ಸಾವಿರಾರು ಮಕ್ಕಳು ಮತ್ತು ಹದಿಹರೆಯದವರಿಗೆ ಯೋಜನೆ
ಸುಮಾರು 1 ಲಕ್ಷ ಮಹಿಳೆಯರು ಈ ಸೇವೆಯನ್ನು ಪಡೆಯಲಿದ್ದಾರೆ
ನೀತಾ ಅಂಬಾನಿ ಮುಂದಿನ ಟಾರ್ಗೆಟ್ ಏನು ಗೊತ್ತಾ..?
ಶ್ರೀಮಂತ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ರಿಲಯನ್ಸ್ ಫೌಂಡೇಶನ್ನ ಅಧ್ಯಕ್ಷರಾಗಿ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಿಲಯನ್ಸ್ ಫೌಂಡೇಶನ್ 10 ವರ್ಷ ಪೂರ್ಣಗೊಳಿಸಿದ ಸವಿ ನೆನಪಿಗಾಗಿ ನೀತಾ ಅಂಬಾನಿ, ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ.
ಮಕ್ಕಳು, ಹದಿಹರೆಯದವರು ಮತ್ತು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸರ್ HN ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ (Sir H.N. Reliance Foundation Hospital) 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆಯ ಭರವಸೆ ನೀಡಿದ್ದಾರೆ. ಆರೋಗ್ಯ ಸೇವಾ ಯೋಜನೆಯ ಭಾಗವಾಗಿ ಬಡ ಮಕ್ಕಳಿಗೆ ವಿಶೇಷ ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ.
- ಹೃದ್ರೋಗದಿಂದ ಬಳಲುತ್ತಿರುವ 50,000 ಮಕ್ಕಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ
- 50,000 ಮಹಿಳೆಯರಿಗೆ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ನ ಉಚಿತ ತಪಾಸಣೆ ಮತ್ತು ಚಿಕಿತ್ಸೆ
- 10,000 ಹೆಣ್ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ಗೆ ಉಚಿತ ಲಸಿಕೆ ಪೂರೈಕೆ
ರಿಲಯನ್ಸ್ ಫೌಂಡೇಶನ್ ಒಗ್ಗಟ್ಟಿನಿಂದ ಒಂದು ದಶಕ ಪೂರೈಸಿದೆ. 10 ವರ್ಷಗಳಿಂದ ದೇಶಕ್ಕೆ ಆರೋಗ್ಯಕರ, ಉಜ್ವಲ ಭವಿಷ್ಯವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಆಸ್ಪತ್ರೆಯನ್ನು ವಿಶ್ವದರ್ಜೆಯನ್ನಾಗಿ ಮಾಡುವುದು ನಮ್ಮ ಗುರಿ ಎಂದು ಕಾರ್ಯಕ್ರಮದಲ್ಲಿ ನಿತಾ ಅಂಬಾನಿ ಹೇಳಿದ್ದಾರೆ.