ವ್ಯಕ್ತಿತ್ವವನ್ನು ಗುರುತಿಸಲಿರುವ ಹಲವು ಮಾರ್ಗಗಳಲ್ಲಿ ಕೇಶ ವಿನ್ಯಾಸವು ಒಂದು
ಮಧ್ಯ ಬೈತಲೆ ತೆಗೆಯುವವರಲ್ಲಿ ಈ ಯಾವ ರೀತಿಯ ವ್ಯಕ್ತಿತ್ವವು ಕಾಣಿಸುತ್ತದೆ?
ಅತಿಯಾದ ಭಾವುಕತೆಯಿಂದ ಇರುವವರ ಹೇರ್ಸ್ಟೈಲ್ ಹೇಗಿರುತ್ತದೆ ಗೊತ್ತಾ?
ನಾವು ಜೀವನದಲ್ಲಿ ಏನನ್ನು ಆಯ್ಕೆ ಮಾಡಿಕೊಳ್ಳುತ್ತೇವೊ ಅದು ನಮ್ಮ ವ್ಯಕ್ತಿತ್ವದ ಒಂದು ಗುರುತಾಗಿ, ಒಂದು ಕುರುಹುವಾಗಿ ಉಳಿದುಕೊಳ್ಳುತ್ತದೆ ಎಂಬ ವಾದ ಬಹಳ ಕಾಲದಿಂದಲೂ ಇದೆ. ನಮ್ಮ ಮುಖದ ಭಾವ, ನಾವು ನಮ್ಮ ಬೀರುವಿನಿಂದ ಕೈಗೆತ್ತಿಕೊಳ್ಳುವ ನಮ್ಮ ಬಟ್ಟೆಯ ಬಣ್ಣ, ನಮ್ಮ ಮಾತು, ಇವೆಲ್ಲವೂ ಕೂಡ ನಮ್ಮ ವ್ಯಕ್ತಿತ್ವದ ಒಂದು ಬಿಂದುವಾಗಿಯೇ ಗುರುತಿಸಿಕೊಳ್ಳುತ್ತವೆ. ಇನ್ನೂ ಒಂದು ಹೈರಾಣಾಗುವ ವಿಷಯ ಅಂದ್ರೆ ಅದು ನಮ್ಮ ಹೇರ್ಸ್ಟೈಲ್ ಅಂದ್ರೆ ನಮ್ಮ ಕೇಶ ವಿನ್ಯಾಸ. ನಮ್ಮ ಕೇಶ ವಿನ್ಯಾಸವೂ ಕೂಡ ನಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ ಎಂದು ಹೇಳಲಾಗುತ್ತದೆ.
ಕೇಶ ವಿನ್ಯಾಸವು ನಮ್ಮನ್ನು ನಾವು ಆದಷ್ಟು ಚೆಂದವಾಗಿಟ್ಟುಕೊಳ್ಳಲು ಮಾಡಿಕೊಳ್ಳುವ ಅಲಂಕಾರಗಳಲ್ಲಿ ಒಂದು. ಅದರಲ್ಲೂ ಹೆಣ್ಣು ಮಕ್ಕಳಂತೂ ನೂರಾರು ಬಗೆಯ ಕೇಶವಿನ್ಯಾಸದೊಂದಿಗೆ ನಿತ್ಯ ಒಂದೊಂದು ರೀತಿಯಲ್ಲಿ ಕಂಗೊಳಿಸುತ್ತಾರೆ. ತುರುಬು ಕಟ್ಟುವುದರಿಂದ ಹಿಡಿದು ಗಾಳಿಗೆ ಹಾರುವ ಫ್ರೀ ಹೇರ್ತನಕವೂ ಅವರಲ್ಲಿ ಕೇಶವಿನ್ಯಾಸಗಳು ಇವೆ. ಈ ಕೇಶ ವಿನ್ಯಾಸಗಳು ಹೆಣ್ಣು ಮಕ್ಕಳ ವ್ಯಕ್ತಿತ್ವವನ್ನು ಗುರುತಿಸುತ್ತವೆ.

ಮಧ್ಯ ಬೈತಲೆ ತೆಗೆಯುವವರು ಶಾಂತವಾಗಿರುತ್ತಾರೆ
ಭಾರತೀಯ ಹೆಣ್ಣು ಮಕ್ಕಳಲ್ಲಿ ನಾವು ಹೆಚ್ಚು ನೋಡುವುದು ಮಧ್ಯ ಬೈತಲೆ ತೆಗೆದು ಹೆರಳನ್ನು ನೀಟಾಗಿ ಹೆಣೆದು, ಇಲ್ಲವೇ ಹಿಂದೆಯೆಂದು ಕ್ಲಿಪ್ ಹಾಕಿ ಫ್ರೀಯಾಗಿ ಬಿಡುವ ಶೈಲಿ ಪ್ರಚಲಿತದಲ್ಲಿದೆ.ಈ ರೀತಿಯಾಗಿ ಕೇಶವಿನ್ಯಾಸ ಮಾಡುವವರಲ್ಲಿ ಹೆಚ್ಚು ಜನರು ತುಂಬಾ ಶಾಂತಪ್ರಿಯರಾಗಿ ಇರುತ್ತಾರೆ ಎನ್ನಲಾಗುತ್ತದೆ. ಅದು ಮಾತ್ರವಲ್ಲ ಅವರದ್ದು ಬಹಿರ್ಮುಖಿ ವ್ಯಕ್ತಿತ್ವ ಎಂದು ಹೇಳಲಾಗುತ್ತದೆ. ಅಂದರೆ ಅವರು ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಾರೆ ಎನ್ನಲಾಗುತ್ತದೆ.

ಇನ್ನು ಕೆಲವು ಹೆಣ್ಣು ಮಕ್ಕಳು ಬಲಗಡೆ ಬೈತಲೆಯನ್ನು ತೆಗೆದು ಕೇಶ ವಿನ್ಯಾಸ ಮಾಡಿಕೊಳ್ಳುತ್ತಾರೆ. ಇವರು ಹೆಚ್ಚು ಭಾವುಕರಾಗಿ ಇರುತ್ತಾರೆ ಎಂದು ಹೇಳಲಾಗುತ್ತದೆ. ಕೇವಲ ಭಾವುಕರು ಮಾತ್ರವಲ್ಲ ಅಷ್ಟೇ ಕ್ರಿಯಾಶೀಲರು ಹಾಗೂ ಸಂವೇದನಾಶೀಲರು ಎಂದೇ ವ್ಯಾಖ್ಯಾನಿಸಲಾಗಿದೆ. ಅತೀಯಾದ ಭಾವುಕತೆಯ ಜೊತೆಗೆ ಇವರು ಅಷ್ಟೇ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಸದಾ ಭಾವುಕರಾಗಿರುವ ಇವರು, ಜನರೊಂದಿಗೆ ಅಷ್ಟೇ ಸಹಾನುಭೂತಿಯಿಂದ ಇರುತ್ತಾರಂತೆ.

ಎಡಗಡೆ ಬೈತಲೆ ಕೇಶ ವಿನ್ಯಾಸದವರ ವ್ಯಕ್ತಿತ್ವ ಎಂತಹದು?
ಇವರು ಸಿಕ್ಕಾಪಟ್ಟೆ ಓಪನ್ ಮೈಡೆಂಡ್, ಹೇಳುವುದನ್ನು ನೇರವಾಗಿ ಹೇಳು ಎದ್ದು ಹೋಗುವಂತಹ ವ್ಯಕ್ತಿತ್ವ.ಅಷ್ಟೇ ಆತ್ಮವಿಶ್ವಾಸಿಗಳು ಕೂಡ. ಆಮೇಲೆ ಸವಾಲುಗಳನ್ನು ಸರಳವಾಗಿ ಸ್ವೀಕರಿಸುವ ಗುಣವುಳ್ಳವರು ಎಂದು ಕೂಡ ಹೇಳಲಾಗುತ್ತದೆ.ಎಲ್ಲವನ್ನೂ ಅಳೆದು ತೂಗಿಯೇ ಅವರು ಮಾತನಾಡುತ್ತಾರೆ ಇವರಲ್ಲಿ ಭಾವುಕತೆಯನ್ನುವುದು ಅಷ್ಟೊಂದು ಆಳವಾಗಿ ಬೇರೂರಿರುವುದಿಲ್ಲ ಎಂದು ಹೇಳಲಾಗಿದೆ.
ಕುದುರೆ ಬಾಲದಂತಹ ಕೇಶ ವಿನ್ಯಾಸ
High Ponytail Hair Style ಅಂದ್ರೆ ಸದಾ ಕುದುರೆ ಬಾಲದ ರೀತಿಯಲ್ಲಿರುವ ಕೇಶ ವಿನ್ಯಾಸ ಮಾಡುವವರು ಭಾವುಕರಾಗಿದ್ದರೂ ಕೂಡ ಅಷ್ಟೊಂದು ಸೂಕ್ಷ್ಮ ಮನಸ್ಥಿತಿಯವರಾಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಅವರಲ್ಲಿ ಆತ್ಮವಿಶ್ವಾಸ ಎನ್ನುವುದು ವಿಪರೀತವಾಗಿರುತ್ತದೆ. ಹಾಗಂತ ಅತಿಯಾದ ಆತ್ಮವಿಶ್ವಾಸವಲ್ಲ. ಅವರಿಗೆ ಅವರ ಶಕ್ತಿಯ ಮೇಲೆ ಬಲವಾದ ನಂಬಿಕೆ ಇರುತ್ತದೆ. ಅವರ ಆ್ಯಟಿಟ್ಯೂಡ್ ಅವರನ್ನು ತುಂಬಾ ಗಟ್ಟಿಗೊಳ್ಳಿಸುವ ಮಟ್ಟಕ್ಕೆ ಇರುತ್ತದಯಂತೆ. ಹೀಗೆ ಹಲವು ರೀತಿಯ ಕೇಶ ವಿನ್ಯಾಸಗಳು ಅವರರ ವ್ಯಕ್ತಿತ್ವವನ್ನು ಹಲವು ರೀತಿಯಲ್ಲಿ ಬಣ್ಣಿಸುತ್ತವೆ. ಆಯಾ ಹೇರ್ಸ್ಟೈಲ್ಗೆ ತಕ್ಕಂತೆ ಅವರ ವ್ಯಕ್ತಿತ್ವ ಇರುತ್ತದೆ. ಈಗ ನಿಮ್ಮ ಹೇರ್ಸ್ಟೈಲ್ ಯಾವುದು ಅದಕ್ಕೆ ತಕ್ಕಂತೆ ನಿಮ್ಮ ವ್ಯಕ್ತಿತ್ವ ಇದೆಯಾ ಅಂತ ಒಮ್ಮೆ ಹೋಲಿಕೆ ಮಾಡಿಕೊಳ್ಳಿ.




