ಧೂಮಪಾನ ಆರೋಗ್ಯಕ್ಕೆ ಹಾನಿಕಾರ ಎಂದ ಶಾರುಖ್ ಖಾನ್
‘ಕಿಂಗ್’ ಖಾನ್ ಸಿಗರೇಟ್ ಬಿಡಲು ಬಲವಾದ ಕಾರಣವೊಂದಿದೆ
ಹುಟ್ಟುಹಬ್ಬಕ್ಕೆ ಸರ್ಪ್ರೈಸ್.. ಲೈಫ್ ಸ್ಟೈಲ್ ಬದಲಾಯಿಸಿದ ಶಾರುಖ್
ಬಾಲಿವುಡ್ ನಟ ಶಾರುಖ್ ಖಾನ್ ನವೆಂಬರ್ 2 ರಂದು ಹುಟ್ಟುಹಬ್ಬವನ್ನು ಆದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. 59 ವರ್ಷದ ನಟ ಅಭಿಮಾನಿಗಳ ಜೊತೆಗೂ ಬರ್ತ್ಡೇ ಸೆಲೆಬ್ರೇಷನ್ ಮಾಡಿದ್ದರು. ಜನ್ಮದಿನದಂದು ಅಭಿಮಾನಿಗಳ ಜೊತೆಗೆ ಸಮಯ ಕಳೆದ ನಟ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಧೂಮಪಾನ ತ್ಯಜಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಶಾರುಖ್ ಖಾನ್ ದಿನಕ್ಕೆ 100ನ ಸಿಗರೇಟು ಸೇದುತ್ತಿದ್ದರಂತೆ. ಆದರೆ ಇದರಿಂದ ಉಸಿರಾಟ ಸಮಸ್ಯೆ ಕಂಡುಕೊಂಡ ಅವರು ಅದನ್ನು ತ್ಯಜಿಸಿದ್ದಾರೆ. ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳ ಮುಂದೆ ನಾನು ಇನ್ನು ಮುಂದೆ ಸಿಗರೇಟ್ ಸೇದಲ್ಲ ಎಂದು ಹೇಳಿದ್ದಾರೆ.
ಫ್ಯಾನ್ಸ್ ಜೊತೆಗೆ ಶಾರುಖ್ ಖಾನ್, ‘ಸಿಹಿ ಸುದ್ದಿಯಿದೆ. ನಾನು ಇನ್ನು ಮುಂದೆ ಧೂಮಪಾನ ಮಾಡಲ್ಲ’ ಎಂದು ಹೇಳಿದ್ದಾರೆ.
https://twitter.com/i/status/1853015881623736330
ನನಗೆ ಉಸಿರಾಟದ ತೊಂದರೆಯಾಗುತ್ತಿದೆ. ಧೂಮಪಾನ ತ್ಯಜಿಸಿದ ನಂತರ ನಮಗೆ ಉಸಿರಾಡಲು ಕಷ್ಟವಾಗುತ್ತದೆ ಎಂದು ಭಾವಿಸಿದ್ದೆ. ಅದು ತಪ್ಪೆಂದು ಆಮೇಲೆ ತಿಳಿಯಿತು. ಹಾಗಾಗಿ ನಾನು ಸಿಗರೇಟು ಸೇದುವುದನ್ನು ತ್ಯಜಿಸಿದ್ದೇನೆ. ದೇವರ ದಯೆಯಿಂದ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ.
2011ರಲ್ಲಿ ಸಂದರ್ಶನ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ತಮ್ಮ ಜೀವನ ಶೈಲಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅದರಲ್ಲಿ ದಿನಕ್ಕೆ 100 ಸಿಗರೇಟು ಸೇದುತ್ತೇನೆ ಎಂದು ಹೇಳಿದ್ದರು. ನಾನು ತಿನ್ನಲು ಮರೆಯುತ್ತೇನೆ. ನೀರು ಕುಡಿಯುವುದಿಲ್ಲ. ನನ್ನ ಬಳಿ ಸುಮಾರು 30 ಕಪ್ ಕಾಫಿ ಇದೆ. ಸಿಕ್ಸ್ ಪ್ಯಾಕ್ ಕೂಡ ಇದೆ ಎಂದು ತಮಾಷೆ ಮಾಡಿದ್ದರು.
ಸಿನಿಮಾ ವಿಚಾರಕ್ಕೆ ಬರೋದಾದ್ರೆ ಶಾರುಖ್ ಖಾನ್ ಕಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಆ್ಯಕ್ಷನ್ ಥ್ರಿಲ್ಲಿಂಗ್ ಸಿನಿಮಾವಾಗಿದ್ದು, ಸುಯೋಜ್ ಘೋಷ್ ನಿರ್ದೇಶಿಸುತ್ತಿದ್ದಾರೆ. ಡಾನ್ ಪಾತ್ರದಲ್ಲಿ ಶಾರುಖ್ ಕಾಣಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸುಹಾನಾ ಖಾನ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಅಭಿಷೇಕ್ ಬಚ್ಚನ್ ವಿಲನ್ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗುತ್ತಿದೆ.