ಸ್ವಾವಲಂಬಿ ಜೀವನಕ್ಕೆ ಉಪಯೋಗವಾದ ಗೃಹಲಕ್ಷ್ಮಿ ಹಣ
ಗೃಹಲಕ್ಷ್ಮಿ ಹಣದಿಂದ ಖಾರ ಪುಡಿ ಮಾಡೋ ಯಂತ್ರ ಖರೀದಿ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೈಯಾರೆ ಉದ್ಘಾಟನೆ ಮಾಡಿದ ಮಹಿಳೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯಿಂದ ಹೆಣ್ಣು ಮಕ್ಕಳಿಗಂತೂ ಇದರಿಂದ ತುಂಬಾ ಪ್ರಯೋಜನ ಸಿಕ್ಕಿದೆ. ಈಗಾಗಲೇ ಗೃಹಲಕ್ಷ್ಮಿ ಹಣದಿಂದ ಸೊಸೆಗೆ ಬಳೆ ಮಳಿಗೆ, ಮಗನಿಗೆ ಬೈಕ್, ಊರಿಗೊಂದು ಲೈಬರಿ, ಮನೆಗೊಂದು ಎತ್ತು, ಹೋಳಿಗೆ ಊಟ, ಟಿವಿ ಹೀಗೆ ಅನೇಕ ವಸ್ತುಗಳನ್ನು ಖರೀದಿಸಿ ತಮಗಾದ ಅನುಕೂಲತೆ ಬಗ್ಗೆ ಹೇಳಿದ್ದಾರೆ. ಅದರಂತೆಯೇ ಇದೀಗ ಗೃಹಲಕ್ಷ್ಮಿ ಹಣದಿಂದ ಮಹಿಳೆಯೊಬ್ಬರು ಖಾರ ಪುಡಿ ಮಾಡೋ ಯಂತ್ರ ಖರೀದಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಹೌದು. ಗೃಹಲಕ್ಷ್ಮಿ ಹಣ ಜೋಡಿಸಿ ಅದರಿಂದ ಖಾರ ಪುಡಿ ಮಾಡೋ ಯಂತ್ರವನ್ನು ಮಹಿಳೆಯೊಬ್ಬರು ಖರಿದೀಸಿದ್ದಾರೆ. ಯಂತ್ರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದ ತಾಯವ್ವ ಲಕಮೋಜಿ ಖಾರ ಪುಡಿ ಮಾಡೋ ಯಂತ್ರವನ್ನು ಖರೀದಿಸಿ ಗೃಹಲಕ್ಷ್ಮಿ ಪ್ರಯೋಜನ ಪಡೆದಿದ್ದಾರೆ. ಈ ಯಂತ್ರವನ್ನು ಉದ್ಘಾಟಿಸಲೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆಹ್ವಾನಿಸಿದ್ದಾರೆ. ಅವರ ಕೈಯಾರೆ ಉದ್ಘಾಟನೆ ಮಾಡಿದ್ದಾರೆ.
ಗೃಹಲಕ್ಷ್ಮಿ ಹಣದಲ್ಲಿ ಅನೇಕ ಮಹಿಳೆಯರಿಗೆ ಉಪಯೋಗವಾಗಿದೆ. ಇದರಿಂದಾಗಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಸಚಿವೆ ಸಂತಸ ವ್ಯಕ್ತಪಡಿಸಿದ್ದಾರೆ.