ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಮದುವೆ ಆಗಿದ್ದು ಹೇಗೆ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಮದುವೆ ಫೋಟೋಸ್
ಪತ್ತರಮಾತ್ ಎಂಬ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ ಈ ಇಬ್ಬರು ಸ್ಟಾರ್ಸ್
ಕೊಚ್ಚಿ: ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಮದುವೆ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಜೋಡಿಯ ಮದುವೆ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿಬಿಟ್ಟಿದ್ದಾರೆ. ಹೌದು, ಮಲಯಾಳಂ ಕಿರುತೆರೆ ನಟರಾದ ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಅವರು ಗುರುವಾಯೂರ್ ದೇವಸ್ಥಾನದಲ್ಲಿ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಈ ಇಬ್ಬರು ಮದುವೆಯಾದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ತರಮಾತ್ ಎಂಬ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುವಾಗ ಪರಿಚಯವಾದ ಇವರಿಬ್ಬರೂ ಅರೆಂಜ್ಡ್ ಮ್ಯಾರೇಜ್ ಮೂಲಕವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಪ್ತ ಬಂಧುಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ವಿವಾಹದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದಿವೆ. ಸದ್ಯ ನಟಿಗೆ 38 ವರ್ಷ ವಯಸ್ಸಾಗಿದ್ದು, ಕ್ರಿಸ್ ವೇಣುಗೋಪಾಲ್ ಅವರಿಗೆ 49 ವರ್ಷವಾಗಿದೆ. ಈ ಇಬ್ಬರ ಮಧ್ಯೆ 11 ವರ್ಷಗಳ ವಯಸ್ಸಿನ ಅಂತರವಿದೆ. ಇನ್ನು, ಮದುವೆಯಾಗುವ ಮುನ್ನವೇ 11 ವರ್ಷಗಳ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಸಾಕಷ್ಟು ಮಂದಿ ಹಲವಾರು ಕಮೆಂಟ್ಸ್ ಮಾಡಿದ್ದರು.

ಕ್ರಿಸ್ ಮತ್ತು ದಿವ್ಯಾ ಸಂದರ್ಶನವೊಂದರಲ್ಲಿ ನಟ ಕ್ರಿಸ್ ವೇಣುಗೋಪಾಲ್ ಮತ್ತು ನಟಿ ದಿವ್ಯಾ ಶ್ರೀಧರ್ ಅವರದ ಮದವೆ ವಿಚಾರವಾಗಿ ಬಗ್ಗೆ ಜೋಡಿ ಇದೀಗ ಸ್ಪಷ್ಟನೆ ನೀಡಿದೆ. ಬಹಳ ಏಜ್ ಗ್ಯಾಪ್ ಇರೋ ವಿವಾಹಕ್ಕೆ ಬಂದ ನೆಗೆಟಿವ್ ಕಾಮೆಂಟ್‌ಗಳು ಬರುತ್ತವೆ ಅಂತ ನಮಗೆ ಮೊದಲೇ ಗೊತ್ತಿತ್ತು. ಬೇರೆಯವರ ಜೀವನದಲ್ಲಿ ಏನೇನು ಸಮಸ್ಯೆಗಳಿವೆ, ಅದನ್ನು ಹೇಗೆ ಟೀಕಿಸಬಹುದು ಎಂದು ಯೋಚಿಸುವವರ ಬಗ್ಗೆ ನಮಗೆ ಸಹಾನುಭೂತಿ ಇದೆ. ಅವರು ಹೇಗಾದರೂ ಬದುಕಲಿ ಎಂದು ಯಾರೂ ಹೇಳುವುದಿಲ್ಲ. ಇದು ಎರಡು ದಿನ ಮಾತ್ರ, ಕಲಾವಿದರಲ್ಲವೇ ಎಂಬ ಕುಹಕ ಮಾತುಗಳೂ ಕೇಳಿ ಬಂದಿದ್ದವು ಈ ಬಗ್ಗೆ ಸ್ಪಷ್ಟ ಅರಿವು ಇತ್ತು ಎಂದು ಹೇಳಿದ್ದಾರೆ.




