುತ್ತಿದ್ದಾರೆ. ವಿಶ್ವದಲ್ಲಿ ಅತಿಹೆಚ್ಚು ಸಕ್ಕರೆ ಕಾಯಿಲೆ ಹೊಂದಿರುವವರರ ಸಂಖ್ಯೆಯಲ್ಲಿ 2021ರ ಸಮೀಕ್ಷೆ ಪ್ರಕಾರ ಭಾರತ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶ ಈಗ ಡಯಾಬೀಟೀಸ್ ಪೇಷಂಟ್ಗಳ ಎರಡನೇ ರಾಜಧಾನಿಯಾಗಿದೆ. ಇದನ್ನು ತಡೆಯಲು ಈಗಾಗಲೇ ಅನೇಕ ಮಾರ್ಗಗಳನ್ನು ವೈದ್ಯಲೋಕ ಹುಡುಕುತ್ತಲೇ ಇದೆ. ಅನೇಕ ಸಂಶೋಧನೆಗಳು ನಡೆಯುತ್ತಲೇ ಇವೆ. ಈಗ ಯುಕೆನ ಬಯೋಬ್ಯಾಂಕ್ ಎಂಬ ಸಂಸ್ಥೆ ನಡೆಸಿರುವ ಜರ್ನಲ್ ಸೈನ್ಸ್ ಎಂಬ ಅಧ್ಯಯನದಲ್ಲಿ ನವಜಾತು ಶಿಶುಗಳಿಗೆ ಮೊದಲ ಮೂರು ವರ್ಷ ಸಕ್ಕೆರ ಅಂಶದ ಆಹಾರ ನೀಡದಿದ್ದರೆ ಡಯಾಬೀಟೀಸ್ನ್ನು ತಡೆಯಬಹುದು ಎಂದು ವರದಿಯಾಗಿದೆ.
ಹಲ್ಲೋವಿನ್ನಲ್ಲಿ ಬಿಡುಗಡೆಯಾಗಿರುವ ಈ ಅಧ್ಯಯನದ ಪ್ರಕಾರ ಮಗು ಹುಟ್ಟಿದ ಆರಂಭಿಕ ಒಂದು ಸಾವಿರ ದಿನಗಳಲ್ಲಿ ಅದಕ್ಕೆ ಸಕ್ಕರೆ ಅಂಶ ಇರುವ ಆಹಾರ ನೀಡದೇ ಇದ್ದಲ್ಲಿ ಡಯಾಬೀಟೀಸ್ ಬರುವುದನ್ನು ಶೇಕಡಾ 35 ರಷ್ಟು ತಪ್ಪಿಸಬಹುದು ಎಂದು ಹೇಳಲಾಗಿದೆ. ಅದರ ಜೊತೆಗೆ ಗರ್ಭಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕೂಡ ತಪ್ಪಿಸಬಹುದು ಎಂದು ಹೇಳಲಾಗಿದೆ.
ಈ ಒಂದು ಅಧ್ಯಯನ ಪ್ರಕಾರ ಹುಟ್ಟಿದ ಮಗುವಿಗೆ ಆರಂಭಿಕ ಮೂರು ವರ್ಷಗಳ ಕಾಲ ಇಲ್ಲವೇ ಸಾವಿರ ದಿನಗಳ ಕಾಲ ನಾವು ಸಕ್ಕರೆ ಪದಾರ್ಥಗಳನ್ನು ತಿನ್ನಲುಲ ಕೊಡದೇ ಇದ್ದಲ್ಲಿ ಟೈಪ್ 2 ಮಧುಮೇಹ ಕಾಯಿಲೆಯನ್ನು ಬರದಂತೆ ತಪ್ಪಿಸಬಹುದು ಎಂದು ಹೇಳಲಾಗಿದೆ.ಇದರ ಜೊತೆಗೆ ಹೈಪರ್ ಟೆನ್ಷನ್ನಂತಹ ಸಮಸ್ಯೆಗಳನ್ನು ಕೂಡ ಶೇಕಡಾ 20 ರಷ್ಟು ತಪ್ಪಿಸಬಹುದು ಎನ್ನಲಾಗಿದೆ.
ಗರ್ಭಿಣಿಯಿರುವ ಸಮಯದಲ್ಲಿ ಹಾಗೂ ಮಗುವಿನ ಮೊದಲ ಎರಡರಿಂದ ಮೂರ ವರ್ಷದವರೆಗೆ ಕ್ಕರೆ ಅಂಶದ ಆಹಾರವನ್ನು ತ್ಯಜಿಸಿದರೆ ಜೀವನ ಪೂರ್ತಿ ಉತ್ತಮ ಆರೋಗ್ಯಕ್ಕೆ ಸಹಾಯಕ ಎಂದು ಈ ಅಧ್ಯಯನದಲ್ಲಿ ಉಲ್ಲೇಖಗೊಂಡಿದೆ.
ನವಜಾತ ಶಿಶುವಿನ ಆರಂಭಿಕ ಸಾವಿರ ದಿನಗಳ ಆರೈಕೆ ತುಂಬಾ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಇದೇ ಅವಧಿಯಲ್ಲಿ ಮಗುವಿನ ಮುಂದಿನ ಆರೋಗ್ಯ ರೂಪಗೊಳ್ಳುತ್ತದೆ. ಹೀಗಾಗಿ ಈ ಸಮಯದಲ್ಲಿ ಅವರನ್ನು ಸಕ್ಕರೆ ಅಂಶದಿಂದ ಕೂಡಿದ ಪದಾರ್ಥಗಳಿಂದ ದೂರವಿಟ್ಟರೆ ಭವಿಷ್ಯದಲ್ಲಿ ಅವರಿಗೆ ಸಕ್ಕರೆ ರೋಗದಂತಹ ಸಮಸ್ಯೆಗಳು ಹುಟ್ಟಿಕೊಳ್ಳುವುದಿಲ್ಲ. ಇದರ ಜೊತೆಗೆ ವಯಸ್ಕರರು ದಿನಕ್ಕೆ 50 ಗ್ರಾಂಗಿಂತ ಕಡಿಮೆ ಸಕ್ಕರೆ ಅಥವಾ ಸಕ್ಕರೆ ಅಂಶ ಹೊಂದಿರುವ ಪದಾರ್ಥಗಳನ್ನು ತಿನ್ನಬೇಕು ಹೀಗೆ ಮಾಡಿದಲ್ಲಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಸದರನ್ ಕ್ಯಾಲಿಫೋರ್ನಿಯಾದ ವಿಶ್ವ ವಿದ್ಯಾಲಯ ತನ್ನ ಜರ್ನಲ್ ಸೈನ್ಸ್ ಅಧ್ಯಯನದಲ್ಲಿ ಸ್ಪಷ್ಟಪಡಿಸಿದೆ.




