Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Top News
  • 147 ರನ್​ ಟಾರ್ಗೆಟ್​ ಮುಟ್ಟಲಾಗದ ಟೀಮ್ ಇಂಡಿಯಾ.. ಸ್ವಲ್ಪ ಮಾನ ಉಳಿಸಿದ ರಿಷಬ್ ಪಂತ್!
0
prajadhvani
Monday, 04 November 2024 / Published in Top News

147 ರನ್​ ಟಾರ್ಗೆಟ್​ ಮುಟ್ಟಲಾಗದ ಟೀಮ್ ಇಂಡಿಯಾ.. ಸ್ವಲ್ಪ ಮಾನ ಉಳಿಸಿದ ರಿಷಬ್ ಪಂತ್!

ಇತಿಹಾಸದಲ್ಲೇ ಮೊದಲ ಬಾರಿಗೆ ತವರಲ್ಲಿ ಭಾರತ ವೈಟ್​ವಾಶ್​

ಭಾರತದಲ್ಲಿ ಸರಣಿ ಗೆದ್ದ ಮೊದಲ ವಿದೇಶಿ ತಂಡ ಯಾವುದು?

ಪಂದ್ಯದಲ್ಲಿ ರೋಹಿತ್ ಪಡೆಯ ಪೆವಿಲಿಯನ್ ಪರೇಡ್ ಹೇಗಿತ್ತು?

ಯಾವ ಮೈದಾನದಲ್ಲಿ ಟೀಮ್​ ಇಂಡಿಯಾ ಇತಿಹಾಸ ಸೃಷ್ಟಿಸಿತ್ತೋ, ಅದೇ ಮೈದಾನದಲ್ಲಿ ಹಿಂದೆಂದೂ ಕಾಣದಂತಹ ಮುಖಭಂಗ ಅನುಭವಿಸಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ವೈಟ್​ವಾಶ್​ ಮುಖಭಂಗ ಅನುಭವಿಸಿದೆ. ಗೆದ್ದ ನ್ಯೂಜಿಲೆಂಡ್​ ಇತಿಹಾಸ ಸೃಷ್ಟಿಸಿದೆ. ವಾಂಖೆಡೆ ಅಂಗಳದಲ್ಲಿ ಸಾಧಾರಣ ಟಾರ್ಗೆಟ್​ ಬೆನ್ನತ್ತುವಲ್ಲಿ ಟೀಮ್​ ಇಂಡಿಯಾ ಎಡವಿದೆ.

ತವರಿನಲ್ಲಿ ಹೀನಾಯ ಮುಖಭಂಗ.!

ಮುಂಬೈ ಟೆಸ್ಟ್​ ಪಂದ್ಯದ 2ನೇ ದಿನದಾಟದ ಅಂತ್ಯ ಬಳಿಕ ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿ ಒಂದು ಸಮಾಧಾನ ಮೂಡಿತ್ತು. ಮೊದಲ 2 ಟೆಸ್ಟ್​ ಸೋತರೂ ಕನಿಷ್ಠ ಪಕ್ಷ ವೈಟ್​ವಾಶ್​ ಮುಖಭಂಗದಿಂದ ಪಾರಾಗೋ ಸಮಾಧಾನ ಮೂಡಿತ್ತು. ಆದ್ರೆ, 3ನೇ ದಿನದ ಆಟದಲ್ಲಿ ಆಗಿದ್ದು ಹೀನಾಯ ಮುಖಭಂಗ. 3ನೇ ದಿನದಾಟದ ಆರಂಭದಲ್ಲೇ ನ್ಯೂಜಿಲೆಂಡ್​ನ ಅಜಾಜ್​ ಪಟೇಲ್​ ಜಡೇಜಾ ಸ್ಪಿನ್​ ಬಲೆಗೆ ಬಿದ್ದರು. 174 ರನ್​ಗಳಿಗೆ ಆಲೌಟ್​ ಆದ ಕಿವೀಸ್​ ಪಡೆ ಭಾರತದ ಗೆಲುವಿಗೆ 147 ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿತು.

147 ರನ್​ ಬಿಗ್​ ಟಾರ್ಗೆಟ್​​ ಏನಾಗಿರಲಿಲ್ಲ

ಹೋಮ್​ಗ್ರೌಂಡ್​​ನಲ್ಲಿ, ವಿಶ್ವ ಶ್ರೇಷ್ಟ ಬ್ಯಾಟ್ಸ್​ಮನ್​ಗಳ ದಂಡನ್ನೆ ಹೊಂದಿದ್ದ ಟೀಮ್​ ಇಂಡಿಯಾಗೆ 147 ರನ್​ ಬಿಗ್​ ಟಾರ್ಗೆಟ್​​ ಏನಾಗಿರಲಿಲ್ಲ. ಆದ್ರೆ, ಈ ಸೋ ಕಾಲ್ಡ್​ ವರ್ಲ್ಡ್​​ ಕ್ಲಾಸ್​ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿಬಿಟ್ಟರು. ಪೆವಿಲಿಯನ್​ ಪರೇಡ್​ಗೆ ಮುನ್ನುಡಿ ಬರೆದಿದ್ದೇ ಕ್ಯಾಪ್ಟನ್​ ರೋಹಿತ್​ ಶರ್ಮಾ. ರೋಹಿತ್​ ಶರ್ಮಾ 11 ರನ್​ ಗಳಿಸಿ ಔಟಾದ್ರೆ, ಪ್ರಿನ್ಸ್​​ ಶುಭ್​ಮನ್​ ಗಿಲ್​, ಕಿಂಗ್​ ವಿರಾಟ್​ ಕೊಹ್ಲಿ ಒಂದು ರನ್​ಗಳಿಸುವಷ್ಟರಲ್ಲೇ ಸುಸ್ತಾದರು. ಇವರ ಹಿಂದೆ ಯಶಸ್ವಿ ಜೈಸ್ವಾಲ್​ ಕೂಡ ಡಗೌಟ್​ಗೆ ದೌಡಾಯಿಸಿದರು.

ಇನ್ನು ಹೋಮ್​​ಗ್ರೌಂಡ್​ ವಾಂಖೆಡೆಯಲ್ಲಿ ಮನೆ ಮಗ​​ ಸರ್ಫರಾಜ್​ ಖಾನ್​ ಕೂಡ 1 ರನ್​​ಗಳಿಸಿ ನಿರ್ಗಮಿಸಿದರು. ಆಲ್​​ರೌಂಡರ್ ರವೀಂದ್ರ​​ ಜಡೇಜಾ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು.

ಮಾನ ಉಳಿಸಿದ ‘ಫೈಟರ್’​ ರಿಷಬ್​ ಪಂತ್​.!

ಹೀನಾಯ ಸೋಲಿನ ನಡುವೆ ಸ್ವಲ್ಪ ಮಟ್ಟಿಗೆ ಮಾನ ಉಳಿದಿದೆ ಅಂದ್ರೆ ಅದಕ್ಕೆ ಕಾರಣ ರಿಷಬ್​ ಪಂತ್​. 28 ರನ್​ಗೆ 4 ವಿಕೆಟ್​ ಕಳೆದುಕೊಂಡ ಸಂದರ್ಭದಲ್ಲಿ ಕಣಕ್ಕಿಳಿದ ಫೈಟರ್​ ಪಂತ್​​, ಹೋರಾಟ ನಡೆಸಿದರು. ನ್ಯೂಜಿಲೆಂಡ್​ ಬೌಲರ್​ಗಳ ದಾಳಿಗೆ ಕೌಂಟರ್​ ಅಟ್ಯಾಕ್​ ನಡೆಸಿದ ಪಂತ್​ 9 ಬೌಂಡರಿ, 1 ಸಿಕ್ಸರ್​ ಸಿಡಿಸಿ ಹಾಫ್​ ಸೆಂಚುರಿ ಪೂರೈಸಿದರು. 64 ರನ್​ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದ ಪಂತ್​, ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇದ್ರೊಂದಿಗೆ ಗೆಲುವಿನ ಕನಸೂ ನುಚ್ಚು ನೂರಾಯಿತು.

ಅಶ್ವಿನ್​ ಆಟ 8 ರನ್​ಗಳಿಗೆ ಅಂತ್ಯವಾದ್ರೆ, ಆಕಾಶ್​ ದೀಪ್​ ಮೊದಲ ಎಸೆತದಲ್ಲೇ ಕ್ಲೀನ್​ಬೋಲ್ಡ್​ ಆದ್ರು. ಸುಂದರ್​ 12 ರನ್​ಗಳಿಸಿ ಔಟಾಗೋದ್ರೊಂದಿಗೆ ಟೀಮ್​ ಇಂಡಿಯಾ ಆಲೌಟ್​ ಆಯಿತು.

ವಿಶ್ವ ಶ್ರೇಷ್ಠ ಆಟಗಾರರನ್ನ ಹೊಂದಿರೋ ವಿಶ್ವ ಶ್ರೇಷ್ಠ ತಂಡ ಕೇವಲ 147 ರನ್​ಗಳ ಗುರಿ ಬೆನ್ನತ್ತಲಾಗದೇ ಆಲೌಟ್​ ಆಗಿ 25 ರನ್​ ಅಂತರದಲ್ಲಿ ಸೋಲಿಗೆ ಶರಣಾಯಿತು. ಇತಿಹಾಸದಲ್ಲೇ ಮೊದಲ ಬಾರಿ ತವರಿನಲ್ಲಿ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ವೈಟ್​ವಾಶ್​ ಮುಖಭಂಗ ಅನುಭವಿಸಿದ ಅಪಖ್ಯಾತಿಗೆ ರೋಹಿತ್​ ಪಡೆ ಗುರಿಯಾಯಿತು. 3-0 ಅಂತರದಲ್ಲಿ ಸರಣಿ ಗೆದ್ದ ನ್ಯೂಜಿಲೆಂಡ್​​, ಭಾರತದ ನೆಲದಲ್ಲಿ ಸರಣಿ ಗೆದ್ದ ಮೊದಲ ವಿದೇಶಿ ತಂಡ ಅನ್ನೋ ದಾಖಲೆ ಬರೆಯಿತು.

What you can read next

ಗೃಹಲಕ್ಷ್ಮಿ ಹಣದಿಂದ ಖಾರ ಪುಡಿ ಮಾಡೋ ಯಂತ್ರ ಖರೀದಿಸಿದ ಮಹಿಳೆ!
ಕರ್ನಾಟಕ ಲೋಕಾಯುಕ್ತದಿಂದ Group- C ಹುದ್ದೆಗಳ ನೇಮಕಾತಿ.. ಕೊನೆ ದಿನಾಂಕ ಯಾವಾಗ?
ಓಮ್ನಿ ಕಾರಿಗೆ ತಗುಲಿದ ಬೆಂಕಿ.. ಕಾರಿನಲ್ಲೇ ವ್ಯಾಪಾರಿ ಸಜೀವ ದಹನ

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP