ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಸೋಲು
ಹೀನಾಯವಾಗಿ ಸೋಲು ಕಂಡ ಟೀಮ್ ಇಂಡಿಯಾ..!
ಇದರ ಮಧ್ಯೆ ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಪ್ಲೇಯರ್
ಇತ್ತೀಚೆಗೆ ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ 25 ರನ್ಗಳಿಂದ ಸೋತಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ವಿರುದ್ಧ ವೈಟ್ವಾಶ್ ಮಾಡಿದೆ. ಇದರ ಮಧ್ಯೆ ಟೀಮ್ ಇಂಡಿಯಾಗೆ ಬಿಗ್ ಶಾಕಿಂಗ್ ನ್ಯೂಸ್ ಒಂದಿದೆ. ಭಾರತ ತಂಡದ ಸ್ಟಾರ್ ಆಟಗಾರ ನಿವೃತ್ತಿ ಘೋಷಿಸಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ವೃದ್ಧಿಮನ್ ಸಹಾ. ಇವರು ಮಧ್ಯಮ ಕ್ರಮಾಂಕದ ಬ್ಯಾಟರ್ ಕೂಡ ಹೌದು. ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಅದ್ಭುತ ಕೌಶಲ್ಯ ಹೊಂದಿದ್ದಾರೆ. ಮಹತ್ವದ ಬೆಳವಣಿಗೆ ಒಂದರಲ್ಲಿ ವೃದ್ಧಿಮನ್ ಸಹಾ ಏಕಾಏಕಿ ನಿವೃತ್ತಿ ಘೋಷಿಸಿ ಶಾಕ್ ಕೊಟ್ಟಿದ್ದಾರೆ.
ನಿವೃತ್ತಿ ಬಗ್ಗೆ ಮೌನ ಮುರಿದ ವಿಕೆಟ್ ಕೀಪರ್
ಇದೇ ನನ್ನ ಕೊನೆಯ ಸೀಸನ್. ಬಂಗಾಳ ತಂಡವನ್ನು ಪ್ರತಿನಿಧಿಸಿದ ಗೌರವ ನನಗಿದೆ. ನಿವೃತ್ತಿಗೂ ಮುನ್ನ ರಣಜಿ ಕ್ರಿಕೆಟ್ ಮಾತ್ರ ಆಡಲಿದ್ದೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು ವೃದ್ಧಿಮನ್ ಸಹಾ.
ಯಾರು ಈ ವೃದ್ಧಿಮನ್ ಸಹಾ?
ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಿಕ ಹಲವು ವರ್ಷಗಳ ಕಾಲ ವಿಕೆಟ್ ಕೀಪಿಂಗ್ ಮಾಡಿದವರು ವೃದ್ಧಿಮನ್ ಸಹಾ. ತಂಡಕ್ಕೆ ಅಗತ್ಯವಿದ್ದಾಗ ಸಮಯೋಚಿತ ಬ್ಯಾಟಿಂಗ್ ಮೂಲಕ ನೆರವಾದವರು. ಇವರು ಟೀಮ್ ಇಂಡಿಯಾ ಪರ ಮಾತ್ರವಲ್ಲ ಐಪಿಎಲ್ನಲ್ಲೂ ಅಮೋಘ ಪ್ರದರ್ಶನ ನೀಡಿದ್ರು.
ಐಪಿಎಲ್ನಲ್ಲೂ ಅದ್ಭುತ ಪ್ರದರ್ಶನ
ವೃದ್ಧಿಮನ್ ಸಹಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೂ 5 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ಪರ ಆಡಿದ್ರು.
ಕ್ರಿಕೆಟ್ ಬದುಕು ಹೇಗಿತ್ತು?
ಟೀಮ್ ಇಂಡಿಯಾ ಪರ ವೃದ್ಧಿಮನ್ ಸಹಾ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಸುಮಾರು 29.41ರ ಆವರೇಜ್ನಲ್ಲಿ 1353 ರನ್ ಕಲೆ ಹಾಕಿದ್ದಾರೆ. ಈ ಪೈಕಿ 3 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. 9 ಏಕದಿನ ಪಂದ್ಯಗಳನ್ನು ಆಡಿದ್ದು, 41 ರನ್ ಸಿಡಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 138 ಪಂದ್ಯಗಳನ್ನು ಆಡಿ 7013 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 14 ಶತಕ ಹಾಗೂ 43 ಅರ್ಧಶತಕಗಳು ಸೇರಿವೆ.