ರಂಗನಾಯಕ ನೇ*ಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ
‘ಎದ್ದೇಳು ಮಂಜುನಾಥ’ ಎಂದ ಪ್ರತಿಭಾವಂತನಿಗೆ ಏನಾಗಿತ್ತು?
ಅನುಮಾನಗಳನ್ನು ಹುಟ್ಟುಹಾಕಿದೆ ಡೈರೆಕ್ಟರ್ ಗುರುಪ್ರಸಾದ್ ಸಾ*ವು
ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಸಾವಿನ ಬೆನ್ನಲ್ಲೇ ಹತ್ತಾರು ಅನುಮಾನಗಳು ಶುರುವಾಗಿವೆ. ಗುರುಪ್ರಸಾದ್ ಪತ್ನಿಯ ದೂರಿನ ಮೇಲೆ ಮಾದನಾಯಕಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪತಿಯ ಸಾವಿನ ಹಿಂದೆ ಅನುಮಾನವಿಲ್ಲ ಎಂದರೂ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಸ್ಪೆಷಲ್ ಡೈರೆಕ್ಟರ್. ‘ಎದ್ದೇಳು ಮಂಜುನಾಥ’ ಎಂದ ಪ್ರತಿಭಾವಂತ. ಬೆಳ್ಳಿ ತೆರೆ ಮಾತ್ರವಲ್ಲ, ಕಿರುತೆರೆಯಲ್ಲೂ ಮಿಂಚು ಹರಿಸಿದ ಚಂದನವನದ ರಂಗನಾಯಕ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಾಣಿಸಿದ್ದಾರೆ. ಇವರ ಸಾವು ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಮಠದ ‘ಗುರು’ ಸಾವಿಗೆ ಶರಣಾಗಿದ್ಯಾಕೆ?
ಹೌದು, ಹಿಂದೊಮ್ಮೆ ನಾವು ಕ್ಲಾಪ್ ಹೊಡಿಯೋದಲ್ಲ, ಜನ ಕ್ಲಾಪ್ ಹೊಡಿಬೇಕು ಅಂತಿದ್ದ ಗುರುಪ್ರಸಾದ್, ಈಗ ಸದ್ದು ಮಾಡದೇ ಮರೆಯಾಗಿದ್ದಾರೆ. ಬದುಕಿನ ಜಂಜಾಟಗಳಿಂದ ಬಹು ದೂರ ಸರಿದಿದ್ದಾರೆ. ಸಹಜವಾಗಿ ಗುರುಪ್ರಸಾದ್ ಸಾವು ಚಿತ್ರರಂಗಕ್ಕೆ ಆಘಾತ ತರಿಸಿದೆ. ಪ್ರತಿಭಾವಂತ ನಿರ್ದೇಶಕ ಕನ್ನಡಕ್ಕೊಂದು ಆಸ್ಕರ್ ತರಬೇಕೆಂದು ಕನಸು ಕಂಡಿದ್ದ ಗುರುಪ್ರಸಾದ್ ಅಗಲಿಕೆ ಬಿಗ್ ಶಾಕ್ ನೀಡಿದೆ. ನೆಲಮಂಗಲ ಬಳಿಯ ಮಾದನಾಯಕಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು, ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಿರ್ದೇಶಕ ಗುರುಪ್ರಸಾದ್ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ. ಇದೀಗ ಗುರುಪ್ರಸಾದ್ ಸಾವಿನ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಗುರುಪ್ರಸಾದ್ರ 2ನೇ ಪತ್ನಿ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಪತಿಯ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ, ಆದ್ರೂ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಈ ದೂರಿನ ಬೆನ್ನಲ್ಲೇ ಮಾದನಾಯಕಹಳ್ಳಿ ಠಾಣೆ ಪೊಲೀಸರು ಗುರುಪ್ರಸಾದ್ ಮೊಬೈಲ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆ ಹಿಂದೆ ಏನಿದೆ ‘ಗುರು’?
ತನಿಖೆ 1 : ಆತ್ಮಹತ್ಯೆ ಆದ ದಿನ ಯಾರಿಗೆಲ್ಲಾ ಕರೆ ಮಾಡಿದ್ರು ಎಂದು ಪರಿಶೀಲನೆ
ತನಿಖೆ 2 : ಪ್ರಾಥಮಿಕ ತನಿಖೆಯಲ್ಲಿ ಅತಿಯಾದ ಸಾಲ ಸಾವಿಗೆ ಕಾರಣ ಎಂದಿದೆ
ತನಿಖೆ 3 : ಸುಮಾರು 3 ಕೋಟಿಯಷ್ಟು ಸಾಲ ಮಾಡಿಕೊಂಡಿರೋ ಅನುಮಾನ
ತನಿಖೆ 4 : ಬ್ಯಾಂಕ್ ದಾಖಲೆಗಳ ಪರಿಶೀಲನೆಗೂ ಮುಂದಾದ ಪೊಲೀಸರು
ತನಿಖೆ 5 : ಬ್ಯಾಂಕ್ ದಾಖಲೆ ಜೊತೆ ಗೂಗಲ್ ಪೇ, ಫೋನ್ ಪೇ ಪರಿಶೀಲನೆ
ತನಿಖೆ 6 : ಯಾರಿಂದ ಎಷ್ಟು ಹಣ ಪಡೆದಿದ್ರು? ಯಾರಿಗೆ ಹಣ ರಿಟರ್ನ್ ಮಾಡಿದ್ರು?
ತನಿಖೆ 7 : ಇದರ ಜೊತೆಗೆ ಯಾರಿಂದಲಾದ್ರೂ ಒತ್ತಡ ಇತ್ತಾ ಅನ್ನೋ ಬಗ್ಗೆ ತನಿಖೆ
ತನಿಖೆ 8 : ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯ್ತಾ ಇರೋ ಪೊಲೀಸರು
ತನಿಖೆ 9 : ನೇಣು ಬಿಗಿದುಕೊಂಡ ಮನೆಯಲ್ಲಿ ಎಣ್ಣೆ ಬಾಟಲಿ ಕೂಡ ಸಿಕ್ಕಿದೆ
ತನಿಖೆ 10 : ಎಣ್ಣೆಯಲ್ಲಿ ವಿಷವನ್ನು ಬೆರೆಸಿಕೊಂಡಿರೋ ಬಗ್ಗೆಯೂ ಅನುಮಾನ
ತನಿಖೆ 11 : ಶರೀರದಲ್ಲಿ ಯಾವುದಾದರೂ ವಿಷ ಬೆರೆತಿದ್ಯಾ ಅಂತಾನೂ ತನಿಖೆ
ಮಠ, ಎದ್ದೇಳು ಮಂಜುನಾಥ್, ಡೈರೆಕ್ಟರ್ಸ್ ಸ್ಪೇಷಲ್ ಸೇರಿ ಇತ್ತೀಚಿನ ರಂಗನಾಯಕ ಸಿನಿಮಾ ಸೇರಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದ ಗುರುಪ್ರಸಾದ್ ಈಗ ನೆನಪು ಮಾತ್ರ. ಪ್ರತಿಭಾವಂತ ನಿರ್ದೇಶಕ ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ದುರಂತ.