ಸಂಚಾರಿ ನಿಯಮ ಉಲ್ಲಂಗಿಸಿದವರು ದಂಡ ಪಾವತಿಸಲೇಬೇಕು
ಇನ್ಮುಂದೆ ವ್ಯಾಟ್ಸ್ಆ್ಯಪ್ನಲ್ಲೇ ಟ್ರಾಫಿಕ್ ಚಲನ್ ಪಾವತಿಸುವ ಅವಕಾಶ
ಶೀಘ್ರದಲ್ಲೇ ವಾಟ್ಸ್ಆ್ಯಪ್ನಲ್ಲಿ ಜಾರಿಗೆ ಬರಲಿದೆಯಂತೆ ಈ ಸೇವೆ
ದಿನದಿಂದ ದಿನಕ್ಕೆ ಸಂಚಾರಿ ನಿಯಮಗಳು ಹೆಚ್ಚಾಗುತ್ತಿದೆ. ಉಲ್ಲಂಘಿಸುವವರ ಸಂಖ್ಯೆಯು ಏರಿಕೆಯಾಗುತ್ತಿದೆ. ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ ಪ್ರತಿಯೊಬ್ಬರಿಗೂ ದಂಡ ವಿಧಿಸಲಾಗುತ್ತದೆ. ಆದರೆ ಈ ದಂಡವನ್ನು ಪಾವತಿಸಲು ಸಂಚಾರಿ ಪೊಲೀಸ್ ಠಾಣೆ, ಕೋರ್ಟ್ ಅಥವಾ ಸಾರಿಗೆ ಇಲಾಖೆಯ ವೆಬ್ಸೈಟ್ಗೆ ಹೋಗಬೇಕಾಗುತ್ತದೆ. ಆದರೀಗ ತಂತ್ರಜ್ಞಾನ ಮುಂದುವರೆದಿದ್ದು, ವಾಟ್ಸ್ಆ್ಯಪ್ನಲ್ಲೇ ಟ್ರಾಫಿಕ್ ಚಲನ್ ಪಾವತಿಸುವ ಆಯ್ಕೆ ಬರುತ್ತಿದೆ.

ದೆಹಲಿಯಲ್ಲಿ ಪ್ರತಿದಿನ ಸುಮಾರು 1 ಸಾವಿರದಿಂದ 1,500 ವಾಹನ ಸಂಚಾರ ನಿಯಮ ಉಲ್ಲಂಘನೆ ಮತ್ತು ದಂಡ ವಿಧಿಸಲಾಗುತ್ತಿದೆ. ಆದರೀಗ ಟ್ರಾಫಿಕ್ ಚಲನ್ ಪಾವತಿಯನ್ನು ಸುಲಭಗೊಳಿಸಲು ವಾಟ್ಸ್ಆ್ಯಪ್ ಮುಂದಾಗಿದೆ.
ವಾಟ್ಸ್ಆ್ಯಪ್ ಸೇವೆಯ ಹೊರತಾಗಿ ಚಾಲನಾ ಪರವಾನಗಿ ಪ್ರಕ್ರಿಯೆಯನ್ನು ಸಂಪೂರ್ಣ ಆನ್ಲೈನ್ ಮಾಡಲು ಸಾರಿಗೆ ಇಲಾಖೆಯು ಯೋಚಿಸಿದೆ. ಶೀಘ್ರದಲ್ಲೇ ಈ ಸೇವೆ ಜಾರಿಗೆ ಬರಲಿದೆ. ಜನರು ಸಾರಿಗೆ ಕಚೇರಿಗೆ ಭೆಟಿ ನೀಡದೆಯೇ ತಮ್ಮ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಅಥವಾ ನವೀಕರಿಸಲು ಸಾಧ್ಯವಾಗಲಿದೆ.