ಬಿಗ್ಬಾಸ್ ಮನೆಗೆ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದ ಮಾನಸ ತುಕಾಲಿ
ದೊಡ್ಮನೆಯಲ್ಲಿ ಎಲ್ಲರ ಜೊತೆಗೆ ನಗು ನಗುತ್ತಲೇ ಇದ್ದ ಮಾನಸ
ಬಿಗ್ಬಾಸ್ ಮನೆಯಿಂದ 4ನೇ ವಾರಕ್ಕೆ ಆಟ ಅಂತ್ಯ ಮಾಡಿದ ಸ್ಪರ್ಧಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 4ನೇ ವಾರಕ್ಕೆ ಮಾನಸ ಅವರು ಆಚೆ ಬಂದಿದ್ದಾರೆ. ಈ ಬಾರಿಯ ಬಿಗ್ಬಾಸ್ ತುಂಬಾ ವಿಭಿನ್ನವಾಗಿ ಮೂಡಿ ಬರುತ್ತಿದೆ. ನಾಲ್ಕನೇ ವಾರಕ್ಕೆ ಬಿಗ್ಬಾಸ್ ಆಟ ಮುಗಿಸಿ ಆಚೆ ಬಂದಿದ್ದಾರೆ.

ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 12 ಮಂದಿ ನಾಮಿನೇಟ್ ಆಗಿದ್ದರು. ಒಟ್ಟು 14 ಸ್ಪರ್ಧಿಗಳಲ್ಲಿ ಗೌತಮಿ ಮತ್ತು ತ್ರಿವಿಕ್ರಮ್ ಬಿಟ್ಟು ಉಳಿದ ಎಲ್ಲರೂ ನಾಮಿನೇಟ್ ಆಗಿದ್ದರು. ಅದರಲ್ಲೂ ಕ್ಯಾಪ್ಟನ್ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದರು.

ಅಲ್ಲದೇ ಕಳೆದ ವಾರ ಬಿಗ್ಬಾಸ್ ಮನೆಯಿಂದ ಹಂಸಾ ಅವರು ಆಚೆ ಹೋಗುವಾಗ ವಿಶೇಷ ಅಧಿಕಾರವನ್ನ ಬಳಸಿ ಹನುಮಂತ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಉಳಿದಂತೆ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ , ಉಗ್ರಂ ಮಂಜು, ಅನುಷಾ ರೈ , ಧರ್ಮ ಕೀರ್ತಿರಾಜ್, ಐಶ್ವರ್ಯ, ಧನರಾಜ್, ಶಿಶರ್ ಶಾಸ್ತ್ರಿ ನಾಮಿನೇಟ್ ಆಗಿದ್ದರು.
ಆದರೆ ಕೊನೆಯ ಕ್ಷಣದಲ್ಲಿ ಬಿಗ್ಬಾಸ್ ಮನೆಯಿಂದ ಮಾನಸ ತುಕಾಲಿ ಅವರು ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಇನ್ನೂ ಬಿಗ್ಬಾಸ್ ಮನೆಯಿಂದ ಮಾನಸ ಆಚೆ ಬರುತ್ತಿದ್ದಂತೆ ಮನೆಯ ಎಲ್ಲ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದ್ಯ ಈಗ ಬಿಗ್ಬಾಸ್ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.




