Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Rajakiya
  • ಮಾಜಿ ಸಚಿವರ ಜೊತೆ ಹಸಿಬಿಸಿ ಆಪರೇಷನ್.. ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯ ಬಂಧನ; ಸಿಕ್ಕಿಬಿದ್ದಿದ್ದೇ ರೋಚಕ!
0
prajadhvani
Monday, 04 November 2024 / Published in Rajakiya

ಮಾಜಿ ಸಚಿವರ ಜೊತೆ ಹಸಿಬಿಸಿ ಆಪರೇಷನ್.. ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯ ಬಂಧನ; ಸಿಕ್ಕಿಬಿದ್ದಿದ್ದೇ ರೋಚಕ!

ಅಶ್ಲೀಲ ಚಾಟ್ ಹಾಗೂ ಆಡಿಯೋ ಕಾಲ್‌ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌!

ಗರುಡ ಮಾಲ್ ಬಳಿ ಮಂಜುಳಾ, ಪತಿ ಶಿವರಾಜ್ ಪಾಟೀಲ್ ಬಂಧನ

ಮಂಜುಳಾ ಪಾಟೀಲ್, ಕಲಬುರಗಿಯ ನಲಪಾಡ್​​ ಬ್ರಿಗೇಡ್​​ ಅಧ್ಯಕ್ಷೆ

ಈ ರಾಜಕಾರಣವೆಂಬ ಮಹಾಸಾಗರದಲ್ಲಿ ಇರದ ಪಟುಗಳಿಲ್ಲ. ಇಲ್ಲಿ ನೇರಾನೇರ ಫೈಟ್​ ಇದೆ. ಒಳೇಟು ಇದೆ. ವೈಷಮ್ಯವಿದೆ. ಕೊನೆಗೆ ಹೆಣ್ಣನ್ನು ಮುಂದಿಟ್ಟುಕೊಂಡು ಆಡುವ ಹೊಲಸು ರಾಜಕಾರಣವೂ ಇದರ ಭಾಗವೇ. ಸದ್ಯ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹನಿಟ್ರ್ಯಾಪ್ ಬಯಲಾಗಿದೆ.

ಇವರ ಹೆಸರು ಮಂಜುಳಾ ಪಾಟೀಲ್. ಕಲಬುರಗಿಯ ನಲಪಾಡ್​​ ಬ್ರಿಗೇಡ್​​ ಅಧ್ಯಕ್ಷೆ. ರೀಲ್ಸ್​ ಮಾಡ್ತಾ ತನ್ನ ಕೆಲಸ ಆಯ್ತು ಅಂತಿದ್ರೆ ಏನೂ ಆಗ್ತಿರಲಿಲ್ಲ. ಉತ್ತರ ಕರ್ನಾಟದ ಜಾನಪದ ಹಾಡುಗಳಿಗೆ ಜಬರ್ದಸ್ತ್​ ಆಗಿ ರೀಲ್ಸ್​ ಮಾಡ್ತಿದ್ದವರು ಈಗ ಪೊಲೀಸ್ ಜೀಪ್ ಹತ್ತಿದ್ದಾರೆ. ಕಲಬುರಗಿ ಮೂಲದ ರೀಲ್ಸ್‌ ರಾಣಿ ಮಂಜುಳಾ ಸಿಸಿಬಿ ಪೊಲೀಶರ ವಶದಲ್ಲಿದ್ದಾರೆ.

ಇದು ಸಾಮಾನ್ಯ ಕೇಸ್​ ಅಲ್ಲ. ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್‌ ಆರೋಪದ ಕೇಸ್‌. ಅಶ್ಲೀಲ ಆಡಿಯೋ, ಅಶ್ಲೀಲ ಚಾಟಿಂಗ್‌, ಅಶ್ಲೀಲ ವಿಡಿಯೋ ಕಾಲ್‌ ಇಟ್ಕೊಂಡ್‌ 20 ಲಕ್ಷಕ್ಕೆ ಬ್ಲ್ಯಾಕ್​ಮೇಲ್​ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಮಾತ್ರವಲ್ಲದೇ ಇದೇ ಆರೋಪ ಸಂಬಂಧ ಮಂಜುಳಾ ಪಾಟೀಲ್ ಮತ್ತು ಪತಿ ಶಿವರಾಜ್ ಪಾಟೀಲ್ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

20 ಲಕ್ಷಕ್ಕೆ ಮಾಜಿ ಸಚಿವರ ಹನಿಟ್ರ್ಯಾಪ್​?

ಮಾಜಿ ಸಚಿವರ ಜೊತೆ ಚಾಟಿಂಗ್ ಮಾಡಿದ್ದನ್ನ ಇಟ್ಟುಕೊಂಡು ಆರೋಪಿಗಳು ಬ್ಲಾಕ್ ಮೇಲ್ ಮಾಡ್ತಿದ್ದರು. ವಾಟ್ಸಾಆ್ಯಪ್​ನಲ್ಲಿ ಅಶ್ಲೀಲ ಚಾಟ್ ಹಾಗೂ ಆಡಿಯೋ ಕಾಲ್‌ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ರಂತೆ. 3 ದಿನದ ಹಿಂದೆ ಮಾಜಿ ಸಚಿವರ ಪುತ್ರನ ಭೇಟಿ ಮಾಡಿದ್ದ ಆರೋಪಿಗಳು, ನಿಮ್ಮ ತಂದೆ ನಿಂದನೆಯ ಸಂದೇಶ ಕಳಿಸಿದ್ದಾರೆ. ಇದೆಲ್ಲ ಹೊರಗಡೆ ಬರಬಾರದು ಅಂದ್ರೆ 20 ಲಕ್ಷ ರೂಪಾಯಿ ಕೊಡಬೇಕೆಂದು ಪದೇ ಪದೇ ಬೇಡಿಕೆ ಇಡ್ತಿದ್ರಂತೆ. ಈ ಸಂಬಂಧ ಮಾಜಿ ಸಚಿವರ ಪುತ್ರ ನೀಡಿದ ದೂರಿನಡಿ ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಹಣ ಕೊಡುವುದಾಗಿ ಕರೆದಿದ್ದು ಬಂದ ಮಂಜುಳಾ ಹಾಗೂ ಪತಿ ಶಿವರಾಜ್ ಪಾಟೀಲ್ ದಂಪತಿಯನ್ನು ಬೆಂಗಳೂರಿನ ಗರುಡ ಮಾಲ್ ಬಳಿ ಬಂಧಿಸಿದ್ದಾರೆ. ಈಗ ಪೊಲೀಸರು ಪತಿ-ಪತ್ನಿಯನ್ನು ಬಂಧಿಸಿದ್ದು ವಿಚಾರಣೆಗೆ 8 ದಿನ ಕಸ್ಟಡಿಗೆ ಪಡೆದಿದ್ದಾರೆ.

What you can read next

VIDEO: ಚಹಾ ಮಾಡುತ್ತಿದ್ದ ಮಾವನಿಗೆ ದೈಹಿಕವಾಗಿ ಹಲ್ಲೆ ಮಾಡಿದ ಬಿಜೆಪಿ ಮಹಿಳಾ ನಾಯಕಿ
ವಿಜಯಪುರದಲ್ಲಿ ವಕ್ಫ್​ ಆಸ್ತಿ ವಿವಾದ: ಎಲ್ಲ ಗೊಂದಲಗಳಿಗೆ ತೆರೆ ಎಳೆದ ಸಚಿವ ಎಂ.ಬಿ.ಪಾಟೀಲ್​
ಪೂಜೆ ಮಾಡುವಾಗ ಬಿದ್ದ ಹೂವುಗಳು.. ಹೆಚ್​.ಡಿ ಕುಮಾರಸ್ವಾಮಿಗೆ ಶುಭ ಸೂಚನೆ ನೀಡಿತಾ ದೇವರು..?

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP