ಹಳ್ಳಕ್ಕೆ ಬಿದ್ದ ವ್ಯಾಪಾರಿಯ ಓಮ್ನಿ ಕಾರು
ಓಮ್ನಿ ಕಾರು ಅಪಘಾತದಿಂದ ಹೊತ್ತಿಕೊಂಡ ಬೆಂಕಿ
ಬೆಂಕಿ ತಗುಲಿ 48 ವರ್ಷದ ವ್ಯಾಪಾರಿ ಸಜೀವ ದಹನ
ಚಿಕ್ಕಬಳ್ಳಾಪುರ: ಓಮ್ನಿ ಕಾರಿಗೆ ಬೆಂಕಿ ತಗುಲಿ ಓರ್ವ ವ್ಯಕ್ತಿ ಸಜೀವ ದಹನವಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಲ್ಲಿನ ಚಿಂತಾಮಣಿ -ಮುರುಗಮಲ್ಲ ರಸ್ತೆಯ ಬಚ್ಚವಾರಹಳ್ಳಿ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಚಾಲಕ ಇಬ್ರಾಹಿಂ (48) ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಇಬ್ರಾಹಿಂ ಚಲಾಯಿಸುತ್ತಿದ್ದ ಓಮ್ನಿ ಕಾರು ಹಳ್ಳಕ್ಕೆ ಬಿದ್ದ ಪರಿಣಾಮ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡಂತೆ ಒಳಗಡೆ ಸಿಲುಕಿದ್ದ ಇಬ್ರಾಹಿಂ ಅಲ್ಲೇ ಬೆಂಕಿಗೆ ಆಹುತಿಯಾಗಿದ್ದಾರೆ.

ಇಬ್ರಾಹಿಂ ವ್ಯಾಪಾರ ಮುಗಿಸಿಕೊಂಡು ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಓಮ್ನಿ ಕಾರು ಹಳ್ಳಕ್ಕೆ ಬಿದ್ದಿದೆ. ಕಾರಿನ ಬೆಂಕಿ ಹತ್ತಿಕೊಂಡಿರುವ ದೃಶ್ಯ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಕೆಂಚಾರ್ಲಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹ ರವಾನಿಸಲಾಗಿದೆ.




