ಅಯೋಧ್ಯೆ ರಾಮನ ಭಕ್ತರ ಮೆಚ್ಚುಗೆಗೆ ಪಾತ್ರರಾದ ನಟ ಅಕ್ಷಯ್ ಕುಮಾರ್​; ಮಾಡಿದ್ದೇನು?

  • ಬಾಲಿವುಡ್​ ಸ್ಟಾರ್​ ನಟ ಅಕ್ಷಯ್ ಕುಮಾರ್​ರಿಂದ ಮಹತ್ವದ ನಿರ್ಧಾರ
  • ಆಂಜನೇಯ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿ ಪ್ರಿಯಾ ಗುಪ್ತಾ ಹೇಳಿದ್ದೇನು?
  • ತಂದೆ, ತಾಯಿ ಮಾವ ರಾಜೇಶ್ ಖನ್ನಾ ಹೆಸರಿನಲ್ಲಿ ನಡೀತಿದೆ ಈ ಕಾರ್ಯ

ಬಾಲಿವುಡ್ ಸ್ಟಾರ್​ ನಟ ಅಕ್ಷಯ್ ಕುಮಾರ್ ಅವರು ಆಗಾಗ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾ ಇರುತ್ತಾರೆ. ಆದರೆ ಇದೀಗ ನಟ ಮಾಡಿದ ಮತ್ತೊಂದು ಅದ್ಭುತ ಕಾರ್ಯಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೌದು, ನಟ ಅಕ್ಷಯ್ ಕುಮಾರ್​ ಈ ಬಾರಿ ಶ್ರೀ ರಾಮ ಮಂದಿರ ಅಯೋಧ್ಯೆಯಲ್ಲಿರುವ ಕೋತಿಗಳಿಗೆ ಪ್ರತಿದಿನ ಆಹಾರ ನೀಡುವುದಕ್ಕಾಗಿ ಬರೋಬ್ಬರಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ಷಯ್ ಅವರ ತಂಡವು ಹಂಚಿಕೊಂಡ ಮಾಹಿತಿಯ ಪ್ರಕಾರ, ಅಕ್ಷಯ್ ಅವರು ದೀಪಾವಳಿಯ ಮೊದಲು ಭಗವಾನ್ ರಾಮನ ಭೂಮಿಯಾದ ಅಯೋಧ್ಯೆಯಲ್ಲಿ ಕೋತಿಗಳಿಗೆ ಆಹಾರಕ್ಕಾಗಿ ₹ 1 ಕೋಟಿ ದೇಣಿಗೆ ನೀಡಿದ್ದು ಮಾತ್ರವಲ್ಲದೆ ಅವರ ತಂದೆ-ತಾಯಿ ಮತ್ತು ಅವರ ಮಾವ, ದಿವಂಗತ ಹಿರಿಯ ನಟನಿಗೆ ಗೌರವ ಸಲ್ಲಿಸಿದ್ದಾರೆ. ಫುಡ್‌‌ ಫೀಡಿಂಗ್ ವ್ಯಾನ್‌ನಲ್ಲಿ ಅವರ ಹೆಸರಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಜಗದ್ಗುರು ಸ್ವಾಮಿ ರಾಘವಾಚಾರ್ಯ ಜಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಆಂಜನೇಯ ಸೇವಾ ಟ್ರಸ್ಟ್ ಈ ಉಪಕ್ರಮವನ್ನು ಮುನ್ನಡೆಸಿಕೊಂಡು ಹೋಗಲಿದೆ.

ಇನ್ನು, ಈ ಬಗ್ಗೆ ಆಂಜನೇಯ ಸೇವಾ ಟ್ರಸ್ಟ್‌ನ ಸಂಸ್ಥಾಪಕ-ಟ್ರಸ್ಟಿ ಪ್ರಿಯಾ ಗುಪ್ತಾ ಮಾತನಾಡಿ, ಅಕ್ಷಯ್ ಕುಮಾರ್ ಅವರು ಅತ್ಯಂತ ಕರುಣಾಮಯಿ ಮತ್ತು ಉದಾರ ವ್ಯಕ್ತಿ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ನಟ ದೇಣಿಗೆ ನೀಡಿದ್ದು ಮಾತ್ರವಲ್ಲದೆ ಅವರ ತಂದೆ-ತಾಯಿ ಹಾಗೇ ಅವರ ಮಾವ ರಾಜೇಶ್ ಖನ್ನಾ ಅವರ ಹೆಸರಿನಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ. ನಾವು ಮಂಗಗಳಿಗೆ ಆಹಾರ ನೀಡುವಾಗ ಯಾವುದೇ ನಾಗರಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುತ್ತೇವೆ. ಮಂಗಗಳಿಗೆ ಆಹಾರವನ್ನು ನೀಡುವುದರಿಂದ ಅಯೋಧ್ಯೆಯಲ್ಲಿ ಯಾವುದೇ ಕಸ ಹಾಕದೇ ಇರುವ ರೀತಿ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

TOP