Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Sports
  • ಅದೃಷ್ಟವಂತ ಆಟಗಾರನ ಮೇಲೆ ಆರ್​​​ಸಿಬಿ ಹದ್ದಿನ ಕಣ್ಣು; ಬೆಂಗಳೂರಿಗೆ ಬಂತು ಆನೆಬಲ
0
prajadhvani
Monday, 04 November 2024 / Published in Sports

ಅದೃಷ್ಟವಂತ ಆಟಗಾರನ ಮೇಲೆ ಆರ್​​​ಸಿಬಿ ಹದ್ದಿನ ಕಣ್ಣು; ಬೆಂಗಳೂರಿಗೆ ಬಂತು ಆನೆಬಲ

ದಯವಿಟ್ಟು ನನಗೆ ಒಂದು ಕೊನೆಯ ಚಾನ್ಸ್​ ಕೊಡಿ ಎಂದಿದ್ದರು

ಯುವ ಕ್ರಿಕೆಟಿಗರ ಪಾಲಿಗಂತೂ ಈತನ ಕಥೆ ಸ್ಫೂರ್ತಿಯ ಚಿಲುಮೆ

ಚಾನ್ಸ್​ ಕೊಡಿ ಎಂದಿದ್ದ ಯುವ ಆಟಗಾರನ ಮೇಲೆ ಆರ್​​ಸಿಬಿ ಕಣ್ಣು

ಈತ ಆರ್​​ಸಿಬಿ ಪಾಲಿನ ಅದೃಷ್ಟವಂತ.. ಈತ ತಂಡಕ್ಕೆ ಎಂಟ್ರಿಕೊಟ್ಟಿದ್ದೇ, ಕೊಟ್ಟಿದ್ದು ಆರ್​​ಸಿಬಿ ಸೋಲು ಅನ್ನೋದನ್ನೇ ನೋಡಿಲ್ಲ. ಕಳೆದ ಸೀಸನ್​​ನಲ್ಲಿ ಸತತ 7 ಪಂದ್ಯಗಳ ದಿಗ್ವಿಜಯದ ಹಿಂದೆ ಈ ಲಕ್ಕಿಮ್ಯಾನ್​ ಶ್ರಮ ಅಪಾರ. ಇವರು ಯಾರು ಅಲ್ಲ RCBಯ ನಯಾ ಸೆನ್ಸೇಷನ್​​ ಸ್ವಪ್ನಿಲ್​ ಸಿಂಗ್​ ಬಗ್ಗೆ. ಆರ್​​ಸಿಬಿ ಪಾಲಿನ ಅದೃಷ್ಟವಂತನಾಗಿರೋ ಈತ ಬಹುತೇಕರಿಗೆ ಯಾರು ಅಂತಾನೇ ಗೊತ್ತಿಲ್ಲ. ಈತನ ಕ್ರಿಕೆಟ್​ ಜರ್ನಿ ನಿಜಕ್ಕೂ ರೋಚಕ. ಯುವ ಕ್ರಿಕೆಟಿಗರ ಪಾಲಿಗಂತೂ ಈತನ ಕಥೆ ಸ್ಫೂರ್ತಿಯ ಚಿಲುಮೆ.

ಸ್ವಪ್ನಿಲ್​ ಸಿಂಗ್​.. ಐಪಿಎಲ್​ ಮಿನಿ ಆಕ್ಷನ್​ನಲ್ಲಿ ಈ ಸ್ಪಿನ್ನರ್​ನ ಆರ್​​ಸಿಬಿ ಖರೀದಿಸಿದಾಗ ಹೆಚ್ಚು ಚರ್ಚೆಯಾಗದ ಹೆಸರಿದು. ಯಾರೋ ಒಬ್ಬ ಪ್ಲೇಯರ್​ ಎಂದು NEGLECT​ ಮಾಡಿದವರೇ ಹೆಚ್ಚು. ಇಂದು ಈತನೇ ಸೆನ್ಸೇಷನ್​​. ಆರ್​​​ಸಿಬಿ ಪಾಲಿನ ಅದೃಷ್ಟವಂತನಾಗಿದ್ದಾನೆ. ಈತ ಆಡಿದ ಎಲ್ಲಾ ಪಂದ್ಯಗಳಲ್ಲಿ ತಂಡವೂ ಜಯ ಸಾಧಿಸಿದೆ. ಸಿಕ್ಕ ಚಾನ್ಸ್​​​ನಲ್ಲಿ ಸ್ವಪ್ನಿಲ್​ ಕೂಡ ಭರ್ಜರಿ ಪರ್ಫಾಮೆನ್ಸ್​ ನೀಡಿದ್ದಾರೆ. ಆದರೆ, ಮುಂದಿನ ಸೀಸನ್​ಗೆ ಆರ್​​ಸಿಬಿ ತಂಡದಿಂದಲೇ ಈತನನ್ನು ಕೈ ಬಿಟ್ಟಿದೆ. ಮೆಗಾ ಹರಾಜಿನಲ್ಲಿ ಹೇಗಾದ್ರೂ ಮಾಡಿ ಖರೀದಿ ಮಾಡಬೇಕು ಎಂದು ಮುಂದಾಗಿದೆ.

ಮೆಗಾ ಆಕ್ಷನ್​ನಲ್ಲಿ ಸ್ವಪ್ನಿಲ್​​ಗೆ ಮಣೆ

ಆರ್​​ಸಿಬಿ ತಂಡ ಈ ಸಲ ಮೆಗಾ ಹರಾಜಿನಲ್ಲಿ ಸ್ವಪ್ನಿಲ್​ ಸಿಂಗ್​​ ಅವರನ್ನು ಖರೀದಿ ಮಾಡಲಿದೆ. ಇಲ್ಲದೆ ಹೋದಲ್ಲಿ ಆರ್​​ಟಿಎಂ ಕಾರ್ಡ್​ ಬಳಸೋ ಮೂಲಕ ತಂಡದಲ್ಲೇ ಉಳಿಸಿಕೊಳ್ಳಬಹುದು.

ಕಳೆದ ಸಲ ಆಕ್ಷನ್​ನಲ್ಲಿ ಮೊದಲ ರೌಂಡ್​ನಲ್ಲಿ ಅನ್​ಸೋಲ್ಡ್​ ಆದ ಬೆನ್ನಲ್ಲೇ, ಸ್ವಪ್ನಿಲ್​​ ಯಾಕೆ​ ಕ್ರಿಕೆಟ್​ಗೆ ಗುಡ್​ ಬೈ ಹೇಳುವ ಕಠಿಣ ನಿರ್ಧಾರ ಮಾಡಿದ್ರು ಅನ್ನೋ ಪ್ರಶ್ನೆ ನಿಮ್ಮನ್ನ ಕಾಡಿರಬಹುದು. ಈ ನಿರ್ಧಾರದ ಹಿಂದೆ ಒಂದು ಪ್ರಿ ಸೀಸನ್​​ ಕ್ಯಾಂಪ್​ನ ಕಥೆಯಿದೆ.

ಒಂದು ಚಾನ್ಸ್​ ಕೊಡಿ ಎಂದಿದ್ದ ಸ್ವಪ್ನಿಲ್​​

ಸೀಸನ್​​ಗೂ ಮುನ್ನ ಒಂದು ಟ್ರಯಲ್​ ಕ್ಯಾಂಪ್​ ಇತ್ತು. ನಾನು ಆಗ ಕೋಚ್​ ಆ್ಯಂಡಿ ಸರ್​ಗೆ ನನ್ನ ಸೀಸನ್​ ಹೇಗಾಗಿದೆ ಎಂದು ತಿಳಿಸಿದೆ. ಆ ಬಳಿಕ ನಾನು ಕೇಳಿದ್ದು ಒಂದೇ ಮಾತು ದಯವಿಟ್ಟು ನನಗೆ ಒಂದು ಚಾನ್ಸ್​ ಕೊಡಿ. ಇದು ಬಹುತೇಕ ನನ್ನ ಕೊನೆಯ ಅವಕಾಶ ಎಂದು. ​ಅವ್ರು ಹೇಳಿದ್ರು ನಿನ್ನ ಮೇಲೆ ಭರವಸೆ ಇದೆ ಅಂತಾ. ಆದ್ರೆ, ಹೇಗೆ ಹೋಗುತ್ತೆ ಅನ್ನೋದನ್ನು ನೋಡಬೇಕು ಅಂದಿದ್ರು.

33ರ ಗಡಿ ದಾಟಿರೋ ಸ್ವಪ್ನಿಲ್​, ಡೊಮೆಸ್ಟಿಕ್​ ಕ್ರಿಕೆಟ್​ಗೆ ಮಾತ್ರ ಸೀಮಿತವಾಗಿದ್ರು. ಹೀಗಾಗಿಯೇ ಕಳೆದ ಸೀಸನ್​ನಲ್ಲಿ ಐಪಿಎಲ್​ ಆಡದಿದ್ರೆ, ಗುಡ್ ಬೈ ಹೇಳಿ ಬೇರೆ ಹಾದಿ ಹಿಡಿಯೋ ಲೆಕ್ಕಾಚಾರದಲ್ಲಿದ್ರು. ಕೊನೆ ಕ್ಷಣದಲ್ಲಿ ಆರ್​​ಸಿಬಿ ಸ್ವಪ್ನಿಲ್​ಗೆ ಮಣೆ ಹಾಕ್ತು. ಆ ಘಳಿಗೆಯನ್ನ ನೆನೆದ್ರೆ ಈಗಲೂ ಸ್ವಪ್ನಿಲ್ ಕಣ್ಣಂಚಲ್ಲಿ ನೀರು ಜಿನುಗುತ್ತೆ​.

ಸ್ವಪ್ನಿಲ್​ ಸಿಂಗ್​ ಒಂದೇ ಬಾರಿ ಸಕ್ಸಸ್​ನ ರುಚಿ ಕಂಡ ಕ್ರಿಕೆಟರ್​​ ಅಲ್ಲ. ಕಲ್ಲು ಮುಳ್ಳಿನ ಹಾದಿ ಸವೆಸಿ, ಅವಮಾನಗಳನ್ನ ಎದುರಿಸಿ ಬಂದ ಕ್ರಿಕೆಟಿಗ. ಚೆನ್ನಾಗಿ ಆಡಿದ್ರೂ ಚಾನ್ಸ್​ ಸಿಗದೇ ತಂಡದಿಂದಲೇ ಹೊರ ತಳ್ಳಲ್ಪಟ್ಟ ಕ್ರಿಕೆಟಿಗ.

ಆರ್​​ಸಿಬಿಯಿಂದ ಬಂತು ಲಕ್​​​

ನಾನು ಇದಕ್ಕೂ ಮೊದಲು ಐಪಿಎಲ್​ನಲ್ಲಿ ಫೋರ್​, ಸಿಕ್ಸ್​ ಹೊಡೆದಿರಲಿಲ್ಲ. ಕೇವಲ ಒಂದು ವಿಕೆಟ್​ ತೆಗೆದಿದ್ದೆ. ನನಗೆ ಒಂದು ಫೋರ್​, ಸಿಕ್ಸ್​​ ಹೊಡೆಯೋ ಆಸೆಯಿತ್ತು. ನನ್ನ ಬಳಿ ವಿಕೆಟ್​ ಅಂತೂ ಇತ್ತು ಎನ್ನುತ್ತಾರೆ ಅವರು.

ಡೊಮೆಸ್ಟಿಕ್​ ಟೀಮ್​ನಲ್ಲೂ ಸ್ಥಾನ ಕಳೆದುಕೊಂಡ ಸ್ವಪ್ನಿಲ್​ಗೆ ಲಕ್ನೋ ತಂಡದಲ್ಲೋ ಆಡೋ ಚಾನ್ಸ್​ ಸಿಗಲಿಲ್ಲ. ಆದ್ರೇ ದೇವರ ಆಶಿರ್ವಾದವೋ ಏನೋ ಈ ಬಾರಿ ಆರ್​​ಸಿಬಿ ಮಣೆ ಹಾಕ್ತು. ಒಂದು ಫೋರ್​​, ಒಂದು ಸಿಕ್ಸರ್​ ಹೊಡೆಯೋ ಆಸೆಯನ್ನಿಟ್ಟುಕೊಂಡು ಬಂದ ಈ ಸ್ವಪ್ನಿಲ್​ ಸಿಂಗ್​, ಮೊದಲ ಪಂದ್ಯದಲ್ಲೇ ಆ ಸಾಧನೆ ಮಾಡಿಬಿಟ್ರು. ಇಷ್ಟೇ ಅಲ್ಲ.. ಆರ್​​​ಸಿಬಿಯ ಅದೃಷ್ಟವನ್ನೇ ಬದಲಾಯಿಸಿದ್ದಾರೆ.

What you can read next

IPL 2025; ಮೆಗಾ ಆಕ್ಷನ್ ನಡೆಯುವ ದಿನಾಂಕ, ಸ್ಥಳ ಕನ್​ಫರ್ಮ್​..?
ಆರ್​​​ಸಿಬಿಗೆ IPL ವಿನ್ನಿಂಗ್​ ಕ್ಯಾಪ್ಟನ್​ ಎಂಟ್ರಿ; ಫಾಫ್​ ಸ್ಥಾನ ತುಂಬಲಿದ್ದಾರೆ ಸ್ಟಾರ್​​ ಪ್ಲೇಯರ್​​
ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​; ದಿಢೀರ್​​ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಸ್ಟಾರ್​ ಕ್ರಿಕೆಟರ್​​

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP