ದೊಡ್ಡ ಗಾತ್ರದ ಕುಂಬಳಕಾಯಿ ಬೆಳೆದು ದಾಖಲೆ ನಿರ್ಮಾಣ
ಕುಂಬಳಕಾಯಿಯನ್ನೇ ದೋಣಿಯನ್ನಾಗಿ ಮಾರ್ಪಾಡು ಮಾಡಿದ ವ್ಯಕ್ತಿ
ವಿಶ್ವ ದಾಖಲೆ ಬರೆಯಲು ಕಾರಣವಾದ ಮನೆಯಲ್ಲಿ ಬೆಳೆದ ಕುಂಬಳಕಾಯಿ
ವಿಶ್ವ ದಾಖಲೆ ಅಂದ್ರೆ ಸಾಮಾನ್ಯವಲ್ಲ. ಕೆಲವರು ಸಾಧನೆ ಮಾಡಬೇಕು ಎಂದು ಹಗಲು ಇರುಳು ಪ್ರಯತ್ನಿಸಿರುತ್ತಾರೆ. ತನ್ನ ಹೆಸರಿನಲ್ಲಿ ದಾಖಲೆಯನ್ನು ನಿರ್ಮಿಸಬೇಕು ಎಂದು ಚಿಂತಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ದೊಡ್ಡ ಗಾತ್ರದ ಕುಂಬಳಕಾಯಿ ಬೆಳೆದು ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದಾರೆ. ಮಾತ್ರವಲ್ಲದೆ, ಅದನ್ನೇ ದೋಣಿಯನ್ನಾಗಿ ಮಾರ್ಪಾಡು ಮಾಡಿ 73.50 ಕಿ.ಮೀ ಕ್ರಮಿಸಿದ್ದಾರೆ.
ಅಮೆರಿಕ ಮೂಲದ ರಿಯಲ್ ಎಸ್ಟೇಟ್ ನಡೆಸುವ ಕೃಷಿಕ ಗ್ಯಾರಿ ಕ್ರಿಸ್ಟೆನ್ಸೆನ್ 1,224 ಪೌಂಡ್ ತೂಕದ ಕುಂಬಳಕಾಯಿ ಬೆಳೆಸಿದ್ದಾರೆ. ಅತಿ ದೊಡ್ಡ ಗಾತ್ರದ ಕುಂಬಳಕಾಯಿ ಇದಾಗಿದ್ದು, ಅನ್ನು ದೋಣಿಯನ್ನಾಗಿ ಮಾರ್ಪಡಿಸಿದ್ದಾರೆ.
ಗ್ಯಾರಿ ಕ್ರಿಸ್ಟೆನ್ಸೆನ್ ಕುಂಬಳಕಾಯಿಯನ್ನು ದೋನಿಯನ್ನಾಗಿ ಮಾರ್ಪಡಿಸಿದ್ದಲ್ಲದೆ 26 ಗಂಟೆಗಳ ಕಾಲ ಅದರಲ್ಲಿ ವಿಹಾರ ನಡೆಸಿದ್ದಾರೆ. ವಾಷಿಂಗ್ಟನ್ನಿಂದ ವ್ಯಾಂಕೋವರ್ವರೆಗೆ ಸುಮಾರು 73.50 ಕಿ.ಮೀ ಕ್ರಮಿಸಿದ್ದಾರೆ. ಆ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.
46 ವರ್ಷ ಗ್ಯಾರಿ ಕ್ರಿಸ್ಟೆನ್ಸೆನ್ 2011ರಿಂದ ದೊಡ್ಡ ಗಾತ್ರದ ಕುಂಬಳಕಾಯಿಯನ್ನು ಬೆಳೆಸುತ್ತಿದ್ದಾರೆ. 2013ರಲ್ಲಿ ವೆಸ್ಟ್ ಕೋಸ್ಟ್ ಜೈಂಟ್ ಕುಂಬಳಕಾಯಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ದೋಣಿ ಗಾತ್ರದಲ್ಲಿ ಅದನ್ನು ಕೆತ್ತಿ ಪ್ರಯಾಣಿಸಲು ಮುಂದಾದರು. ಹೀಗೆ ನಾಲ್ಕು ಬಾರಿ ಗೆದ್ದಿದ್ದಾರೆ.