ಪುಣೆ ಪಿಚ್ನಲ್ಲೂ ಫ್ಲಾಪ್.. ವಾಂಖೆಡೆಯಲ್ಲೂ ಫ್ಲಾಪ್.!
ಟೀಮ್ ಇಂಡಿಯಾದ ಸ್ಪಿನ್ ಪಾರಮ್ಯಕ್ಕೆ ಬಿತ್ತಾ ಬ್ರೇಕ್?
4 ವರ್ಷಗಳಲ್ಲಿ ಬಟಾಬಯಲಾಗಿದೆ ಸ್ಪಿನ್ ಸಾಮರ್ಥ್ಯ
ಸ್ಪಿನ್ ಟೀಮ್ ಇಂಡಿಯಾದ ಸ್ಟ್ರೆಂಥ್. ಸ್ಪಿನ್ನರ್ಗಳನ್ನ ಚೆಂಡಾಡೋ ವಿಚಾರದಲ್ಲಿ ಭಾರತೀಯ ಬ್ಯಾಟರ್ಗಳ ಮುಂದೆ ಯಾರೂ ಇಲ್ಲ ಅನ್ನೋ ಮಾತಿದೆ. ವಿಶ್ವ ಕ್ರಿಕೆಟ್ ಲೋಕವೇ ಈ ಮಾತನ್ನ ನಂಬಿದೆ. ಆದ್ರೆ, ನ್ಯೂಜಿಲೆಂಡ್ ಸರಣಿ ಅಂತ್ಯದ ಬಳಿಕ ನೋಡಿದ್ರೆ, ಈ ಮಾತು ಸುಳ್ಳಾಗಿದೆ. ಸ್ಪಿನ್ನರ್ಗಳ ಮುಂದೆ ಟೀಮ್ ಇಂಡಿಯಾದ ವೀರಾಧಿವೀರರು ಮಕಾಡೆ ಮಲಗಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯನ್ ಬ್ಯಾಟರ್ಸ್ ಸಾಮರ್ಥ್ಯ ಪೇಸ್ ಅಟ್ಯಾಕ್ ಎದುರು ಬಟಾಬಯಲಾಗಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ಸೋಲುಂಡ ಬಳಿಕ ಪುಣೆ ಹಾಗೂ ವಾಂಖೆಡೆ ಪಿಚ್ನಲ್ಲೇ ಹೊಸ ಗೇಮ್ ಆಡಿದ ಟೀಮ್ ಮ್ಯಾನೇಜ್ಮೆಂಟ್ ಸ್ಪಿನ್ ಟ್ರ್ಯಾಕ್ ಮೊರೆ ಹೋಗಿತ್ತು. ಅಂತಿಮವಾಗಿ ತಾವೇ ತೋಡಿದ ಹಳ್ಳಕ್ಕೆ ಟೀಮ್ ಇಂಡಿಯಾ ಬಿತ್ತು.
ಸ್ಪಿನ್ ಎದುರು ಮಕಾಡೆ ಮಲಗಿದ ವೀರಾಧಿವೀರರು.!
ಪೇಸ್ ಟ್ರ್ಯಾಕ್ನಲ್ಲಿ ಮುಗ್ಗರಿಸಿದ್ದ ಟೀಮ್ ಇಂಡಿಯಾ 2 ಮತ್ತು 3ನೇ ಟೆಸ್ಟ್ನಲ್ಲಿ ಸ್ಪಿನ್ ಟ್ರ್ಯಾಕ್ ನಿರ್ಮಿಸಿ ಕಣಕ್ಕಿಳಿಯಿತು. ಆದ್ರೆ, ತಾವೇ ತೋಡಿದ ಹಳ್ಳಕ್ಕೆ ಟೀಮ್ ಇಂಡಿಯಾ ಆಟಗಾರರು ಬಿದ್ರು. ಪುಣೆಯಲ್ಲಿ ನಡೆದ 2ನೇ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ 18 ವಿಕೆಟ್ಗಳನ್ನ ಟೀಮ್ ಇಂಡಿಯಾ ಕಳೆದುಕೊಳ್ತು. ಇನ್ನು, ಮುಂಬೈನಲ್ಲೂ 16 ವಿಕೆಟ್ಗಳನ್ನ ಸ್ಪಿನ್ನರ್ಗಳಿಗೆ ಟೀಮ್ ಇಂಡಿಯಾ ಬ್ಯಾಟರ್ಸ್ ಒಪ್ಪಿಸಿದ್ರು.
ಸ್ಪಿನ್ ಎದುರು ಟೀಮ್ ಇಂಡಿಯಾದ ಆಟ ಅಂತ್ಯ.?
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಫ್ಲಾಪ್ ಆದ ಬೆನ್ನಲ್ಲೇ, ಹೀಗೊಂದು ಚರ್ಚೆ ಶುರುವಾಗಿದೆ. ಹಲವು ದಶಕಗಳಿಂದ ಇದ್ದ ಸ್ಪಿನ್ ಟೀಮ್ ಇಂಡಿಯಾದ ಸ್ಟ್ರೇಂಥ್ ಅನ್ನೋ ಮಾತು ಸದ್ಯ ಸುಳ್ಳಾಗಿದೆ. ಸ್ಪಿನ್ ಎದುರು ಟೀಮ್ ಇಂಡಿಯಾದ ಪಾರಮ್ಯಕ್ಕೆ ಫುಲ್ ಸ್ಟಾಫ್ ಬೀಳೋ ದಿನಗಳ ಹತ್ತಿರಬಂದಂತಿದೆ. ಹೀಗೆ ಹೇಳ್ತಿರೋದಕ್ಕೆ ನ್ಯೂಜಿಲೆಂಡ್ ಸರಣಿಯ ವೈಫಲ್ಯ ಮಾತ್ರ ಕಾರಣವಲ್ಲ. 2020ರ ನಂತರದ ಆಟ ಟೀಮ್ ಇಂಡಿಯಾದ ಸ್ಪಿನ್ ವೀಕ್ನೆಸ್ನ ಎಕ್ಸ್ಪೋಸ್ ಮಾಡಿವೆ.
ಈಗ ಸ್ಪಿನ್ ಎದುರು ಟೀಮ್ ಇಂಡಿಯಾದ ಪರದಾಟ ಹೇಗಿದೆ ಅನ್ನೋದಕ್ಕೆ ಮುನ್ನ ಈ ಹಿಂದಿನ ಎರಡು ದಶಕಗಳಲ್ಲಿ ಸ್ಪಿನ್ ಎದುರು ಇಂಡಿಯನ್ ಬ್ಯಾಟರ್ಸ್ ದರ್ಬಾರ್ ಹೇಗಿತ್ತು ಅನ್ನೋದನ್ನ ಮೊದಲು ನೋಡೋಣ..
2000ರಿಂದ 2009ರವರೆಗೆ ಸ್ಪಿನ್ ಎದುರು ಆಟ
ಇನ್ನಿಂಗ್ಸ್ 69
ವಿಕೆಟ್ಸ್ 231
ಬಾಲ್ಸ್/ವಿಕೆಟ್ 76.3
ರನ್ರೇಟ್ 3.3
2010ರಿಂದ 2019ರವರೆಗೆ ಸ್ಪಿನ್ ಎದುರು ಆಟ
ಇನ್ನಿಂಗ್ಸ್ 81
ವಿಕೆಟ್ಸ್ 326
ಬಾಲ್ಸ್/ವಿಕೆಟ್ 76.4
ರನ್ರೇಟ್ 3.6
ಎರಡು ದಶಕಗಳ ಕಾಲ ಸ್ಪಿನ್ ಎದುರು ಉತ್ತಮ ಟ್ರ್ಯಾಕ್ ರೆಕಾರ್ಡ್ನ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಹೊಂದಿದ್ರು. ಆದರೆ, 2020ರ ಬಳಿಕ 4 ವರ್ಷಗಳಲ್ಲೇ ಟೀಮ್ ಇಂಡಿಯಾದ ಪರ್ಫಾಮೆನ್ಸ್ ಪಾತಾಳಕ್ಕೆ ಕುಸಿದಿದೆ.
2020ರ ಬಳಿಕ ಸ್ಪಿನ್ ಎದುರು ಟೀಮ್ ಇಂಡಿಯಾ
ಇನ್ನಿಂಗ್ಸ್ 37
ವಿಕೆಟ್ಸ್ 233
ಬಾಲ್ಸ್/ವಿಕೆಟ್ 54.3
ರನ್ರೇಟ್ 3.6
2020ರ ಬಳಿಕ 37 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 233 ವಿಕೆಟ್ಗಳನ್ನ ಕಳೆದುಕೊಂಡಿದೆ. 54.3 ಎಸೆತಕ್ಕೊಂದರಂತೆ ವಿಕೆಟ್ ಒಪ್ಪಿಸಿರುವ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು, 3.6ರ ರನ್ ರೇಟ್ ಹೊಂದಿದ್ದಾರೆ.
2020ರ ಬಳಿಕ 37 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 233 ವಿಕೆಟ್ಗಳನ್ನ ಕಳೆದುಕೊಂಡಿದೆ. 54.3 ಎಸೆತಕ್ಕೊಂದರಂತೆ ವಿಕೆಟ್ ಒಪ್ಪಿಸಿರುವ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು, 3.6ರ ರನ್ ರೇಟ್ ಹೊಂದಿದ್ದಾರೆ.