ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನೇಮಕಾತಿ.. 4, 7ನೇ ತರಗತಿ, ಪದವೀಧರರು ಅರ್ಜಿ ಸಲ್ಲಿಕೆ ಮಾಡಬಹುದು
- ಸಚಿವಾಲಯದಿಂದ ಯಾವ್ಯಾವ ಉದ್ಯೋಗ ಭರ್ತಿ ಮಾಡಲಾಗುತ್ತಿದೆ?
- 18 ರಿಂದ 40 ವರ್ಷದ ಒಳಗಿನವರು ಇವುಗಳಿಗೆ ಅರ್ಜಿ ಸಲ್ಲಿಸಬಹುದು
- ಶುಲ್ಕ, ವಿದ್ಯಾರ್ಹತೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿ ನೀಡಲಾಗಿದೆ
ಕರ್ನಾಟಕದ ವಿಧಾನಸಭೆಯಲ್ಲಿ ಖಾಲಿ ಇರುವಂತ ಕೆಲ ಹುದ್ದೆಗಳನ್ನ ಭರ್ತಿ ಮಾಡಲು ಸರ್ಕಾರ ಅರ್ಜಿಗಳನ್ನು ಆಹ್ವಾನ ಮಾಡಿದೆ. ವಿಧಾನ ಸಭೆ ಸಚಿವಾಲಯದ ನೇಮಕಾತಿ ಮತ್ತು ಸೇವಾ ಷರತ್ತು, ನಿಯಮಗಳು 2003ರ ನಿಯಮ 6 (8)ದಡಿ ಈ ಕೆಳಕಂಡ ವಿವಿಧ ವೃಂದದ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಇಷ್ಟ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು.
ಈ ಉದ್ಯೋಗಗಳು ಎಷ್ಟು ಇವೆ. ಯಾವ್ಯಾವ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಶುಲ್ಕ, ವಿದ್ಯಾರ್ಹತೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಬೆರಚ್ಚುಗಾರರು ಸರ್ಕಾರದ ಇಲಾಖೆಯಿಂದ ಪ್ರಮಾಣ ಪತ್ರ ಹೊಂದಿರಬೇಕು.
ವಿದ್ಯಾರ್ಹತೆ
- ಪದವಿ ಇದರ ಜೊತೆ ಕನ್ನಡ ಶೀಘ್ರಲಿಪಿ, ಹಾಗೂ ಪ್ರೌಢ ದರ್ಜೆಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣವಾಗಿರಬೇಕು.
- ಬಿಸಿಎ
- 7ನೇ ತರಗತಿ
- 4ನೇ ತರಗತಿ
ವಯೋಮಿತಿ- 18 ವರ್ಷದಿಂದ 40 ವರ್ಷಗಳು
ಅರ್ಜಿ ಶುಲ್ಕ- 500 ರೂಪಾಯಿಗಳು (ಇಂಡಿಯನ್ ಪೋಸ್ಟಲ್ ಆರ್ಡರ್)
ಹುದ್ದೆಯ ಹೆಸರು, ಎಷ್ಟು ಉದ್ಯೋಗಗಳು?
- ವರದಿಗಾರರು 04
- ಕಂಪ್ಯೂಟರ್ ಆಪರೇಟರ್- 03
- ದಲಾಯತ್- 16
- ಸ್ವೀಪರ್- 1
ವೇತನ ಶ್ರೇಣಿ- 27,000 ದಿಂದ 61,300 ರೂಪಾಯಿಗಳು
ಅರ್ಜಿ ಸಲ್ಲಿಕೆ ಮಾಡಬೇಕಾದ ವಿಳಾಸ-
ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಕಾರ್ಯಲಯ, ಅಂಚೆ ಪಟ್ಟಿಗೆ ಸಂಖ್ಯೆ- 5074
ಮೊದಲ ಮಹಡಿ, ವಿಧಾನಸೌಧ, ಬೆಂಗಳೂರು- 560001
ಅರ್ಜಿಯನ್ನು ಸರ್ಕಾರಿ ಪುಸ್ತಕ ಅಂಗಡಿಗಳಿಂದ ತೆಗೆದುಕೊಂಡು ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 25 ನವೆಂಬರ್ 2024