ಇದು ವಿಶ್ವದಲ್ಲಿಯೇ ಅತ್ಯಂತ ಶ್ರೀಮಂಥ ಶ್ವಾನವೆಂಬ ಹೆಸರು ಗಳಿಸಿದ ಶ್ವಾನ
ಈ ಶ್ವಾನದ ಬಳಿ ಇರುವ ಆಸ್ತಿ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ
ಗುಂಥೆರ್-5 ಹೆಸರಿನ ಶ್ವಾನವನ್ನು ನೋಡಿಕೊಳ್ಳಲು ಇದ್ದಾರೆ 27 ಜನ ನೌಕರರು!
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಶ್ರೀಮಂತ ಮಹಿಳೆಯ ಬಗ್ಗೆ ನೀವು ಕೇಳಿಯೇ ಕೇಳಿರ್ತೀರಾ, ಆದ್ರೆ ನಾವು ಇಲ್ಲಿ ನಿಮಗೆ ವಿಶ್ವದ ಅತ್ಯಂತ ಶ್ರೀಮಂತ ಶ್ವಾನದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಕೊಡ್ತೀವಿ. ಈ ಶ್ವಾನದ ಬಳಿ ಪ್ರೈವೇಟ್ ಜೆಟ್ ಇದೆ. ಓಡಾಡಲು ಬಿಎಂಡಬ್ಲ್ಯೂ ಕಾರ್ ಇದೆ. ಇನ್ನೂ ಅನೇಕ ಐಷಾರಾಮಿ ವಸ್ತುಗಳ ಒಡೆಯ ಈ ಒಂದು ಜರ್ಮನ್ ಶೆಫರ್ಡ್ ಶ್ವಾನ.
ವಿಶ್ವದ ಅತ್ಯಂತ ಶ್ರೀಮಂತ ಶ್ವಾನ ಎಂಬ ಖ್ಯಾತಿ ಪಡೆದಿರುವ ಈ ಜರ್ಮನ್ ಶೆಫರ್ಡ್ ಶ್ವಾನದ ಹೆಸರು ಗುಂಥರ್ 5 ಅಂತ. ಇದರ ಬಳಿ ಇರುವ ಒಟ್ಟು ಆಸ್ತಿಯ ಸರಿ ಸುಮಾರು 400 ಮಿಲಿಯನ್ ಯುಎಸ್ ಡಾಲರ್, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 3556 ಕೋಟಿ ರೂಪಾಯಿಗಳು. ಈ ಶ್ರೀಮಂತ ಶ್ವಾನದ ಕಥೆ ಆರಂಭವಾಗುವುದು ಮೂರು ದಶಕಗಳ ಹಿಂದಿನಿಂದ. 1991ರಲ್ಲಿ ಕೌಂಟೆಸ್ ಕಾರ್ಲೋಟಾ ಲೈಬೆನ್ಸ್ಟೈನ್ ಎನ್ನುವ ಶ್ರೀಮಂತ ಮಹಿಳೆಯ ಪುತ್ರನ ಅಕಾಲಿಕ ಮರಣದಿಂದಾಗಿ ಅವರಿಗೆ ಉತ್ತರಾಧಿಕಾರಿಗಳೇ ಇಲ್ಲದಂತಾಯಿತು.
ಈ ವೇಳೆ ಅವರ ಬಳಿ ಇರುವ 80 ಮಿಲಿಯನ್ ಡಾಲರ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 673 ಕೋಟಿ ರೂಪಾಯಿಯನ್ನು ತಮ್ಮ ನೆಚ್ಚಿನ ಶ್ವಾನ ಗುಂಥೆರ್ 3 ಹೆಸರಲ್ಲಿ ಬರೆದಿಟ್ಟು ಹೋದರು. ಅದನ್ನು ನಿರ್ವಹಿಸುವ ಎಲ್ಲಾ ಜವಾಬ್ದಾರಿಯನ್ನು ತನ್ನ ಸ್ನೇಹಿತೆಯ ಮಗನಾದ ಮೈರಿಜಿಯೋ ಮೈನ್ ಅವರ ಹೆಗಲಿಗೆ ಹಾಕಿ ಅವರು ಇಹಲೋಕ ತ್ಯಜಿಸಿದರು. ಕಳೆದ ಮೂರು ದಶಕಗಳಿಂದ ಈ ಒಂದು ಆಸ್ತಿಯ ಮೌಲ್ಯ ಈಗ 3556 ಕೋಟಿ ರೂಪಾಯಿಗೆ ಬಂದು ತಲುಪಿದೆ. ಗುಂಥೆರ್ 3ಯ ಮೊಮ್ಮಗ ಗುಂಥೆರ್ 5 ಈಗ ಈ ಆಸ್ತಿಯ ಒಡೆಯನಾಗಿದ್ದಾನೆ. ಜಗತ್ತಿನ ಅತ್ಯಂತ ಶ್ರೀಮಂತ ಶ್ವಾನಗಳ ಪಟ್ಟಿಯಲ್ಲಿ ಗುಂಥೆರ್ 5 ಅಗ್ರಗಣ್ಯ ಸ್ಥಾನದಲ್ಲಿದ್ದಾನೆ.
ಸಿರಿವಂತ ನಾಯಿಯ ಮನೆಯೇ 63 ಕೋಟಿಯ ಐಷಾರಾಮಿ ಮನೆಯಿದೆ. ಪ್ರೈವೆಟ್ ಜೆಟ್ ಇದೆ. ಇಟಲಿಯ ಈ ನಾಯಿ ಅತ್ಯಂತ ಐಷಾರಾಮಿ ಬದುಕನ್ನು ಬದುಕುವ ಶ್ವಾನಗಳ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕಾಗಿಯೇ ಒಂದು ಐಷಾರಾಮಿ ವಿಹಾರ ನೌಕೆಯಿದೆ. ಗುಂಥೆರ್-5ನನ್ನು ನೋಡಿಕೊಳ್ಳಲು ಒಟ್ಟು 27 ಕೆಲಸಗಾರರ ತಂಡವೇ ಇದೆ.ಇವರೆಲ್ಲರೂ ಇದರ ಊಟ ಉಪಹಾರ, ಓಡಾಟ, ವಿಹಾರ ಇವೆಲ್ಲವನ್ನೂ ನೋಡಿಕೊಳ್ಳುತ್ತಾರೆ.
ಈ ಒಂದು ಶ್ವಾನದ ಮಾಲೀಕತ್ವದಲ್ಲಿ ಪಿಸಾ ಸ್ಪೋರ್ಟಿಂಗ್ ಕ್ಲಬ್ ಎಂಬ ಸ್ಪೋರ್ಟ್ಸ್ ಟೀಮ್ ಇದೆ. ಹಲವು ಬಾರಿ ಈ ಶ್ವಾನದ ಬಗ್ಗೆ ಕೇಳಿದವರೆಲ್ಲಾ ಇದೊಂದು ಊಹಾಪೋಹ ಕಥೆಯೆಂದು ಹೇಳಿದವರಿದ್ದಾರೆ. ಇದು ಉತ್ಪ್ರೇಕ್ಷೆ ಎಂದವರು ಇದ್ದಾರೆ. ಆದ್ರೆ ನಿಜಕ್ಕೂ ಗುಂಥೆರ್ 5 ಎಂಬ ಶ್ವಾನ ಇಟಲಿಯಲ್ಲಿ ವೈಭೋಗದ ಬದುಕು ಬದುಕುತ್ತಿದೆ. ಅದನ್ನು ಕಂಡು ಮನುಷ್ಯರೇ ಹೊಟ್ಟೆ ಕಿಚ್ಚುಪಡುವಷ್ಟು ಐಷಾರಾಮಿ ಬದುಕು ಈ ಗುಂಥೆರ್-5ನದ್ದು. ಇದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಕೂಡ ಅನೇಕ ವರದಿ ಮಾಡಿವೆ. ಪ್ರತ್ಯಕ್ಷ ಸಾಕ್ಷಿ ನೀಡಿವೆ.