- ದೀಪಾವಳಿ ಸಮಯದಲ್ಲಿ ಚಿನ್ನ ಖರೀದಿಸುವ ಅವಕಾಶ
- ಡಿಜಿಟಲ್ ಗೋಲ್ಡ್ ಖರೀದಿಯಿಂದ ಸಿಗುವ ಲಾಭಗಳೇನು?
- ಯಾವುದರಲ್ಲಿ ಡಿಜಿಟಲ್ ಗೋಲ್ಡ್ ಖರೀದಿ ಮಾಡಬಹುದು?
ಭಾರತೀಯರಿಗೆ ಹಬ್ಬ ಹರಿದಿನಗಳೆಂದರೆ ಅದು ಮಹತ್ವದ ದಿನ ಎಂದರ್ಥ. ಈ ಸಮಯದಲ್ಲಿ ಬಹುತೇಕ ಜನರು ಆಭರಣಕೊಳ್ಳಲು ಬಯಸುತ್ತಾರೆ. ವಿಶೇಷವಾಗಿ ದೀಪಾವಳಿ ಸಮಯದಲ್ಲಿ ಚಿನ್ನ ಖರೀದಿಸಲು ಮುಂದಾಗುತ್ತಾರೆ. ಸದ್ಯದ ಗೋಲ್ಡ್ ರೇಟ್ ಅನೇಕರಿಗೆ ಸವಾಲಾಗಿದೆ. ಆದರೀಗ ಡಿಜಿಟಲ್ ಗೋಲ್ಡ್ ಎಂಬ ಹೊಸ ಪರಿಕಲ್ಪನೆ ಬಂದಿದ್ದು, ಅದರ ಮೂಲಕ ಸುಲಭವಾಗಿ ಚಿನ್ನ ಖರೀದಿಸಲು ಜನರು ಮುಂದಾಗುತ್ತಿದ್ದಾರೆ.
ಡಿಜಿಟಲ್ ಚಿನ್ನ ಎಂದರೇನು?
ಪ್ರಸ್ತುತ ತಂತ್ರಜ್ಞಾನ ಲೋಕ ವೇಗವಾಗಿ ಬೆಳೆಯುತ್ತಿದೆ. ಆನ್ಲೈನ್ ಮೂಲಕವು ಚಿನ್ನವನ್ನು ಖರೀದಿಸುವ ಅವಕಾಶವಿದೆ. ಅಷ್ಟೇ ಅಲ್ಲದೆ ಹೂಡಿಕೆ ಮಾಡುವ ಮೂಲಕ ಚಿನ್ನ ಖರೀದಿಸುವ ಆಯ್ಕೆಯಿದೆ. ಅದರಂತೆಯೇ ಡಿಜಿಟಲ್ ಗೋಲ್ಡ್ ಆಯ್ಕೆ ಮೂಲಕವು ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಖರೀದಿ ಮಾಡಬಹುದಾಗಿದೆ. ಅಚ್ಚರಿ ಸಂಗತಿ ಎಂದರೆ 1 ರೂಪಾಯಿಯಿಂದ ಚಿನ್ನ ಖರೀದಿ ಮಾಡಬಹುದು.
ಡಿಜಿಟಲ್ ಗೋಲ್ಡ್ ಹೂಡಿಕೆ
ಡಿಜಿಟಲ್ ಗೋಲ್ಡ್ಗಾಗಿ ಬಹುತೇಕರು ಹೂಡಿಕೆ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ 1 ರೂಪಾಯಿಯಿಂದ ಪ್ರಾರಂಭವಾಗಿ 2 ಲಕ್ಷದವರೆಗೂ ಹೂಡಿಕೆ ಮಾಡಬಹುದಾಗಿದೆ. ಇದರ ಮೂಲಕ ಚಿನ್ನ ಕಳ್ಳತನದ ಅಪಾಯವನ್ನು ತಪ್ಪಿಸಬಹುದಾಗಿದೆ. ಇನ್ನು ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ಗ್ರಾಹಕರು 24 ಕ್ಯಾರೆಟ್ ಚಿನ್ನವನ್ನು ಪಡೆಯುತ್ತಾರೆ.
ಡಿಜಿಟಲ್ ಗೋಲ್ಡ್ ಎಲ್ಲಿ ಖರೀದಿಸಬೇಕು?
ಆನ್ಲೈನ್ ಪೇಮೆಂಟ್ ಆ್ಯಪ್ಗಳು ಡಿಜಿಟಲ್ ಗೋಲ್ಡ್ ಮಾರಾಟ ನಡೆಸುತ್ತಿದೆ. ಗೂಗಲ್ ಪೇ, ಪೇಟಿಎಂ, ಫೋನ್ಪೇನಂತರ ಪ್ರಮುಖ ಡಿಜಿಟಲ್ ಪಾವತಿ ಆ್ಯಪ್ಗಳು ಡಿಜಿಟಲ್ ಗೋಲ್ಡ್ ಖರೀದಿಸುವ ಅವಕಾಶವನ್ನು ತೆರೆದಿಟ್ಟಿದೆ. MMTC-PAMP ಇಂಡಿಯಾ ಪ್ರೈವೇಟ್ ಲಿಮಿಡೆಟ್ನಂತಹ ಕಂಪನಿಗಳು ಈ ಮಾರುಕಟ್ಟೆಯ ಪ್ರಸಿದ್ಧ ಮಾರಾಟಗಾರರು.
ಖರೀದಿ ಹೇಗೆ?
ಗೂಗಲ್ ಪೇ ಬಳಕೆದಾರರಾಗಿದ್ದರೆ ಗೋಲ್ಡ್ ಲಾಕರ್ ಎಂಬ ಆಯ್ಕೆಯಿದೆ. ಅದನ್ನು ಸರ್ಚ್ ಬಾರ್ನಲ್ಲಿ ಹುಡುಕಿ ನಂತರ ಚಿನ್ನದ ಬೆಲೆಯನ್ನು ಪರೀಕ್ಷಿಸಿ. ನಿಮಗೆ ಬೇಕಾದ ಮೊತ್ತವನ್ನು ನಮೂದಿಸಿ ಬಳಿಕ ವಹಿವಾಟು ಪೂರ್ಣಗೊಳಿಸಿ. ಅಂದಹಾಗೆಯೇ ಇದು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದರೂ ಸಹ ಬಳಕೆದಾರರು ನಾಣ್ಯದ ರೂಪದಲ್ಲಿ ಚಿನ್ನವನ್ನು ಪಡೆಯುತ್ತಾರೆ.
ಗೂಗಲ್ ಪೇ ಮಾತ್ರವಲ್ಲದೆ, ಅಮೆಜಾನ್ ಪೇ, ಪೇಟಿಎಂ ಹೀಗೆ ಅನೇಕ ಡಿಜಿಟಲ್ ಪಾವತಿ ಅಪ್ಲಿಕೇಶನ್ ಮೂಲಕ ಚಿನ್ನವನ್ನು ಖರೀದಿ ಮಾಡಬಹುದಾಗಿದೆ.