Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Arogya
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
0
prajadhvani
Monday, 04 November 2024 / Published in Arogya

ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

ಜನಸಂದಣಿಯಲ್ಲಿರುವ ಮಕ್ಕಳಿಗೆ ಬಹುಬೇಗ ಹರಡುತ್ತೆ ಟೈಫಾಯಿಡ್​

ಶುದ್ಧ ಆಹಾರ, ಶುದ್ಧ ನೀರು ನೀಡುವ ಬಗ್ಗೆ ಹೆಚ್ಚು ಇರಲಿ ನಿಮ್ಮ ಗಮನ

ನಲ್ಲಿಯಲ್ಲಿ ಬರುವ ನೀರನ್ನು ಗಮನಿಸಿ, ಕುದಿಸಿದ ನೀರು ಕುಡಿಯಬೇಕು

ಜನಸಂದಣಿಯಲ್ಲಿ ವಾಸಿಸುವ ಮಕ್ಕಳಿಗೆ ಬಹುಬೇಗ ಟೈಫಾಯಿಡ್​ನಂತ ಸೋಂಕು ರೋಗಗಳು ಬಹುಬೇಗ ಹರಡಿಕೊಳ್ಳುತ್ತವೆ. ಟೈಫಾಯಿಡ್​​ ಬ್ಯಾಕ್ಟಿರಿಯಾದಿಂದ ಬರುವಂತಹ ಒಂದು ವಿಷಮ ಜ್ವರ ಸಲ್ಮೊನೆಲ್ಲಾ ಟೈಪಿ ಅನ್ನೋ ಬ್ಯಾಕ್ಟಿರಿಯಾದಿಂದ ಈ ವಿಷಯ ಜ್ವರ ಹರಡುತ್ತದೆ. ಈ ಒಂದು ಸೋಂಕು ಹೆಚ್ಚಾಗಿ ಆರೋಗ್ಯವಲ್ಲದ ಹಾಗೂ ಶುಚಿಯಲ್ಲದ ಆಹಾರವನ್ನು ಸೇವಿಸುವುದರಿಂದ ಇದು ಹೆಚ್ಚು ಬಾಧಿಸುತ್ತದೆ. ಕಲುಷಿತ ನೀರು, ಕೊಳಕು ಪ್ರದೇಶದಲ್ಲಿ ಅತಿಹೆಚ್ಚು ಜನರು ಇರುವಲ್ಲಿ ವಾಸಿಸುವುದು ಇವೆಲ್ಲಾ ಕಾರಣಗಳಿಂದ ಈ ಒಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಮಕ್ಕಳಲ್ಲಿ ಬಹುಬೇಗ ಈ ಟೈಫಾಯಿಡ್ ಸಮಸ್ಯೆ ಹರಡಲು ಕಾರಣಗಳನ್ನು ನೋಡುತ್ತಾ ಹೋದರೆ ಅನೇಕ ಕಾರಣಗಳು ಇವೆ.

ಈಗಾಗಲೇ ಹೇಳಿದಂತೆ ಜನಸಂದಣಿ ಇರುವ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಸರಿಯಾದ ಶುದ್ಧವಾದ ನೀರು ಸಿಗದೇ ಹೋದದಲ್ಲಿ ಅಂತಹ ನೀರನ್ನು ಅವರು ಕುಡಿದಿದ್ದೇ ಆದಲ್ಲಿ, ಆರೋಗ್ಯವಲ್ಲದ ಶುಚಿಯಿಲ್ಲದ ಊಟ, ಹಣ್ಣು ಸೇವಿಸುವುದರಿಂದ ಟೈಫಾಯಿಡ್ ಮಕ್ಕಳಿಗೆ ಅಂಟಿಕೊಳ್ಳುತ್ತದೆ. ಅದು ಪ್ರಮುಖವಾಗಿ ಪೈಪ್​ಲೈನ್ ಒಡೆದು ಹೋಗಿರುವುದರಿಂದ ಕೆಲವೊಂದು ಬಾರಿ ನಲ್ಲಿ ನೀರು ಕಲುಷಿತಗೊಂಡಿರುತ್ತದೆ. ಅಂತಹ ನೀರನ್ನು ಕುದಿಸದೇ ಹಾಗೆ ಕುಡಿದಿದ್ದೇ ಆದಲ್ಲಿ ಟೈಫಾಯಿಡ್​​ನಂತಹ ಸಮಸ್ಯೆಗಳು ಮಕ್ಕಳಲ್ಲಿ ಕಾಣುತ್ತವೆ. ಅದರಲ್ಲೂ ಪ್ರಮುಖವಾಗಿ ಬೇಸಿಗೆಯಲ್ಲಿ ಟೈಫಾಯಿಡ್​​ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಬೇಸಿಗೆಯಲ್ಲಿ ನದಿ ಹಾಗೂ ಬಾವಿಯ ನೀರುಗಳು ಕೆಳಮಟ್ಟಕ್ಕೆ ಹೋಗಿ ಹೆಚ್ಚು ಕಡಿಮೆ ಕಲುಷಿತಗೊಂಡಿರುತ್ತವೆ. ನಲ್ಲಿಯಲ್ಲಿ ಬರುವ ಇಂತಹ ನೀರನ್ನು ಕಾಯಿಸಿ ಕುಡಿಯದೇ ಹೋದಲ್ಲಿ ಆರೋಗ್ಯಕ್ಕೆ ಟೈಫಾಯಿಡ್​ನಂತಹ ಅಪಾಯಗಳು ಕಟ್ಟಿಟ್ಟ ಬುತ್ತಿ. ಅದರಲ್ಲೂ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ.

ಇನ್ನು ಈಗಾಗಲೇ ಹೇಳಿದಂತೆ ಅನಾರೋಗ್ಯಕರವಾದ ಹಾಗೂ ಸ್ವಚ್ಛತೆಯಿಂದ ಕೂಡಿರದ ಆಹಾರವನ್ನು ಸೇವಿಸಿದಾಗಲು ಈ ಸಮಸ್ಯೆ ಬರುತ್ತದೆ. ಪ್ರಮುಖವಾಗಿ ಹಿಂದಿನ ದಿನದ ಆಹಾರ ತಿನ್ನುವುದರಿಂದ, ಶೇಖರಿಸಿಟ್ಟ ಆಹಾರ ಹಾಗೂ ಫ್ರಿಡ್ಜ್​ನಲ್ಲಿಟ್ಟಿರುವ ತಂಪಾದ ಆಹಾರ ಸೇವಿಸುವುದರಿಂದಲೂ ಟೈಫಾಯಿಡ್​ನಂತಹ ಸಮಸ್ಯೆಗಳು ಮಕ್ಕಳನ್ನು ಕಾಡುತ್ತದೆ. ಸ್ಟ್ರೀಟ್ ಫುಡ್​ಗಳು ಕೂಡ ಟೈಫಾಯಿಡ್​ಗೆ ಮಹಾದ್ವಾರ ತೆರೆದಂತೆಯೇ ಸರಿ

ಅತಿಯಾದ ಆಂಟಿಸಿಡ್​ಗಳ ಬಳಕೆ ಅಂದ್ರೆ ಸೋಡಿಯಂ ಹೈಡ್ರೋಕಾರ್ಬರೇಟ್​ ಇರುವ ಔಷಧಿಗಳನ್ನು ಅಂದ್ರೆ ಇನೋ, ಆಸ್ಪರಿನ್ ನಂತಹ ಮಾತ್ರೆಗಳು ಹೀಗೆ ಆಂಟಿಸಿಡ್ ಬಳಕೆ ಹೆಚ್ಚು ಮಾಡಿದಲ್ಲಿ ಹಾಗೂ ಮಕ್ಕಳು ಹೆಚ್ಚು ಜನಸಂದಣಿಯಲ್ಲಿ ಬೆಳೆಯುವುದರಿಂದ ಈ ಟೈಫಾಯಿಡ್​ನಂತಹ ಕಾಯಿಲೆಗಳು ಬರುತ್ತವೆ. ಜನಸಂದಣಿಯಲ್ಲಿ ಹೆಚ್ಚು ಇರುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇವುಗಳಿಂದ ನಾವು ಪಾರಾಗಲು ಹಲವು ಉಪಾಯಗಳಿವೆ.

ಮನೆಯನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರಮುಖವಾಗಿ ಟಾಯ್ಲೆಟ್ ಹಾಗೂ ಬಾತ್​ರೂಮ್​ಗಳನ್ನು ಆಗಾಗ ಸ್ವಚ್ಛವಾಗಿ ತೊಳೆಯಬೇಕು. ಹ್ಯಾಂಡ್​ ವಾಷ್​ಗಳನ್ನು ಕ್ಲೀನಾಗಿ ಇಡಬೇಕು. ಶುದ್ಧವಾದ ಆಹಾರ ನೀರು ಮಕ್ಕಳಿಗೆ ಕೊಡಬೇಕು. ಅಲ್ಲಿ ಇಲ್ಲಿ ನೀರು ಕುಡಿಯುವುದು, ಬೀದಿ ಬದಿಯ ಆಹಾರವನ್ನು ತಿನ್ನದಂತೆ ಮಕ್ಕಳಿಗೆ ತಿಳಿ ಹೇಳಬೇಕು. ಅದರಲ್ಲೂ ಈಗ ಮಳೆಗಾಳ ಈ ವೇಳೆ ಟೈಫಾಯಿಡ್​ಗೆ ಸಂಕ್ರಮಣ ಕಾಲವಿದ್ದಂತೆ ಬಹುಬೇಗ ಮಕ್ಕಳನ್ನು ಆವರಿಸಿಕೊಂಡು ಬಿಡುತ್ತದೆ. ಹೀಗಾಗಿ ಕನಿಷ್ಟ 30-45 ಸಕೆಂಡ್​ಗಳ ಕಾಲ ಸಬೂನಿನಿಂದ ಕೈ ತೊಳೆಯಲು ಮಕ್ಕಳಿಗೆ ಹೇಳಬೇಕು. ಕೇವಲ ಇಷ್ಟು ಮಾತ್ರವಲ್ಲ, ಟೈಫಾಯಿಡ್​ ನಿಯಂತ್ರಿಸುವ ಲಸಿಕೆಗಳು ಕೂಡ ಇವೆ. ಸರಿಯಾದ ಸಮಯಕ್ಕೆ ಸರಿಯಾದ ಲಸಿಕೆ ಕೊಡಿಸುವು ಮೂಲಕವೂ ನಾವು ಟೈಫಾಯಿಡ್ ಬರದಂತೆ ತಡೆಯಬಹುದು.

What you can read next

ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments
  • ​ದಂಗಲ್​ ಸ್ಟೈಲ್​ನಲ್ಲೇ ತಂದೆ ಆಸೆ ಈಡೇರಿಸಿದ ಹೆಣ್ಣುಮಕ್ಕಳು; ಕನಸುಗಳಿಗೆ ಸ್ಫೂರ್ತಿ ತುಂಬಿದ್ದು ಹೇಗೆ?

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP