- ಕೆಎಲ್ ರಾಹುಲ್ಗೆ ಬಿಗ್ ಶಾಕ್ ನೀಡಿದ ಎಲ್ಎಸ್ಜಿ
- ವೆಸ್ಟ್ ವಿಂಡೀಸ್ ಆಟಗಾರನ ಜೊತೆ LSG ಒಪ್ಪಂದ
- ಒಟ್ಟು ಐದು ಆಟಗಾರರ ಉಳಿಸಿಕೊಳ್ಳಲಿದೆ ಲಕ್ನೋ
ಕೆಎಲ್ ರಾಹುಲ್ಗೆ ಎಲ್ಎಸ್ಜಿ ಬಿಗ್ ಶಾಕ್ ನೀಡಿದ್ದು, ನಿಕೋಲಸ್ ಪೂರನ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಪೂರನ್ ಉಳಿಸಿಕೊಳ್ಳುವ ಪ್ರಕ್ರಿಯೆಯ ಮೊದಲ ಭಾಗವಾಗಿ ಫ್ರಾಂಚೈಸಿ ಮತ್ತು ಆಟಗಾರನ ನಡುವೆ ಒಪ್ಪಂದ ಏರ್ಪಟ್ಟಿದೆ.
ವೆಸ್ಟ್ ವಿಂಡೀಸ್ನ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿರುವ ಪೂರನ್ಗೆ 18 ಕೋಟಿ ನೀಡಿ ಎಲ್ಎಸ್ಜಿ ತಂಡದಲ್ಲೇ ಉಳಿಸಿಕೊಂಡಿದೆ. ಆ ಮೂಲಕ ಪೂರನ್ ಅವರೇ ಎಲ್ಎಸ್ಜಿ ನಾಯಕರಾಗುವ ಸಾಧ್ಯತೆ ಇದೆ. ಕಳೆದ ಸೀಸನ್ಗಳಲ್ಲಿ ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಪೂರನ್ಗೆ ಇದೆ.
ವರದಿಗಳ ಪ್ರಕಾರ ಎಲ್ಎಸ್ಜಿ ಮಾಲೀಕ ಸಂಜೀವ್ ಗೊಯೆಂಕಾ ಮತ್ತು ಪೂರನ್ ನಡುವೆ ಒಪ್ಪಂದ ಏರ್ಪಟ್ಟಿದೆ. 2023ರಲ್ಲಿ ಪೂರನ್ಗೆ ಎಲ್ಎಸ್ಜಿ 16 ಕೋಟಿ ನೀಡಿತ್ತು. ಇನ್ನು ಕನ್ನಡಿಗ ಕೆಎಲ್ ರಾಹುಲ್ಗೆ ಕ್ಯಾಪ್ಟನ್ ಆಗಿ ಮುಂದುವರಿಯುವಂತೆ ಎಲ್ಎಸ್ಜಿ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಇನ್ನು, ಎಲ್ಎಸ್ಜಿ ಒಟ್ಟು ಐದು ಆಟಗಾರರನ್ನು ಉಳಿಸಿಕೊಳ್ಳಲಿದೆ. ರವಿ ಬಿಷ್ಣೋಯಿ, ಮಯಾಂಕ್ ಯಾದವ್, ಆಯುಷ್ ಬದೋನಿ ಹಾಗೂ ಮೊಹ್ಸಿನ್ ಖಾನ್ ಅವರನ್ನು ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್