ನಾನು 10 ವಾರ ಇರ್ತೀನಿ ಅಂತ ಡಿಸೈಡ್ ಮಾಡೋಕೆ ಇವರು ಯಾರು?
ತ್ರಿವಿಕ್ರಮ್‌ಗೆ ಚಾಲೆಂಜ್ ಹಾಕಿದ ಮೋಕ್ಷಿತಾ ಬದಲಾಗಿದ್ದು ಹೇಗೆ?
ಕಳೆದ ವಾರ ಸೇಫ್ ಆದ ಮೋಕ್ಷಿತಾ ಅವರಿಗೆ ಏನ್ ಹೇಳಿದ್ರು ಆ ಡ್ರೈವರ್?
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಗೆ ತನ್ನ ಹಳೆಯ ಖದರ್ ಬಂದಿದೆ. ಕಳೆದ ವಾರದಲ್ಲಿ ಕಿಚ್ಚನ ಅನುಪಸ್ಥಿತಿ ಬಿಗ್ ಬಾಸ್ ಪ್ರೇಕ್ಷಕರಿಗೆ ಕಾಡುವಂತೆ ಮಾಡಿತ್ತು. ತಾಯಿಯ ಅಗಲಿಕೆಯಿಂದ ದೂರ ಉಳಿದಿದ್ದ ಕಿಚ್ಚ ಸುದೀಪ್ ಅವರು ಇವತ್ತು ವಾಪಸ್ ಆಗಿದ್ದಾರೆ. ವಾರದ ಕತೆ ಕಿಚ್ಚನ ಜೊತೆಯಲ್ಲಿ ಸುದೀಪ್ ಅವರ ಪವರ್ ಫುಲ್ ಮಾತುಗಳು ಇಡೀ ಶೋಗೆ ಹೊಸ ಮಿಂಚು ತಂದಿದೆ.

ವಾರದ ಕತೆಯಲ್ಲಿ ಸರಿ, ತಪ್ಪುಗಳ ಪಂಚಾಯ್ತಿ ಮಾಡಿದ ಕಿಚ್ಚ ಸುದೀಪ್ ಅವರು ಕಾರಿನಲ್ಲಿ ಡ್ರೈವ್ ಹೋದ ಮೋಕ್ಷಿತಾ ಅವರೇ ಬೇರೆ, ವಾಪಸ್ ಬಂದಿರೋ ಮೋಕ್ಷಿತಾ ಅವರೇ ಬೇರೆ. ಏನ್ ಹೇಳಿದ್ರು ಆ ಡ್ರೈವರ್ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಸುದೀಪ್ ಪ್ರಶ್ನೆಗೆ ಉತ್ತರಿಸಿದ ಮೋಕ್ಷಿತಾ ವಾರದಿಂದ ಮನಸಲ್ಲಿದ್ದ ಮಾತು ಹೊರಗೆ ಬಂತು ಸಾರ್ ಎಂದರು.

ಮೋಕ್ಷಿತಾ ಅವರನ್ನು ಮತ್ತೆ ಪ್ರಶ್ನಿಸಿದ ಕಿಚ್ಚ ಸುದೀಪ್, ಒಂದು ವಾರ ಯಾಕೆ ಸೈಲೆಂಟ್ ಆಗಿ ಇದ್ರಿ. ಅದಕ್ಕೆ ಮೋಕ್ಷಿತಾ ಅವರು ಮಂಜಣ್ಣ ಕೇಳೋದು ಬೇಡ ಅನ್ನೋ ತರಹ ಹೇಳಿದ್ರು ಅಂದ್ರು. ಆಗ ಸುದೀಪ್ ಅವರು ಮಂಜು ಅವರು ನಿಮ್ಮ ಮುಖವಾಣಿ ಅಲ್ಲ. ನಿಮ್ಮ ಯುದ್ಧ ನಿಮ್ಮದು. ಮಂಜು ನೀವು ಸ್ನೇಹಿತರಿಗೆ ನೀವು ಹೋಗಿ ಅಡ್ವೈಸ್ ಮಾಡಿದಾಗ ಕೇಳಬೇಡ ಅಂತ ಯಾವತ್ತು ಹೇಳಬೇಡಿ. ನನ್ಮಗಂದ್ ಕೇಳು ನಾನು ಇದ್ದೀನಿ ಅಂತ ಹೇಳಿ ಎಂದಿದ್ದಾರೆ.
ಈ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಹಳೇ ಖದರ್‌ಗೆ ಮರಳಿರೋದು ಬಿಗ್ ಬಾಸ್ ಅಭಿಮಾನಿಗಳಿಗೆ ಖುಷಿ ತಂದಿದೆ. ಉಗ್ರಂ ಮಂಜು, ಮೋಕ್ಷಿತಾ ಅವರಿಗೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿದ್ದು, ಬಿಗ್ ಬಾಸ್ ಮನೆಯವರ ಉಳಿದವರು ಕಕ್ಕಾಬಿಕ್ಕಿ ಆಗಿದ್ದಾರೆ.