ಆ್ಯಪಲ್ ಐಫೋನ್ 16 ಬ್ಯಾನ್ ಮಾಡಿದ ಇಂಡೋನೇಷ್ಯಾ
ಐಫೋನ್ 16 ಬಳಿಕ ಗೂಗಲ್ ಪಿಕ್ಸೆಲ್ ಕೂಡ ಬ್ಯಾನ್
ಗೂಗಲ್ ಪಿಕ್ಸೆಲ್ ಮಾರಾಟ ನಿಷೇಧ ಮಾಡಲು ಕಾರಣ?
ಇಂಡೋನೇಷ್ಯಾ ದೇಶ ಕುಪರ್ಟಿನೋ ಮೂಲದ ಜನಪ್ರಿಯ ಆ್ಯಪಲ್ ಕಂಪನಿ ಒಡೆತನದ ಐಫೋನ್ 16 ಸಿರೀಸ್ ಅನ್ನು ನಿಷೇಧಿಸಿದೆ. ಆ ಮೂಲಕ ಉಳಿದ ದೇಶಗಳಿಗೆ ಅಚ್ಚರಿಯನ್ನು ಮೂಡಿಸಿತ್ತು. ಇದೀಗ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ಗಳ ಮಾರಾಟವನ್ನು ದೇಶ ನಿರ್ಬಂಧಿಸಿದೆ.
ಇಂಡೋನೇಷ್ಯಾದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಮಾರಾಟವನ್ನು ನಿಷೇಧಿಸಿದೆ. ವಿದೇಶಿ ಸ್ಮಾರ್ಟ್ಫೋನ್ ಕಂಪನಿಗಳ ಬಗ್ಗೆ ಸರ್ಕಾರವನ್ನು ಹೆಚ್ಚು ಪರಿಶೀಲನೆ ನಡೆಸುತ್ತಿದ್ದು, ಜೊತೆಗೆ ಸ್ಥಳೀಯ ನಿಯಮವನ್ನು ಸಾರುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಂಡಿದೆ.
ಸ್ಮಾರ್ಟ್ಫೋನ್ ತಯಾರಕರು, ತಂತ್ರಜ್ಞಾನ ಮತ್ತು ಸುರಕ್ಷತೆಗಾಗಿ ದೇಶದ ಮಾನದಂಡಗಳಿಗೆ ಬದ್ಧವಾಗಿರಬೇಕೆಂದು ಒತ್ತಿ ಹೇಳುತ್ತಿದೆ. ಅಲ್ಲಿನ ಉತ್ಪಾದನಾ ನಿಯಮವನ್ನು ಪಾಲಿಸಬೇಕು ಎಂದು ಬಯಸುತ್ತಿದೆ. ಇದೇ ಕಾರಕ್ಕಾಗಿ ಗೂಗಲ್ ಪಿಕ್ಸೆಲ್ ಮಾರಾಟವನ್ನು ನಿಷೇಧಿಸಿದೆ.
ಇಂಡೋನೇಷ್ಯಾ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ತಂತ್ರಜ್ಞಾನ ವಲಯದಲ್ಲಿ ಸ್ಪರ್ಧೆಯೊಡ್ಡಲು ವಿಶೇಷ ಕಾರ್ಯತಂತ್ರಕ್ಕೆ ಮುಂದಾಗಿದೆ. ಹೀಗಾಗಿ ಅಲ್ಲಿನ ಕೈಗಾರಿಕಾ ಸಚಿವಾಲಯ ಗೂಗಲ್ ಸ್ಮಾರ್ಟ್ಫೋನನ್ನ ದೇಶದಲ್ಲಿ ಮಾರಾಟ ಮಾಡುವುದಿಲ್ಲ ಎಂದಿದೆ.
ಇದೀಗ ಐಫೋನ್ 16ನಂತೆಯೇ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಮಾರಾಟವನ್ನು ಇಂಡೋನೇಷ್ಯಾ ಸ್ಥಗಿತಗೊಳಿಸಿದೆ. ಒಟ್ಟಿನಲ್ಲಿ ತಂತ್ರಜ್ಞಾನ ಮತ್ತು ಸುರಕ್ಷತೆ ವಿಚಾರದಲ್ಲಿ ದೇಶದ ನಡೆತೆಯು ವಿಭಿನ್ನ ಹಾದಿ ಹಿಡಿಯುತ್ತಿದೆ.