ಹಾಸನಾಂಬೆ, ಸಿದ್ದೇಶ್ವರಸ್ವಾಮಿ ದರ್ಶನ ಪಡೆದ ಹೆಚ್‌ಡಿಕೆ ಕುಟುಂಬ
ಪತ್ನಿ, ಸೊಸೆ, ಮೊಮ್ಮಗನ ಜೊತೆ ದೇವರ ದರ್ಶನ ಪಡೆದ ಹೆಚ್‌ಡಿಕೆ
ಕುಮಾರಸ್ವಾಮಿಯವರಿಗೆ ಶುಭ ಸೂಚನೆ ನೀಡಿತಾ ಸಿದ್ದೇಶ್ವರ ಸ್ವಾಮಿ?
ಹಾಸನ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸಿದ್ದೇಶ್ವರಸ್ವಾಮಿಯ ದರ್ಶನ ಪಡೆಯುವಾಗ ಬಲಗಡೆಯಿಂದ ಒಂದಲ್ಲ, ಎರಡಲ್ಲ ಒಟ್ಟು 3 ಹೂಗಳು ಬಿದ್ದಿದ್ದು ಇದು ದೇವರ ಶುಭ ಸೂಚನೆ ಎನ್ನಲಾಗುತ್ತಿದೆ. ಇದರಿಂದ ಹೆಚ್.ಡಿ ಕುಮಾರಸ್ವಾಮಿ, ಪತ್ನಿ ಅನಿತಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಕುಟುಂಬ ಸಮೇತರಾಗಿ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಸಿದ್ದೇಶ್ವರಸ್ವಾಮಿ ದರ್ಶನಕ್ಕೆ ಪತ್ನಿ, ಸೊಸೆ, ಮೊಮ್ಮಗನ ಜೊತೆ ಬಂದಿದ್ದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಅವರು ಗರ್ಭಗುಡಿ ಹೊರಭಾಗದಲ್ಲಿ ನಿಂತು ದೇವರ ದರ್ಶನ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಪೂಜಾರಿ ಪೂಜೆ ಸಲ್ಲಿಸುವಾಗ ಸಿದ್ದೇಶ್ವರ ಸ್ವಾಮಿಯ ಬಲಗಡೆಯಿಂದ 3 ಹೂವುಗಳು ಬಿದಿವೆ. ಇದು ಶುಭ ಸೂಚನೆ ಎನ್ನಲಾಗಿದೆ.
ದೇವರ ಮೇಲಿಂದ ಹೂವು ಬೀಳುವುದನ್ನ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೈ ಸನ್ನೆ ಮಾಡಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯ ಬಿಡುವಿಲ್ಲದ ಕೆಲಸ ನಡುವೆ ಕುಟುಂಬ ಸಮೇತರಾಗಿ ಹೆಚ್.ಡಿ ಕುಮಾರಸ್ವಾಮಿ ಅವರು ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದುಕೊಂಡಿದ್ದಾರೆ.