Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Life Style
  • ಇದು ಜಗತ್ತಿನ ಅತ್ಯಂತ ಶ್ರೀಮಂತ ಶ್ವಾನ; ಇದರ ಬಳಿ ಇರುವ ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?
0
prajadhvani
Monday, 04 November 2024 / Published in Life Style

ಇದು ಜಗತ್ತಿನ ಅತ್ಯಂತ ಶ್ರೀಮಂತ ಶ್ವಾನ; ಇದರ ಬಳಿ ಇರುವ ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?

ಇದು ವಿಶ್ವದಲ್ಲಿಯೇ ಅತ್ಯಂತ ಶ್ರೀಮಂಥ ಶ್ವಾನವೆಂಬ ಹೆಸರು ಗಳಿಸಿದ ಶ್ವಾನ

ಈ ಶ್ವಾನದ ಬಳಿ ಇರುವ ಆಸ್ತಿ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ

ಗುಂಥೆರ್​-5 ಹೆಸರಿನ ಶ್ವಾನವನ್ನು ನೋಡಿಕೊಳ್ಳಲು ಇದ್ದಾರೆ 27 ಜನ ನೌಕರರು!

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಶ್ರೀಮಂತ ಮಹಿಳೆಯ ಬಗ್ಗೆ ನೀವು ಕೇಳಿಯೇ ಕೇಳಿರ್ತೀರಾ, ಆದ್ರೆ ನಾವು ಇಲ್ಲಿ ನಿಮಗೆ ವಿಶ್ವದ ಅತ್ಯಂತ ಶ್ರೀಮಂತ ಶ್ವಾನದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಕೊಡ್ತೀವಿ. ಈ ಶ್ವಾನದ ಬಳಿ ಪ್ರೈವೇಟ್​ ಜೆಟ್ ಇದೆ. ಓಡಾಡಲು ಬಿಎಂಡಬ್ಲ್ಯೂ ಕಾರ್ ಇದೆ. ಇನ್ನೂ ಅನೇಕ ಐಷಾರಾಮಿ ವಸ್ತುಗಳ ಒಡೆಯ ಈ ಒಂದು ಜರ್ಮನ್ ಶೆಫರ್ಡ್​ ಶ್ವಾನ.

ವಿಶ್ವದ ಅತ್ಯಂತ ಶ್ರೀಮಂತ ಶ್ವಾನ ಎಂಬ ಖ್ಯಾತಿ ಪಡೆದಿರುವ ಈ ಜರ್ಮನ್ ಶೆಫರ್ಡ್ ಶ್ವಾನದ ಹೆಸರು ಗುಂಥರ್ 5 ಅಂತ. ಇದರ ಬಳಿ ಇರುವ ಒಟ್ಟು ಆಸ್ತಿಯ ಸರಿ ಸುಮಾರು 400 ಮಿಲಿಯನ್ ಯುಎಸ್ ಡಾಲರ್, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 3556 ಕೋಟಿ ರೂಪಾಯಿಗಳು. ಈ ಶ್ರೀಮಂತ ಶ್ವಾನದ ಕಥೆ ಆರಂಭವಾಗುವುದು ಮೂರು ದಶಕಗಳ ಹಿಂದಿನಿಂದ. 1991ರಲ್ಲಿ ಕೌಂಟೆಸ್ ಕಾರ್ಲೋಟಾ ಲೈಬೆನ್​​ಸ್ಟೈನ್ ಎನ್ನುವ ಶ್ರೀಮಂತ ಮಹಿಳೆಯ ಪುತ್ರನ ಅಕಾಲಿಕ ಮರಣದಿಂದಾಗಿ ಅವರಿಗೆ ಉತ್ತರಾಧಿಕಾರಿಗಳೇ ಇಲ್ಲದಂತಾಯಿತು.

ಈ ವೇಳೆ ಅವರ ಬಳಿ ಇರುವ 80 ಮಿಲಿಯನ್ ಡಾಲರ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 673 ಕೋಟಿ ರೂಪಾಯಿಯನ್ನು ತಮ್ಮ ನೆಚ್ಚಿನ ಶ್ವಾನ ಗುಂಥೆರ್ 3 ಹೆಸರಲ್ಲಿ ಬರೆದಿಟ್ಟು ಹೋದರು. ಅದನ್ನು ನಿರ್ವಹಿಸುವ ಎಲ್ಲಾ ಜವಾಬ್ದಾರಿಯನ್ನು ತನ್ನ ಸ್ನೇಹಿತೆಯ ಮಗನಾದ ಮೈರಿಜಿಯೋ ಮೈನ್ ಅವರ ಹೆಗಲಿಗೆ ಹಾಕಿ ಅವರು ಇಹಲೋಕ ತ್ಯಜಿಸಿದರು. ಕಳೆದ ಮೂರು ದಶಕಗಳಿಂದ ಈ ಒಂದು ಆಸ್ತಿಯ ಮೌಲ್ಯ ಈಗ 3556 ಕೋಟಿ ರೂಪಾಯಿಗೆ ಬಂದು ತಲುಪಿದೆ. ಗುಂಥೆರ್​ 3ಯ ಮೊಮ್ಮಗ ಗುಂಥೆರ್​ 5 ಈಗ ಈ ಆಸ್ತಿಯ ಒಡೆಯನಾಗಿದ್ದಾನೆ. ಜಗತ್ತಿನ ಅತ್ಯಂತ ಶ್ರೀಮಂತ ಶ್ವಾನಗಳ ಪಟ್ಟಿಯಲ್ಲಿ ಗುಂಥೆರ್​ 5 ಅಗ್ರಗಣ್ಯ ಸ್ಥಾನದಲ್ಲಿದ್ದಾನೆ.

ಸಿರಿವಂತ ನಾಯಿಯ ಮನೆಯೇ 63 ಕೋಟಿಯ ಐಷಾರಾಮಿ ಮನೆಯಿದೆ. ಪ್ರೈವೆಟ್ ಜೆಟ್​ ಇದೆ. ಇಟಲಿಯ ಈ ನಾಯಿ ಅತ್ಯಂತ ಐಷಾರಾಮಿ ಬದುಕನ್ನು ಬದುಕುವ ಶ್ವಾನಗಳ ಲಿಸ್ಟ್​ನಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕಾಗಿಯೇ ಒಂದು ಐಷಾರಾಮಿ ವಿಹಾರ ನೌಕೆಯಿದೆ. ಗುಂಥೆರ್​-5ನನ್ನು ನೋಡಿಕೊಳ್ಳಲು ಒಟ್ಟು 27 ಕೆಲಸಗಾರರ ತಂಡವೇ ಇದೆ.ಇವರೆಲ್ಲರೂ ಇದರ ಊಟ ಉಪಹಾರ, ಓಡಾಟ, ವಿಹಾರ ಇವೆಲ್ಲವನ್ನೂ ನೋಡಿಕೊಳ್ಳುತ್ತಾರೆ.

ಈ ಒಂದು ಶ್ವಾನದ ಮಾಲೀಕತ್ವದಲ್ಲಿ ಪಿಸಾ ಸ್ಪೋರ್ಟಿಂಗ್ ಕ್ಲಬ್ ಎಂಬ ಸ್ಪೋರ್ಟ್ಸ್ ಟೀಮ್ ಇದೆ. ಹಲವು ಬಾರಿ ಈ ಶ್ವಾನದ ಬಗ್ಗೆ ಕೇಳಿದವರೆಲ್ಲಾ ಇದೊಂದು ಊಹಾಪೋಹ ಕಥೆಯೆಂದು ಹೇಳಿದವರಿದ್ದಾರೆ. ಇದು ಉತ್ಪ್ರೇಕ್ಷೆ ಎಂದವರು ಇದ್ದಾರೆ. ಆದ್ರೆ ನಿಜಕ್ಕೂ ಗುಂಥೆರ್ 5 ಎಂಬ ಶ್ವಾನ ಇಟಲಿಯಲ್ಲಿ ವೈಭೋಗದ ಬದುಕು ಬದುಕುತ್ತಿದೆ. ಅದನ್ನು ಕಂಡು ಮನುಷ್ಯರೇ ಹೊಟ್ಟೆ ಕಿಚ್ಚುಪಡುವಷ್ಟು ಐಷಾರಾಮಿ ಬದುಕು ಈ ಗುಂಥೆರ್​-5ನದ್ದು. ಇದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಕೂಡ ಅನೇಕ ವರದಿ ಮಾಡಿವೆ. ಪ್ರತ್ಯಕ್ಷ ಸಾಕ್ಷಿ ನೀಡಿವೆ.

What you can read next

ನಿಮ್ಮ ಕೇಶ ವಿನ್ಯಾಸವು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತಾ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?
60 ದಿನಕ್ಕೆ 48 ಲಕ್ಷ ವಿವಾಹ.. ಈ ಅದ್ಧೂರಿ ಮದುವೆಗಳಿಂದ ದೇಶಕ್ಕೆ ಬರುವ ಆದಾಯ ಎಷ್ಟು ಲಕ್ಷ ಕೋಟಿ ಗೊತ್ತಾ?
​ದಂಗಲ್​ ಸ್ಟೈಲ್​ನಲ್ಲೇ ತಂದೆ ಆಸೆ ಈಡೇರಿಸಿದ ಹೆಣ್ಣುಮಕ್ಕಳು; ಕನಸುಗಳಿಗೆ ಸ್ಫೂರ್ತಿ ತುಂಬಿದ್ದು ಹೇಗೆ?

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP