ನೂರು, ಎರಡು ನೂರು ಅಲ್ಲ ಸಾವಿರಮಟ್ಟದಲ್ಲಿ ನೇಮಕಾತಿ
ಪೋಸ್ಟ್ ಇಲಾಖೆಯಲ್ಲಿ ಯಾವ್ಯಾವ ಉದ್ಯೋಗಳಿಗೆ ಅರ್ಜಿ?
ಅಂಚೆ ಇಲಾಖೆಯಲ್ಲಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಹೇಗಿದೆ?
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತ ಉದ್ಯೋಗಗಳಿಗೆ ಶೀಘ್ರದಲ್ಲೇ ಅರ್ಜಿಗಳನ್ನು ಕರೆಯಲಾಗುವುದು. ನೂರು, ಎರಡು ನೂರು ಉದ್ಯೋಗಗಳನ್ನ ಇಲಾಖೆ ಕರೆಯುವುದಿಲ್ಲ. ಬದಲಿಗೆ ಸಾವಿರ.. ಸಾವಿರಗಟ್ಟಲೇ ಹೊಸ ನೇಮಕಾತಿಗಳನ್ನು ಮಾಡಲಾಗುತ್ತದೆ. ಇದಕ್ಕಾಗಿ ಅಂಚೆ ಇಲಾಖೆಯು ಹಲವಾರು ಸಿದ್ಧತೆ ನಡೆಸಿದ್ದು ಸದ್ಯದಲ್ಲಿ 2024ರ ನೇಮಕಾತಿ ಅನ್ನು ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ.
ಅಂಚೆ ಇಲಾಖೆಯಲ್ಲಿ ದೇಶದ್ಯಾಂತ ಖಾಲಿ ಇರುವಂತ ಪೋಸ್ಟ್ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS), ಮೇಲ್ ಗಾರ್ಡ್ (Mail Guard) ಹುದ್ದೆಗಳು ಸೇರಿ ಒಟ್ಟು 37,539 ಉದ್ಯೋಗಗಳನ್ನ ಇಲಾಖೆ ಆಹ್ವಾನ ಮಾಡಲಿದೆ ಎನ್ನಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಚೆ ಇಲಾಖೆ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದರಿಂದ ಪರೀಕ್ಷೆ ಕೂಡ ಅಷ್ಟೇ ಕಷ್ಟವಾಗಿರುತ್ತದೆ. ಏಕೆಂದರೆ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ ಮಾಡುವುದರಿಂದ ಇಲಾಖೆ ಪರೀಕ್ಷೆಯನ್ನ ಕಠಿಣವಾಗಿಸುತ್ತದೆ ಎನ್ನಲಾಗಿದೆ.
ಇಂಡಿಯನ್ ಪೋಸ್ಟ್ ಉದ್ಯೋಗಗಳನ್ನು ಆಹ್ವಾನ ಮಾಡಿದ ಮೇಲೆ ಎಲ್ಲ ಅಭ್ಯರ್ಥಿಗಳು ಅಧಿಕೃತ ಇಲಾಖೆ ವೆಬ್ಸೈಟ್ (www.indiapost.gov.in) ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬೇಕು. ವಯಸ್ಸಿನ ಅರ್ಹತೆಯನ್ನು ಇದಕ್ಕೆ ನಿಗದಿ ಮಾಡಲಾಗಿರುತ್ತದೆ. 18 ವರ್ಷದಿಂದ 32 ವರ್ಷದ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿರುತ್ತದೆ. ಅರ್ಜಿ ಶುಲ್ಕ ಕೇವಲ 100 ರೂಪಾಯಿ ನಿಗದಿ ಮಾಡಬಹುದು. ಅಭ್ಯರ್ಥಿಗಳು ಅಪ್ಲೇ ಮಾಡುವುದಕ್ಕಿಂತ ಮೊದಲು ಎಲ್ಲ ಕಂಡಿಷನ್ಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ
ಇನ್ನು ಅಂಚೆ ಇಲಾಖೆಯಲ್ಲಿ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ನೋಡುವುದಾದರೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ ಮೇಲೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದವರನ್ನು ದಾಖಲಾತಿ ಪರಿಶೀಲನೆಗೆ ಆಹ್ವಾನ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆ ಆದ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ ಕೊನೆಗೆ ಕೇಂದ್ರ ಸರ್ಕಾರದಡಿಯ ಪೋಸ್ಟ್ ಆಫೀಸ್ನಲ್ಲಿ ನೇಮಕಾತಿ ಮಾಡಲಾಗುತ್ತದೆ.
ಅರ್ಜಿಗಳಿಗೆ ಸಂಬಂಧಿಸಿದ ಆರಂಭ, ಕೊನೆ ದಿನಾಂಕಗಳನ್ನು ಅಂಚೆ ಇಲಾಖೆ ರಿಲೀಸ್ ಮಾಡುವ ನೋಟಿಫಿಕೇಶನ್ ನಂತರ ಇಲ್ಲಿ ನೀಡಲಾಗುವುದು. ಇನ್ನು ವಯೋಮಿತಿ ಸಡಿಲಿಕೆಯೂ ಉದ್ಯೋಗಗಳಿಗೆ ಅರ್ಜಿ ಕರೆದ ಬಳಿಕವೇ ಗೊತ್ತಾಗಲಿದೆ. ಹೀಗಾಗಿ ಅಭ್ಯರ್ಥಿಗಳು ಈಗಿನಿಂದಲೇ ಪೋಸ್ಟ್ ಆಫೀಸ್ ಉದ್ಯೋಗಗಳಿಗೆ ಸೂಕ್ತ ತಯಾರಿ ನಡೆಸಬೇಕು.