ದಯವಿಟ್ಟು ನನಗೆ ಒಂದು ಕೊನೆಯ ಚಾನ್ಸ್ ಕೊಡಿ ಎಂದಿದ್ದರು
ಯುವ ಕ್ರಿಕೆಟಿಗರ ಪಾಲಿಗಂತೂ ಈತನ ಕಥೆ ಸ್ಫೂರ್ತಿಯ ಚಿಲುಮೆ
ಚಾನ್ಸ್ ಕೊಡಿ ಎಂದಿದ್ದ ಯುವ ಆಟಗಾರನ ಮೇಲೆ ಆರ್ಸಿಬಿ ಕಣ್ಣು
ಈತ ಆರ್ಸಿಬಿ ಪಾಲಿನ ಅದೃಷ್ಟವಂತ.. ಈತ ತಂಡಕ್ಕೆ ಎಂಟ್ರಿಕೊಟ್ಟಿದ್ದೇ, ಕೊಟ್ಟಿದ್ದು ಆರ್ಸಿಬಿ ಸೋಲು ಅನ್ನೋದನ್ನೇ ನೋಡಿಲ್ಲ. ಕಳೆದ ಸೀಸನ್ನಲ್ಲಿ ಸತತ 7 ಪಂದ್ಯಗಳ ದಿಗ್ವಿಜಯದ ಹಿಂದೆ ಈ ಲಕ್ಕಿಮ್ಯಾನ್ ಶ್ರಮ ಅಪಾರ. ಇವರು ಯಾರು ಅಲ್ಲ RCBಯ ನಯಾ ಸೆನ್ಸೇಷನ್ ಸ್ವಪ್ನಿಲ್ ಸಿಂಗ್ ಬಗ್ಗೆ. ಆರ್ಸಿಬಿ ಪಾಲಿನ ಅದೃಷ್ಟವಂತನಾಗಿರೋ ಈತ ಬಹುತೇಕರಿಗೆ ಯಾರು ಅಂತಾನೇ ಗೊತ್ತಿಲ್ಲ. ಈತನ ಕ್ರಿಕೆಟ್ ಜರ್ನಿ ನಿಜಕ್ಕೂ ರೋಚಕ. ಯುವ ಕ್ರಿಕೆಟಿಗರ ಪಾಲಿಗಂತೂ ಈತನ ಕಥೆ ಸ್ಫೂರ್ತಿಯ ಚಿಲುಮೆ.
ಸ್ವಪ್ನಿಲ್ ಸಿಂಗ್.. ಐಪಿಎಲ್ ಮಿನಿ ಆಕ್ಷನ್ನಲ್ಲಿ ಈ ಸ್ಪಿನ್ನರ್ನ ಆರ್ಸಿಬಿ ಖರೀದಿಸಿದಾಗ ಹೆಚ್ಚು ಚರ್ಚೆಯಾಗದ ಹೆಸರಿದು. ಯಾರೋ ಒಬ್ಬ ಪ್ಲೇಯರ್ ಎಂದು NEGLECT ಮಾಡಿದವರೇ ಹೆಚ್ಚು. ಇಂದು ಈತನೇ ಸೆನ್ಸೇಷನ್. ಆರ್ಸಿಬಿ ಪಾಲಿನ ಅದೃಷ್ಟವಂತನಾಗಿದ್ದಾನೆ. ಈತ ಆಡಿದ ಎಲ್ಲಾ ಪಂದ್ಯಗಳಲ್ಲಿ ತಂಡವೂ ಜಯ ಸಾಧಿಸಿದೆ. ಸಿಕ್ಕ ಚಾನ್ಸ್ನಲ್ಲಿ ಸ್ವಪ್ನಿಲ್ ಕೂಡ ಭರ್ಜರಿ ಪರ್ಫಾಮೆನ್ಸ್ ನೀಡಿದ್ದಾರೆ. ಆದರೆ, ಮುಂದಿನ ಸೀಸನ್ಗೆ ಆರ್ಸಿಬಿ ತಂಡದಿಂದಲೇ ಈತನನ್ನು ಕೈ ಬಿಟ್ಟಿದೆ. ಮೆಗಾ ಹರಾಜಿನಲ್ಲಿ ಹೇಗಾದ್ರೂ ಮಾಡಿ ಖರೀದಿ ಮಾಡಬೇಕು ಎಂದು ಮುಂದಾಗಿದೆ.
ಮೆಗಾ ಆಕ್ಷನ್ನಲ್ಲಿ ಸ್ವಪ್ನಿಲ್ಗೆ ಮಣೆ
ಆರ್ಸಿಬಿ ತಂಡ ಈ ಸಲ ಮೆಗಾ ಹರಾಜಿನಲ್ಲಿ ಸ್ವಪ್ನಿಲ್ ಸಿಂಗ್ ಅವರನ್ನು ಖರೀದಿ ಮಾಡಲಿದೆ. ಇಲ್ಲದೆ ಹೋದಲ್ಲಿ ಆರ್ಟಿಎಂ ಕಾರ್ಡ್ ಬಳಸೋ ಮೂಲಕ ತಂಡದಲ್ಲೇ ಉಳಿಸಿಕೊಳ್ಳಬಹುದು.
ಕಳೆದ ಸಲ ಆಕ್ಷನ್ನಲ್ಲಿ ಮೊದಲ ರೌಂಡ್ನಲ್ಲಿ ಅನ್ಸೋಲ್ಡ್ ಆದ ಬೆನ್ನಲ್ಲೇ, ಸ್ವಪ್ನಿಲ್ ಯಾಕೆ ಕ್ರಿಕೆಟ್ಗೆ ಗುಡ್ ಬೈ ಹೇಳುವ ಕಠಿಣ ನಿರ್ಧಾರ ಮಾಡಿದ್ರು ಅನ್ನೋ ಪ್ರಶ್ನೆ ನಿಮ್ಮನ್ನ ಕಾಡಿರಬಹುದು. ಈ ನಿರ್ಧಾರದ ಹಿಂದೆ ಒಂದು ಪ್ರಿ ಸೀಸನ್ ಕ್ಯಾಂಪ್ನ ಕಥೆಯಿದೆ.
ಒಂದು ಚಾನ್ಸ್ ಕೊಡಿ ಎಂದಿದ್ದ ಸ್ವಪ್ನಿಲ್
ಸೀಸನ್ಗೂ ಮುನ್ನ ಒಂದು ಟ್ರಯಲ್ ಕ್ಯಾಂಪ್ ಇತ್ತು. ನಾನು ಆಗ ಕೋಚ್ ಆ್ಯಂಡಿ ಸರ್ಗೆ ನನ್ನ ಸೀಸನ್ ಹೇಗಾಗಿದೆ ಎಂದು ತಿಳಿಸಿದೆ. ಆ ಬಳಿಕ ನಾನು ಕೇಳಿದ್ದು ಒಂದೇ ಮಾತು ದಯವಿಟ್ಟು ನನಗೆ ಒಂದು ಚಾನ್ಸ್ ಕೊಡಿ. ಇದು ಬಹುತೇಕ ನನ್ನ ಕೊನೆಯ ಅವಕಾಶ ಎಂದು. ಅವ್ರು ಹೇಳಿದ್ರು ನಿನ್ನ ಮೇಲೆ ಭರವಸೆ ಇದೆ ಅಂತಾ. ಆದ್ರೆ, ಹೇಗೆ ಹೋಗುತ್ತೆ ಅನ್ನೋದನ್ನು ನೋಡಬೇಕು ಅಂದಿದ್ರು.
33ರ ಗಡಿ ದಾಟಿರೋ ಸ್ವಪ್ನಿಲ್, ಡೊಮೆಸ್ಟಿಕ್ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿದ್ರು. ಹೀಗಾಗಿಯೇ ಕಳೆದ ಸೀಸನ್ನಲ್ಲಿ ಐಪಿಎಲ್ ಆಡದಿದ್ರೆ, ಗುಡ್ ಬೈ ಹೇಳಿ ಬೇರೆ ಹಾದಿ ಹಿಡಿಯೋ ಲೆಕ್ಕಾಚಾರದಲ್ಲಿದ್ರು. ಕೊನೆ ಕ್ಷಣದಲ್ಲಿ ಆರ್ಸಿಬಿ ಸ್ವಪ್ನಿಲ್ಗೆ ಮಣೆ ಹಾಕ್ತು. ಆ ಘಳಿಗೆಯನ್ನ ನೆನೆದ್ರೆ ಈಗಲೂ ಸ್ವಪ್ನಿಲ್ ಕಣ್ಣಂಚಲ್ಲಿ ನೀರು ಜಿನುಗುತ್ತೆ.
ಸ್ವಪ್ನಿಲ್ ಸಿಂಗ್ ಒಂದೇ ಬಾರಿ ಸಕ್ಸಸ್ನ ರುಚಿ ಕಂಡ ಕ್ರಿಕೆಟರ್ ಅಲ್ಲ. ಕಲ್ಲು ಮುಳ್ಳಿನ ಹಾದಿ ಸವೆಸಿ, ಅವಮಾನಗಳನ್ನ ಎದುರಿಸಿ ಬಂದ ಕ್ರಿಕೆಟಿಗ. ಚೆನ್ನಾಗಿ ಆಡಿದ್ರೂ ಚಾನ್ಸ್ ಸಿಗದೇ ತಂಡದಿಂದಲೇ ಹೊರ ತಳ್ಳಲ್ಪಟ್ಟ ಕ್ರಿಕೆಟಿಗ.
ಆರ್ಸಿಬಿಯಿಂದ ಬಂತು ಲಕ್
ನಾನು ಇದಕ್ಕೂ ಮೊದಲು ಐಪಿಎಲ್ನಲ್ಲಿ ಫೋರ್, ಸಿಕ್ಸ್ ಹೊಡೆದಿರಲಿಲ್ಲ. ಕೇವಲ ಒಂದು ವಿಕೆಟ್ ತೆಗೆದಿದ್ದೆ. ನನಗೆ ಒಂದು ಫೋರ್, ಸಿಕ್ಸ್ ಹೊಡೆಯೋ ಆಸೆಯಿತ್ತು. ನನ್ನ ಬಳಿ ವಿಕೆಟ್ ಅಂತೂ ಇತ್ತು ಎನ್ನುತ್ತಾರೆ ಅವರು.
ಡೊಮೆಸ್ಟಿಕ್ ಟೀಮ್ನಲ್ಲೂ ಸ್ಥಾನ ಕಳೆದುಕೊಂಡ ಸ್ವಪ್ನಿಲ್ಗೆ ಲಕ್ನೋ ತಂಡದಲ್ಲೋ ಆಡೋ ಚಾನ್ಸ್ ಸಿಗಲಿಲ್ಲ. ಆದ್ರೇ ದೇವರ ಆಶಿರ್ವಾದವೋ ಏನೋ ಈ ಬಾರಿ ಆರ್ಸಿಬಿ ಮಣೆ ಹಾಕ್ತು. ಒಂದು ಫೋರ್, ಒಂದು ಸಿಕ್ಸರ್ ಹೊಡೆಯೋ ಆಸೆಯನ್ನಿಟ್ಟುಕೊಂಡು ಬಂದ ಈ ಸ್ವಪ್ನಿಲ್ ಸಿಂಗ್, ಮೊದಲ ಪಂದ್ಯದಲ್ಲೇ ಆ ಸಾಧನೆ ಮಾಡಿಬಿಟ್ರು. ಇಷ್ಟೇ ಅಲ್ಲ.. ಆರ್ಸಿಬಿಯ ಅದೃಷ್ಟವನ್ನೇ ಬದಲಾಯಿಸಿದ್ದಾರೆ.