- ಐಪಿಎಲ್ ರಿಟೆನ್ಷನ್ ಲಿಸ್ಟ್ ಮೇಲೆ ಹೆಚ್ಚಿದ ಕುತೂಹಲ
- ನಾಳೆ ಒಳಗೆ ಫ್ರಾಂಚೈಸಿಗಳು ಲಿಸ್ಟ್ ಬಿಡುಗಡೆ ಮಾಡಬೇಕು
- 35 ಎಮೋಜಿಗಳನ್ನು ಹಂಚಿಕೊಂಡ ಸಿಎಸ್ಕೆ
ಐಪಿಎಲ್ ಫ್ರಾಂಚೈಸಿಗಳ ರಿಟೆನ್ಶನ್ ಲಿಸ್ಟ್ ಬಿಡುಗಡೆಗೆ ಕೌಂಟ್ಡೌನ್ ಶುವಾಗಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್, ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ಪೋಸ್ಟ್ ಒಂದನ್ನು ಮಾಡಿದೆ. ಇದು ಸಿಎಸ್ಕೆ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಪೋಸ್ಟ್ನಲ್ಲಿ ಒಂದಷ್ಟು ಎಮೋಜಿಗಳನ್ನು 35 ಎಮೋಜಿಗಳನ್ನು ಹಂಚಿಕೊಳ್ಳಲಾಗಿದೆ. ಸಿಂಬಾಲಿಕ್ ಎಮೋಜಿಗಳು ಒಬ್ಬೊಬ್ಬ ಸ್ಟಾರ್ ಆಟಗಾರರನ್ನು ಸೂಚಿಸುವಂತೆ ಇದೆ. ಅದನ್ನು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಳ್ತಿದ್ದಾರೆ. ಖಡ್ಗವನ್ನು ಜಡೇಜಾಗೆ ಕಂಪೇರ್ ಮಾಡಿದರೆ, ಪೋಸ್ಟ್ ಮಾಡಲಾಗಿರುವ ಹೆಲಿಕಾಪ್ಟರ್ನಲ್ಲಿ ಧೋನಿಯನ್ನು ನೋಡುತ್ತಿದ್ದಾರೆ. ಅದೇ ರೀತಿಯ ಸ್ಟಾರ್ ಎಮೋಜಿಯು ಕ್ಯಾಪ್ಟನ್ ಗಾಯಕ್ವಾಡ್ಗೆ ಕಂಪೇರ್ ಮಾಡಲಾಗುತ್ತಿದೆ. ಇನ್ನು, ಪೋಸ್ಟ್ಗೆ ನೀವು ಹುಡುಕುತ್ತಿರುವ ಜನರು ನಿಮ್ಮನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಡೆಡ್ಲೈನ್ ಡೇ ಎಂದು ಸಿಎಸ್ಕೆ ಬರೆದುಕೊಂಡಿದೆ.
ಸಿಎಸ್ಕೆ ಯಾರನ್ನೆಲ್ಲ ಉಳಿಸಿಕೊಳ್ತದೆ..?
ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಮತಿಶಾ ಪತಿರಣರನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಒಂದು ವೇಳೆ ಧೋನಿ ಐಪಿಎಲ್ ಆಡೋದು ಕನ್ಫರ್ಮ್ ಆದರೆ ಅವರೂ ಕೂಡ ತಂಡದ ಭಾಗವಾಗಲಿದ್ದಾರೆ.