ದರ್ಶನ್​ ಇವತ್ತೇ ರಿಲೀಸ್ ಆಗ್ತಾರಾ.. ವಕೀಲರು ಹೇಳಿದ್ದು ಏನು..?

  • ವೈದ್ಯಕೀಯ ಕಾರಣ ನೀಡಿ ಮಧ್ಯಂತರ ಬೇಲ್​ಗೆ ಅರ್ಜಿ ಹಾಕಲಾಗಿತ್ತು
  • ಸೀಲ್ಡ್​ ಕವರ್​ನಲ್ಲಿ ವೈದ್ಯಕೀಯ ವರದಿ ಸಲ್ಲಿಸಿದ್ದ ಜೈಲು ಅಧಿಕಾರಿಗಳು
  • ಕೋರ್ಟ್​ನಲ್ಲಿ ಯಾವುದರ ಆಧಾರದ ಮೇಲೆ ವಾದ ಮಂಡಿಸಲಾಗಿದೆ?

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ವೈದ್ಯಕೀಯ ಚಿಕಿತ್ಸೆಗೆ ಒಳಗಾಗಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಅನ್ನು ಹೈಕೋರ್ಟ್​ ನೀಡಿದೆ.

ಸದ್ಯ ಈ ಸಂಬಂಧ ದರ್ಶನ್ ಪರ ವಕೀಲರಾದ ಸುನೀಲ್ ಕುಮಾರ್ ಅವರು ಮಾತನಾಡಿ, ದರ್ಶನ್ ಅವರಿಗೆ ಸ್ಪೈನಲ್ ಸಮಸ್ಯೆ ಇರುವುದರಿಂದ ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಂಬಂಧ ಹೈಕೋರ್ಟ್ ಬೇಲ್ ನೀಡಿದೆ. ವೈದ್ಯಕೀಯ ಕಾರಣ ನೀಡಿ ಮಧ್ಯಂತರ ಬೇಲ್​ಗೆ ಅರ್ಜಿ ಹಾಕಲಾಗಿತ್ತು. ಇದಕ್ಕೆ ಸಿ.ವಿ ನಾಗೇಶ್ ಅವರು ವಾದ ಮಾಡಿದ್ದರು. ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜೈಲು ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸೀಲ್ಡ್​ ಕವರ್​ನಲ್ಲಿ ವರದಿಗಳನ್ನ ಕೋರ್ಟ್​ಗೆ ನೀಡಿದ್ದರು. ಇವತ್ತಿಗೆ ಆದೇಶ ಕಾಯ್ದಿರಿಸಿತ್ತು. ಅದರಂತೆ ವೈದ್ಯಕೀಯ ಜಾಮೀನು ಮಂಜೂರು ಮಾಡಲಾಗಿದೆ ಎಂದು ಹೇಳಿದ್ದಾರೆ.

ದರ್ಶನ್ ಅವರು ಆಸ್ಪತ್ರೆಗೆ ದಾಖಲಾದ ಒಂದು ವಾರದೊಳಗೆ ಎಲ್ಲ ದಾಖಲಾತಿಗಳನ್ನು ಕೋರ್ಟ್​ಗೆ ಸಲ್ಲಿಕೆ ಮಾಡಬೇಕು. ಪಾಸ್​ಪೋರ್ಟ್​ ಕೂಡ ಕೊಡಿ ಎಂದು ನ್ಯಾಯಾಲಯ ಕೇಳಿತ್ತು. ಇದರ ಜೊತೆಗೆ ಕೆಲ ಷರತ್ತುಗಳನ್ನು ವಿಧಿಸಿದೆ. ನ್ಯಾಯಾಲಯದ ಹೇಳಿಕೆಯಂತೆ ಎಲ್ಲವನ್ನು ನೀಡಲಾಗುವುದು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಯಾವಾಗಲೂ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವಾದ ಮಂಡಿಸಿದ್ದೇವೆ. ಆದರೆ ದರ್ಶನ್ ಅವರ ಕುಟುಂಬದ ಜೊತೆ ಮಾತನಾಡಿ, ಅವರಿಗೆ ಯಾವ ಆಸ್ಪತ್ರೆ ಕಂಫರ್ಟ್ ಅನಿಸುತ್ತೋ ಅದರಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದು ಹೇಳಿದ್ದಾರೆ.

ನಾವೆಲ್ಲ ಷರತ್ತುಗಳನ್ನು ಪೂರೈಸಿದ ಮೇಲೆ ದರ್ಶನ್ ಜೈಲಿಂದ ರಿಲೀಸ್ ಆಗುತ್ತಾರೆ. ಒಂದು ವೇಳೆ ನಮ್ಮ ಸರ್ಟಿಫಿಕೆಟ್ ಕಾಪಿ ಇವತ್ತು ಸಿಕ್ಕರೇ ಇವತ್ತೆ ರಿಲೀಸ್ ಆಗೋ ಸಾಧ್ಯತೆ ಹೆಚ್ಚು ಇದೆ. ಶ್ಯೂರಿಟಿಯನ್ನ ಸೆಷನ್ಸ್ ಕೋರ್ಟ್​ ಒಪ್ಪಿದ ನಂತರ ದರ್ಶನ್ ರಿಲೀಸ್ ಆಗುವ ಸಾಧ್ಯತೆ ಇದೆ. ಕೋರ್ಟ್​​ನ ರೆಗ್ಯೂಲರ್ ಕಂಡಿಷನ್ಸ್ ಇರುತ್ತವೆ. ಆರ್ಡರ್ ಕಾಪಿ ಬಂದ ಮೇಲೆ ನಮಗೆ ಎಲ್ಲ ಷರತ್ತುಗಳು ಏನೇನು ಎಂಬುದು ಗೊತ್ತಾಗುತ್ತದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

ದರ್ಶನ್​ ಅವರಿಗೆ ಎಲ್​-5 ಮತ್ತು ಎಸ್​-1 ನರದಲ್ಲಿ ಸಮಸ್ಯೆ ಇರುವುದರಿಂದ ಕೋರ್ಟ್​​ನಲ್ಲಿ ವಾದ ಮುಂದುವರೆಸಿದ್ದೇವು. ಈ ಕಾಯಿಲೆ ಇಂದು, ನಿನ್ನೆ ಬಂದಿರುವುದಲ್ಲ, 2023ರಿಂದಲೂ ಇದೆ. ಇದರ ಆಧಾರದ ಮೇಲೆ ಬೇಲ್ ಸಿಕ್ಕಿದೆ. ಇದು ಮದ್ಯಂತರ ಜಾಮೀನು ಅಷ್ಟೇ. ಆದರೆ ಇನ್ನು ಹೋರಾಟ ಮಾಡಿ, ರೆಗ್ಯೂಲರ್ ಬೇಲ್ ಮೇಲೆ ಅವರನ್ನು ಹೊರಗಡೆ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಕೀಲರು ಹೇಳಿದ್ದಾರೆ.

TOP