ಮಾಸದ ಮಗನ ನೆನಪು.. ಮನೆ ದೇವರ ಮೊರೆ ಹೋದ ರೇಣುಕಾಸ್ವಾಮಿ ಕುಟುಂಬ

  • ಕಣ್ಣೀರು ಹಾಕುತ್ತಿರುವ ರೇಣುಕಾಸ್ವಾಮಿ ಕುಟುಂಬ
  • ದರ್ಶನ್​ಗೆ ಮಧ್ಯಂತರ ಜಾಮೀನು ನೀಡಿದ ಕೋರ್ಟ್​
  • ಮಗನ ನೆನಪಿನಲ್ಲೇ ಮನೆ ದೇವರ ಮೊರೆ ಹೋದ ಕುಟುಂಬ

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್ ಇತ್ತ ಮಧ್ಯಂತರ ಜಾಮೀನು ಸಿಕ್ಕಿದ್ದು, ಅತ್ತ ರೇಣುಕಾಸ್ವಾಮಿ ಕುಟುಂಬಸ್ಥರು ಮನೆ ದೇವರ ಮೊರೆ ಹೋಗಿದ್ದಾರೆ. ಕುರುವತ್ತಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ.

ಮಗ ರೇಣುಕಾಸ್ವಾಮಿ ಕೊಲೆ ಕೇಸ್​ನಿಂದ ನೊಂದಿದ್ದ ಕುಟುಂಬ ಮನಶಾಂತಿಗಾಗಿ ಹಾವೇರಿ ಜಿಲ್ಲೆಯ ಕುರುವತ್ತಿ ಬಸವೇಶ್ವರ ದೇವಾಲಯಕ್ಕೆ ತೆರಳಿದ್ದಾರೆ. ತಂದೆ ಶಿವನಗೌಡರ್, ತಾಯಿ ರತ್ನಪ್ರಭ, ಮಗಳು ಸುಚೇತ ಅವರು ದೇವರ ದರ್ಶನಕ್ಕೆ ಹೋಗಿದ್ದಾರೆ.

ರೇಣುಕಾಸ್ವಾಮಿ ಕೊಲೆಯ ಬಳಿಕ 6 ತಿಂಗಳಿಂದ ಕುಟುಂಬ ನೊಂದಿತ್ತು. ಇದ್ದ ಒಬ್ಬ ಮಗನನ್ನು ಹಂತಕರು ಕೊಲೆ ಮಾಡಿದ್ದು, ಇದರಿಂದ ಆಘಾತಕ್ಕೆ ಒಳಗಾಗಿತ್ತು. ಆದರಿಂದು ದರ್ಶನ್​ಗೆ ಮಧ್ಯಂತರ ಜಾಮೀನಿನ ತೀರ್ಪಿನ ಸಮಯದಲ್ಲಿ ಮಾನಸಿಕ ನೆಮ್ಮದಿಗಾಗಿ ರೇಣುಕಾಸ್ವಾಮಿ ಕುಟುಂಬ ಮನೆ ದೇವರ ದರ್ಶನಕ್ಕೆ ತೆರಳಿದೆ.

ಮೆಡಿಕಲ್​ ಜಾಮೀನು

ಬಳ್ಳಾರಿಯಲ್ಲಿ 63 ದಿನಗಳನ್ನು ಕಳೆದ ದರ್ಶನ್​ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ದರ್ಶನ್​ ಪರ ವಕೀಲರು ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿತ್ತು. ಕೊನೆಗೆ ವೈದ್ಯರ ವರದಿ ಆಲಿಸಿದ ಕೋರ್ಟ್​ ಮಧ್ಯಂತರ ಜಾಮೀನಿ ನೀಡಿದೆ. 6 ವಾರಗಳ ಕಾಲ ಚಿಕಿತ್ಸೆಗಾಗಿ ಮೆಡಿಕಲ್​ ಜಾಮೀನು ನೀಡಿದೆ.

TOP