Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Tv News
  • ಸ್ಮೃತಿ ಮಂದಾನ ಸೆಂಚುರಿ.. ಕಿವೀಸ್ ವಿರುದ್ಧ ಸರಣಿ ಗೆದ್ದ ಟೀಮ್ ಇಂಡಿಯಾ
0
prajadhvani
Wednesday, 30 October 2024 / Published in Tv News

ಸ್ಮೃತಿ ಮಂದಾನ ಸೆಂಚುರಿ.. ಕಿವೀಸ್ ವಿರುದ್ಧ ಸರಣಿ ಗೆದ್ದ ಟೀಮ್ ಇಂಡಿಯಾ

  • ಸ್ಮೃತಿ ಮಂದಾನ ಸೆಂಚುರಿ ಬಾರಿಸದಿದ್ದರೇ ಸರಣಿ ಕೈ ಜಾರುತ್ತಿತ್ತು
  • ಆರಂಭಿಕ ಬ್ಯಾಟರ್ಸ್​ ಇಂದ ಸಂಕಷ್ಟಕ್ಕೆ ಸಿಲುಕಿದ್ದ ನ್ಯೂಜಿಲೆಂಡ್
  • ಹಾಫ್​ಸೆಂಚುರಿ ಸಿಡಿಸಿ ತಂಡವನ್ನ ದಡ ಸೇರಿಸಿದ ನಾಯಕಿ ಕೌರ್

ನ್ಯೂಜಿಲೆಂಡ್​​ ಮಹಿಳಾ ಟೀಮ್ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂದಾನ ಅವರ ಭರ್ಜರಿ ಶತಕದ ನೆರವಿನಿಂದ ಭಾರತದ ಮಹಿಳಾ ತಂಡ ಗೆದ್ದು ಬೀಗಿದೆ. ಈ ಮೂಲಕ 2-1ರಿಂದ ಸರಣಿ ಗೆದ್ದುಕೊಂಡು ನಾಯಕಿ ಹರ್ಮನ್​ಪ್ರೀತ್ ಕೌರ್ ಪಡೆ ಸಂತಸ ವ್ಯಕ್ತಪಡಿಸಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಕ್ಯಾಪ್ಟನ್​ ಸೋಫಿ ಡಿವೈನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕಳೆದ ಪಂದ್ಯದಂತೆ ಆರಂಭಿಕ ಆಟಗಾರ್ತಿಯರು ಆಡಲಿಲ್ಲ. 88 ರನ್ ಇರುವಾಗಲೇ ಪ್ರಮುಖ 5 ವಿಕೆಟ್​ ಕಳೆದುಕೊಂಡಿತು. ಇದರಿಂದ ತೀವ್ರ ಸಂಕಷ್ಟಕ್ಕೆ ಕಿವೀಸ್ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರನ್​ಗಳು ಬಂದಿದ್ದರಿಂದ 49.5 ಓವರ್​ಗಳಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 232 ರನ್​ಗಳನ್ನ ಗಳಿಸಿತು.

ಈ ಟಾರ್ಗೆಟ್ ಬೆನ್ನು ಹತ್ತಿದ ಟೀಮ್ ಇಂಡಿಯಾ ಆರಂಭದಲ್ಲೇ ಮತ್ತೆ ವಿಫಲ ಅನುಭವಿಸಿತ್ತು. ಓಪನರ್ ಆಗಿ ಸ್ಮತಿ ಮಂದಾನ ಹಾಗೂ ಶಫಾಲಿ ವರ್ಮಾ ಕ್ರೀಸ್​ಗೆ​ ಬಂದಿದ್ದರು. ಆದರೆ ಶಫಾಲಿ ಕೇವಲ 12 ರನ್​ಗೆ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಬ್ಯಾಟಿಂಗ್ ಮಾಡಲು ಬಂದ ಯಾಸ್ತಿಕಾ ಭಾಟಿಯಾ ಕೆಲ ಹೊತ್ತು ಆಡಿದರು. ಆದರೆ 35 ರನ್​ಗಳಿಸಿ ಆಡುವಾಗ ಸೋಫಿಗೆ ಕ್ಯಾಚ್ ಕೊಟ್ಟರು. ಆದರೆ ಇನ್ನೊಂದು ಕಡೆ ಕ್ರೀಸ್ ಕಾಯ್ದುಕೊಂಡಿದ್ದ ಸ್ಮತಿ ಮಂದಾನ ತಮ್ಮ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. ನಾಯಕಿ ಹರ್ಮನ್​ಪ್ರೀತ್ ಜೊತೆ ಸೇರಿ ಒಳ್ಳೆಯ ಪಾರ್ಟನರ್​ಶಿಪ್​ನಲ್ಲಿ ರನ್ ಕೊಳ್ಳೆ ಹೊಡೆದರು.

122 ಎಸೆತಗಳನ್ನು ಎದುರಿಸಿದ ಸ್ಮತಿ ಮಂದಾನ 10 ಬೌಂಡರಿ ಸಮೇತ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಮೋದಿ ಸ್ಟೇಡಿಯಂ ದೊಡ್ಡದಾಗಿದ್ದರಿಂದ ಇಲ್ಲಿ ಮಹಿಳಾ ಆಟಗಾರ್ತಿಯರು ಸಿಕ್ಸರ್ ಸಿಡಿಸುವುದು ವಿರಾಳವಾಗಿರುತ್ತದೆ. ಹೀಗಾಗಿ ಈ ತಂಡದಲ್ಲಿ ಕೇವಲ 4 ಸಿಕ್ಸರ್​ಗಳು ಮಾತ್ರ ಬಂದಿದ್ದು ಅದು ಕಿವೀಸ್ ಆಟಗಾರ್ತಿಯರು ಬಾರಿಸಿದ್ದು ಆಗಿವೆ. ಸ್ಮತಿ ಮಂದಾನಗೆ ಉತ್ತಮ ಸಾಥ್ ಕೊಟ್ಟ ನಾಯಕಿ ಹರ್ಮನ್​ಪ್ರೀತ್ ಹಾಫ್​ಸೆಂಚುರಿ ಸಿಡಿಸುವ ಮೂಲಕ ತಂಡವನ್ನು ದಡ ಸೇರಿಸಿದರು. ಈ ಮೂಲಕ ಭಾರತ 44.4 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 236 ರನ್ ಗಳಿಸಿ ವಿಜಯ ದಾಖಲಿಸಿ ಸರಣಿ ಗೆದ್ದುಕೊಂಡಿತು.

What you can read next

ದರ್ಶನ್​ ಇವತ್ತೇ ರಿಲೀಸ್ ಆಗ್ತಾರಾ.. ವಕೀಲರು ಹೇಳಿದ್ದು ಏನು..?
ದರ್ಶನ್​​ಗೆ ಜಾಮೀನು ಮಂಜೂರು; ಬಳ್ಳಾರಿಗೆ ಆಗಮಿಸಿದ ಕುಟುಂಬಸ್ಥರು.. ಇಂದೇ ರಿಲೀಸ್ ಆಗ್ತಾರಾ?
ರೈತರ ಭೂಮಿ ಮೇಲೆ ವಕ್ಫ್​ ಕಣ್ಣು ಹಾಕಿತಾ..? ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP