ಉತ್ಸವದಲ್ಲಿ ತನ್ನಡೆಗೆ ವೀಕ್ಷಕರನ್ನು ಸೆಳೆಯುವ ಯೂನಿಯನ್ ಪರೇಡ್
ಸ್ವರ್ಗವೇ ಧರೆಗೆ ಇಳಿದಂತೆ ಇರಲಿದೆ ಸಮಾರಂಭ, ಎಷ್ಟು ದೇಶ ಭಾಗಿ.?
ಅದ್ಧೂರಿ ಉತ್ಸವದಲ್ಲಿ ಪಾಲ್ಗೊಳ್ಳಲಿರೋ 30,000ಕ್ಕೂ ಹೆಚ್ಚು ಪ್ರದರ್ಶಕರು
ಯುಎಇಯ ಅತಿದೊಡ್ಡ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಶೇಖ್ ಜಾಯೆದ್ ಉತ್ಸವ ಅದ್ಧೂರಿಯಾಗಿ ಪ್ರಾರಂಭವಾಗಿದೆ. 2024-2025 ಸಾಲಿನ ಶೇಖ್ ಜಾಯೆದ್ ಉತ್ಸವ ಅಬುಧಾಬಿಯ ಅಲ್ ವಾತ್ಬಾದಲ್ಲಿ ನವೆಂಬರ್ 1ರಿಂದ 2025ರ ಫೆಬ್ರವರಿ 28 ರವರೆಗೆ ಜಗಮಗಿಸುತಾ ಐಷಾರಾಮಿಯಾಗಿ ನಡೆಯಲಿದ್ದು ವಿಶ್ವದ ಗಮನವನ್ನೇ ಸೆಳೆಯಲಿದೆ.
ಈ ಉತ್ಸವವು ಯುಎಇಯ ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಕಾರ್ಯಕ್ರಮ ನಡೆಯುವ 120 ದಿನಗಳವರೆಗೂ ವಿವಿಧ ಮನರಂಜನೆ ಮತ್ತು ಸ್ಥಳೀಯರು ಸಾಂಸ್ಕೃತಿಕ ಚಟುವಟಿಕೆಗಳು ಅನಾವರಣಗೊಳ್ಳುತ್ತವೆ. ಇದನ್ನು ನೋಡಲು ದೇಶ, ವಿದೇಶಗಳಿಂದ ಸಾಕಷ್ಟು ಜನರು ಯುಎಇಗೆ ಭೇಟಿ ನೀಡುತ್ತಿದ್ದಾರೆ. ಉತ್ಸವದಲ್ಲಿ ಯೂನಿಯನ್ ಪರೇಡ್ ಎಲ್ಲ ವೀಕ್ಷಕರನ್ನು ತನ್ನಡೆಗೆ ಸೆಳೆಯುತ್ತದೆ. ಏಕೆಂದರೆ ಇದು ಯುಎಇ ಜನರ ಏಕತೆ ಮತ್ತು ಶಕ್ತಿಯನ್ನು ಸಂಕೇತಿಸುವ ಮಹತ್ವದ ಆಚರಣೆಯಾಗಿದೆ. ಜೊತೆಗೆ ಯುಎಇಯ ಪಿತಾಮಹ, ದಿವಂಗತ ಸುಲ್ತಾನ್ ಅಲ್ ನಹ್ಯಾನ್ ಅವರ ಪರಂಪರೆ ಗೌರವಿಸುತ್ತದೆ.
ಈ ಐಷಾರಾಮಿ ಕಾರ್ಯಕ್ರಮದಲ್ಲಿ 6,000ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 1,000ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ. ವಿಶ್ವದ 27 ದೇಶಗಳಿಂದ 30,000ಕ್ಕೂ ಹೆಚ್ಚು ಪ್ರದರ್ಶಕರು ಇದರಲ್ಲಿ ಭಾಗವಹಿಸಲಿದ್ದಾರೆ. ಸ್ವರ್ಗವೇ ಧರೆಗೆ ಇಳಿದಂತೆ ಸಮಾರಂಭ ಇರಲಿದ್ದು ಈ ಬಾರಿ ಹಲವಾರು ದೇಶಗಳು ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದರಿಂದ ಉತ್ಸವದ ಮೆರಗನ್ನು ಇನ್ನಷ್ಟು ಪಸರಿಸಲಿವೆ ಎಂದು ಹೇಳಲಾಗಿದೆ. ಯೂನಿಯನ್ ಡೇ ಸೆಲೆಬ್ರೇಷನ್ಸ್, ನ್ಯೂ ಇಯರ್, ಲೈಟ್ ಮತ್ತು ಲೇಸರ್ ಫೆಸ್ಟಿವಲ್, ಚಿಲ್ಡ್ರನ್ ಮತ್ತು ಕಾರ್ಟೂನ್ ಕ್ಯಾರೆಕ್ಟರ್ಸ್, ಆರ್ಟ್ಸ್ ಮತ್ತು ಫ್ಲೋರಲ್ ಫೆಸ್ಟಿವಲ್, ಈಸ್ಟ್ ಏಷ್ಯಾ ಫೆಸ್ಟಿವಲ್, ಫುಡ್ ಅಂಡ್ ಸ್ವೀಟ್ಸ್ ಮತ್ತು ರಂಜಾನ್ ಫೆಸ್ಟಿವಲ್ ಸೇರಿರುತ್ತವೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನೇತೃತ್ವದಲ್ಲಿ ಈ ಅದ್ಧೂರಿ ಸಮಾರಂಭ ನಡೆಯುತ್ತಿದೆ. ಉಪಾಧ್ಯಕ್ಷ ಶೇಖ್ ಮನ್ಸೂರ್ ಬಿನ್ ಜಾಯೆದ್ ಅಲ್ ನಹ್ಯಾನ್, ಫೆಸ್ಟಿವಲ್‌ನ ಉನ್ನತ ಸಂಘಟನಾ ಸಮಿತಿಯ ಅಧ್ಯಕ್ಷ ಶೇಖ್ ಸುಲ್ತಾನ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಸಹಾಕಾರ ಇರಲಿದೆ. ಈ ಬಾರಿಯ ಶೇಖ್ ಜಾಯೆದ್ ಉತ್ಸವವೂ ಹಯಕುಂ (Hayakum) ಥೀಮ್ ಹೆಸರಲ್ಲಿ ನಡೆಯುತ್ತದೆ. ಇದು ಪ್ರತಿ ವರ್ಷ ಯುಎಇಯಲ್ಲಿ ನಡೆಯುತ್ತದೆ.